Advertisement

ಜ.13ರ ಬಳಿಕವೂ ಬಂಕ್‌ಗಳಲ್ಲಿ ಕಾರ್ಡ್‌ ಬಳಕೆಗೆ ಶುಲ್ಕ ಇಲ್ಲ

03:45 AM Jan 10, 2017 | |

ಹೊಸದಿಲ್ಲಿ: ಪೆಟ್ರೋಲ್‌ ಬಂಕ್‌ಗಳಲ್ಲಿ ಕಾರ್ಡ್‌ ಮೂಲಕ ಹಣ ಪಾವತಿ ಕುರಿತಂತೆ ಎದ್ದಿದ್ದ ಗೊಂದಲ ಬಹುತೇಕ ಬಗೆಹರಿದಿದೆ. ಗ್ರಾಹಕರು ಕಾರ್ಡ್‌ ಬಳಸಿ ಪೆಟ್ರೋಲ್‌, ಡೀಸೆಲ್‌ ಖರೀದಿಸಬಹುದು. ಜ. 13ರ ಅನಂತರವೂ ಅದು ಮುಂದುವರಿಯಲಿದೆ. ಈಗ ಇರುವ ಶೇ. 0.75 ಕ್ಯಾಶ್‌ಬ್ಯಾಕ್‌ ಆಫ‌ರ್‌ ಕೂಡ ಸ್ಥಗಿತ ಗೊಳ್ಳುವುದಿಲ್ಲ. ಬಂಕ್‌ಗಳಲ್ಲಿ ಡಿಜಿಟಲ್‌ ವ್ಯವ ಹಾರ ಮಾಡುವವರಿಗೆ ಭವಿಷ್ಯದಲ್ಲೂ ವಹಿವಾಟು ಶುಲ್ಕ ವಿಧಿಸುವ ಪ್ರಸ್ತಾವವಿಲ್ಲ ಎಂದು ಕೇಂದ್ರ ಸರಕಾರ ಘೋಷಿಸಿದೆ. 

Advertisement

ಮತ್ತೂಂದೆಡೆ, ಗ್ರಾಹಕರು ಕಾರ್ಡ್‌ ಬಳಸಿ ಪಾವತಿ ಮಾಡಿದರೆ ಪೆಟ್ರೋಲ್‌ ಬಂಕ್‌ಗಳಿಗೆ ವಿಧಿಸಲಾಗುವ ಶೇ.1ರಷ್ಟು ವಹಿವಾಟು ಶುಲ್ಕವನ್ನು ಯಾರು ಭರಿಸಬೇಕು ಎಂಬ ವಿಚಾರವಾಗಿ ತೈಲ ಕಂಪೆನಿಗಳು ಹಾಗೂ ಬ್ಯಾಂಕ್‌ಗಳ ನಡುವೆ ಮಾತುಕತೆ ನಡೆಯುತ್ತಿದೆ. ಸರಕಾರವಂತೂ ಈ ಹಣ ನೀಡುವುದಿಲ್ಲ. ಪೆಟ್ರೋಲ್‌ ಬಂಕ್‌ಗಳು ಕಮಿಷನ್‌ ಏಜೆಂಟ್‌ ಆಗಿ ಕೆಲಸ ಮಾಡುವುದರಿಂದ ಅವುಗಳ ಮೇಲೂ ಹೊರೆ ಹೇರುವುದಿಲ್ಲ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಸೋಮವಾರ ಪತ್ರಕರ್ತರಿಗೆ ತಿಳಿಸಿದರು.

ಕಾರ್ಡ್‌ ಮೂಲಕ ಹಣ ಸ್ವೀಕರಿಸುವ ಪೆಟ್ರೋಲ್‌ ಬಂಕ್‌ಗಳಿಗೆ ಶೇ. 1ರಷ್ಟು ವಹಿವಾಟು ಶುಲ್ಕವನ್ನು ಸೋಮವಾರದಿಂದ ವಿಧಿಸಲು ಬ್ಯಾಂಕ್‌ಗಳು ನಿರ್ಧರಿಸಿದ್ದವು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪೆಟ್ರೋಲಿಯಂ ವಿತರಕರು, ರವಿವಾರ ಮಧ್ಯರಾತ್ರಿಯಿಂದಲೇ ಕಾರ್ಡ್‌ ಮೂಲಕ ಹಣ ಸ್ವೀಕಾರ ನಿಲ್ಲಿಸಲು ನಿರ್ಧರಿಸಿದ್ದರು. ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿದ ಬಳಿಕ ಐದು ದಿನಗಳ ಕಾಲ ತಮ್ಮ ನಿರ್ಧಾರವನ್ನು ಬ್ಯಾಂಕ್‌ಗಳು ಮುಂದೂಡಿದ್ದವು. ಈಗ ಶುಲ್ಕ ಕುರಿತಂತೆ ಬ್ಯಾಂಕ್‌ಗಳು ಹಾಗೂ ತೈಲ ಕಂಪೆನಿಗಳ ನಡುವೆ ಮಾತುಕತೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next