Advertisement

ತೃಪ್ತಿಕರ ಸೇವೆ ಪಡೆವ ಹಕ್ಕು ಗ್ರಾಹಕರಿಗಿದೆ

12:10 PM Mar 19, 2018 | Team Udayavani |

ಪಿರಿಯಾಪಟ್ಟಣ: ಗ್ರಾಹಕರಿಗೆ ತೃಪ್ತಿಕರ ಸೇವೆ ನೀಡದಿದ್ದಲ್ಲಿ ಅಂತಹ ಸೇವಕರ ವಿರುದ್ಧ ದಂಡ ವಿಧಿಸುವ ಅಥವಾ ತೃಪ್ತಿಕರ ಸೇವೆ ಪಡೆಯುವ ಹಕ್ಕು ಗ್ರಾಹಕರಿಗಿದೆ ಇದಕ್ಕಾಗಿ ಪ್ರತಿಯೊಂದು ಸೇವೆಗಳಿಗೂ ಒಂಬಡ್ಸ್‌ಮನ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ತಿಳಿಸಿದರು.

Advertisement

ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಗ್ರಾಮದಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಹಿಂದಿನ ಸಮಾಜದಲ್ಲಿ ವಸ್ತುಗಳ ಉತ್ಪಾದನೆ ಮಾನವನೆ ಮಾಡಿಕೊಳ್ಳುತ್ತಿದ್ದು ಹೆಚ್ಚಾದ ವಸ್ತುಗಳನ್ನು ನೀಡಿ ಹಣಪಡೆಯತ್ತಿದ್ದ. ಆದರೆ ಈಗ ಎಲ್ಲಾ ರೀತಿಯ ಸೇವೆಗಳನ್ನು ಪಡೆಯುವರನ್ನು ಗ್ರಾಹಕರು ಎಂದೆ ಪರಿಗಣಿಸಲಾಗುತ್ತಿದೆ. ಸರ್ಕಾರ ಸೇವೆಗಳನ್ನು ಈಗ ಗ್ರಾಹಕರು ಎಂದು ಪರಿಗಣಿಸಿ ಶೀಘ್ರದಲ್ಲಿ ತಲುಪಿಸುವ ವ್ಯವಸ್ಥೆ ಕೂಡ ಜಾರಿಯಾಗಿದೆ ಎಂದು ಹೇಳಿದರು.

ಮನುಷ್ಯ ಸೇವನೆಗೆ ಯೋಗ್ಯವಲ್ಲದ ವಸ್ತುಗಳೂ ನಗರ ಪ್ರದೇಶ ಗ್ರಾಮೀಣ ಪ್ರದೇಶಗಳಲ್ಲಿಯೂ ಮಾರಾಟವಾಗುತ್ತಿದೆ. ಅವಧಿ ಮುಗಿದ ಆಹಾರ ಪದಾರ್ಥಗಳ ಸೇವನೆ ಬಹು ಮಾರಕವಾಗಿದೆ. ಹೀಗಾಗಿ  ಎಲ್ಲಾ ಗ್ರಾಹಕರ ವಂಚನೆಯ ವಿರುದ್ಧ ಪೊಲೀಸರಿಗೆ ದೂರು ನೀಡಬಹುದಾಗಿದೆ ಇದನ್ನು ಸದುಪಯೋಗಪಡಿಸಿಕೊಂಡು ಗ್ರಾಹಕರು ಜಾಗೃತರಾಗಬೇಕು ಈ ಮೂಲಕ ಒಳ್ಳೆಯ ದೇಶ ನಿರ್ಮಾಣ ವಾಗಬೇಕು ಎಂದರು.

ಹುಣಸೂರು ಉಪವಿಭಾಗಾಧಿಕಾರಿ ಕೆ.ನಿತೀಶ್‌ ಮಾತನಾಡಿ, ಗ್ರಾಹಕರ ಹಕ್ಕುಗಳನ್ನು ಮನವರಿಕೆ ಮಾಡಿಕೊಡುವುದು ಮತ್ತು ಹಕ್ಕುಗಳನ್ನು ಚಲಾವಣೆ ಮಾಡಲು ಅನುಕೂಲಕರ ವಾತಾವರಣ ನಿರ್ಮಿಸಿಕೊಳ್ಳುವುದೆ ಗ್ರಾಹಕರ ದಿನಾಚರಣೆ ಉದ್ದೇಶವಾಗಿದೆ. ಆನ್‌ಲೈನ್‌ ಖರೀದಿಯಲ್ಲಿ ವಂಚನೆಗೆ ಒಳಗಾದಾಗ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಸಮರ್ಪಕ ದಾಖಲೆಗಳನ್ನು ನೀಡಿ ನ್ಯಾಯ ಪಡೆಯಬಹುದಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಆಹಾರ ಇಲಾಖೆ ಜಿಲ್ಲಾ ಉಪನಿದೇರ್ಶಕ ಕಾ.ರಾಮೇಶ್ವರಪ್ಪ ಮಾತನಾಡಿದರು. ತಹಸೀಲ್ದಾರ್‌ ಜೆ.ಮಹೇಶ್‌, ಗ್ರಾ.ಪಂ.ಅಧ್ಯಕ್ಷ ಎಸ್‌.ಡಿ.ಸುನಂದ್‌, ಉಪಾಧ್ಯಕ್ಷ ಸಬೀನಾಬಾನು,  ಗಿರಿಜನ ಸಮನ್ವಯಾಧಿಕಾರಿ ಶಿವಕುಮಾರ್‌, ಆಹಾರ ಶಿರಸ್ಥೆದಾರ್‌ ಸಣ್ಣಸ್ವಾಮಿ, ಗ್ರಾ.ಪಂ.ಸದಸ್ಯರಾದ ನಂದೀಶ್‌, ರಾಜಮ್ಮ, ಸೀತಮ್ಮ  ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next