Advertisement
ಮಡಿಕೇರಿ ತಾಲೂಕಿನ ಮಕ್ಕಂದೂರು ಹಾಗೂ ಎರಡನೇ ಮೊಣ್ಣಂಗೇರಿ ಗ್ರಾಮದಲ್ಲಿ ಕಿ.ಮೀ. ನಷ್ಟು ದೂರ ಭೂಮಿ ಬಿರುಕು ಬಿಟ್ಟಿದ್ದು, ದಿನದಿಂದ ದಿನಕ್ಕೆ ಇದರ ದೂರ ವ್ಯಾಪಿಸುತ್ತಲೇ ಇದೆ. ಮಕ್ಕಂದೂರು ದೇವಾಲಯದಿಂದ ಸ್ವಲ್ಪ ದೂರದಲ್ಲಿ ಭೂಮಿ ಬಾಯಿ ಬಿಡುತ್ತಿರುವುದರಿಂದ ಮಂಜುನಾಥ್ ಅವರಿಗೆ ಸೇರಿದ ಹಂಚಿನ ಮನೆ ಸಂಪೂರ್ಣವಾಗಿ ಬಿರುಕು ಬಿಟ್ಟಿದ್ದು, ಅಪಾಯದ ಮುನ್ಸೂಚನೆಯನ್ನು ನೀಡಿದೆ. ಸುಮಾರು 15 ಲಕ್ಷ ರೂ.ವೆಚ್ಚದ ಈ ಮನೆ ಅಡಿಪಾಯದಿಂದಲೇ ಬಿರುಕು ಬಿಟ್ಟು ಮೇಲ್ಚಾವಣಿಯವರೆಗೂ ಗೋಡೆ ಬೀಳುವ ಸ್ಥಿತಿಯಲ್ಲಿದೆ. ಮನೆಯ ಪಕ್ಕದಲ್ಲಿರುವ ತೋಟದಿಂದಲೇ ಭೂಮಿ ಬಿರುಕು ಬಿಟ್ಟಿದ್ದು, ಇದು ಮನೆಯ ಭಾಗವನ್ನೂ ವ್ಯಾಪಿಸಿದೆ.
2ನೇ ಮೊಣ್ಣಂಗೇರಿಯಲ್ಲೂ
ಮತ್ತೂಂದೆಡೆ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾ.ಪಂ ವ್ಯಾಪ್ತಿಯ ಎರಡನೇ ಮೊಣ್ಣಂಗೇರಿಯಲ್ಲಿ ಭೂಮಿ ಬಾಯೆ¤ರೆದಿದೆ. ಈ ಹಿಂದೆ ಬಿರುಕುಬಿಟ್ಟ ಸ್ಥಳದಲ್ಲಿಯೇ ಭೂಮಿ ಬಿರುಕು ಬಿಟ್ಟು ಆತಂಕ ಮೂಡಿಸಿದೆ. ಬೆಟ್ಟ-ಗುಡ್ಡಗಳಿಂದ ಕೂಡಿರುವ ಪ್ರದೇಶವಾಗಿರುವ ಎರಡನೇ ಮೊಣ್ಣಂಗೇರಿ ಯಲ್ಲಿ ಭೂಮಿ ಸುಮಾರು ಎರಡು ಕಿ.ಮೀ ವರೆಗೆ ಬಿರುಕುಬಿಟ್ಟಿದೆ. ಮೂರು ದಿನಗಳ ಹಿಂದೆ ಸಣ್ಣದಾಗಿ ಬಿರುಕು ಬಿಟ್ಟಂತೆ ಗೋಚರಿಸಿದ ಭೂಮಿಯಲ್ಲಿ ಈಗ ದೊಡ್ಡದಾಗಿ ಬಿರುಕು ಕಾಣಿಸಿಕೊಂಡಿದೆ. ಕಾಂಕ್ರೀಟ್ ರಸ್ತೆ ಕೂಡ ಸೀಳಿ ಹೋಗಿದ್ದು, ಸುಮಾರು 4 ಇಂಚುಗಳಷ್ಟು ಅಗಲದಲ್ಲಿ ಬಿರುಕು ಬಿಟ್ಟಿದೆ. ಸ್ಥಳೀಯ ನಿವಾಸಿ ಬಾಬು ಪೂಜಾರಿ ಎಂಬುವವರ ಮನೆಯ ಅಂಗಳದ ಮೂಲಕ ಬಿರುಕು ಮೂಡಿದ್ದು, ಮನೆಗೆ ಯಾವುದೇ ಹಾನಿಯಾಗಿಲ್ಲ.
Related Articles
Advertisement
ಅತಿವೃಷ್ಟಿ ಆತಂಕ ಇನ್ನೂ ಇದೆ ಜಿಲ್ಲೆಯಲ್ಲಿ ಗಾಳಿ, ಮಳೆ ಕಡಿಮೆ ಯಾಗಿದ್ದರೂ ಮಡಿಕೇರಿ ತಾಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಶೀತಗಾಳಿ, ಮಳೆ ಗ್ರಾಮೀಣ ಭಾಗದಲ್ಲಿ ಆತಂಕವನ್ನು ಹೆಚ್ಚಿಸಿದೆ. ಕಳೆದ ಒಂದು ತಿಂಗಳ ಮಹಾಮಳೆಯಿಂದ ಭೂಮಿ ಮೆದುವಾಗಿ ಅಪಾಯದಂಚಿನಲ್ಲಿದೆ. ಪರಿಸ್ಥಿತಿ ಹೀಗಿರುವಾಗಲೇ ನಿರಂತರ ಸಾಧಾರಣ ಮಳೆಯಾಗುತ್ತಿರುವುದರಿಂದ ಭೂಮಿಯಲ್ಲಿ ಬಿರುಕು ಹೆಚ್ಚಾಗುತ್ತಿದೆ. ಗ್ರಾಮೀಣರಲ್ಲಿ ಅವೃಷ್ಟಿಯ ಆತಂಕ ಮುಂದುವರೆದಿದ್ದು, ನುರಿತ ಅಧಿಕಾರಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಜಿ.ಪಂ.ಅಧ್ಯಕ್ಷರ ಭೇಟಿ,ಪರಿಶೀಲನೆ
ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್ ಸ್ಥಳಕ್ಕೆ ಭೇಟಿ ನೀಡಿದ್ದು, ಅಂತರ್ಜಲ ಮಟ್ಟ ಹೆಚ್ಚಾಗಿ, ಜಲ ಉಕ್ಕುತ್ತಿರುವುದರಿಂದ ಭೂಮಿ ಬಿರುಕು ಬಿಡುತ್ತಿದೆ ಮತ್ತು ಮನೆಗೆ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಮಕ್ಕಂದೂರು ಗ್ರಾ.ಪಂ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡ ಭೇಟಿ ನೀಡಿದ್ದು, ಮಂಜುನಾಥ್ ಅವರಿಗೆ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ. ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಮನೆಯನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಮಂಜುನಾಥ್ ದು:ಖ ವ್ಯಕ್ತಪಡಿಸಿದ್ದಾರೆ. ಅಂತರ್ಜಲ ಕಾರಣ
ಅಧಿಕ ಮಳೆಯಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ, ಮಳೆ ಕಡಿಮೆಯಾದ ಬಳಿಕ ಯಥಾ ಸ್ಥಿತಿಗೆ ಮರಳಲಿದೆ ಕಳೆದ ವರ್ಷದ ಮಳೆಗೂ ಹೀಗೆ ಆಗಿತ್ತು
– ರೇಷ್ಮಾ
ಭೂ ,ಗಣಿ ವಿಜ್ಞಾನ ಇಲಾಖೆ ಅಧಿಕಾರಿ