Advertisement

ಕೈಗಳ ಸೌಂದರ್ಯವನ್ನು ವರ್ಧಿಸುವ ಮೆಹಂದಿಯಲ್ಲಿದೆ ಹಲವಾರು ಔಷದೀಯ ಗುಣಗಳು

08:20 PM May 24, 2020 | mahesh |

ಕೆಂಪನೆ ಕೈತುಂಬ ಸಿಂಗಾರ ರಾಚುವ ಮದರಂಗಿಗೆ ಮನಸೋಲದ ಹೆಂಗಳೆಯರಿಲ್ಲ, ಮದುವೆ, ಸಮಾರಂಭಗಳಲ್ಲಂತು ಗೋರಂಟಿ ಇಲ್ಲ ಅಂದ್ರೆ ಕಳೆಯೇ ಇಲ್ಲ. ಆದರೆ ಮೆಹಂದಿ ಕೇವಲ ಸಿಂಗಾರಕ್ಕೆ ಮಾತ್ರ ಅಲ್ಲ, ಅದರಲ್ಲಿರುವ ಸಾಕಷ್ಟು ಔಷದೀಯ ಗುಣಗಳು ಹಲವಾರು ಆರೋಗ್ಯ ಸಂಬಂಧಿ ತೊಂದರೆಗಳನ್ನ ನಿವಾರಿಸಲು ನೆರವಾಗುತ್ತದೆ. ಬೇಸಿಗೆಯಲ್ಲಿ ಕೂದಲನ್ನು ಮತ್ತು ದೇಹವನ್ನು ತಂಪಾಗಿಸುವಲ್ಲಿ ಹೆಚ್ಚು ಬಳಕೆಯಲ್ಲಿರೋ ಮೆಹಂದಿಯನ್ನು ಉಪಯೋಗಿಸಿಕೊಂಡು ಹೇಗೆ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬಹುದು ಎಂದು ತಿಳಿಯೋಣ…

Advertisement

ಕೂದಲಿನ ರಕ್ಷಕ
ಮೆಹಂದಿ ಎಲೆಗಳನ್ನು ಪುಡಿ ಮಾಡಿ ಅಥವಾ ಪೇಸ್ಟ್ ರೀತಿ ಮಾಡಿ ಕೂದಲಿಗೆ ಹಚ್ಚುತ್ತಾರೆ. ಇದು ಕೂದಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಮೆಹಂದಿಯ ಪೇಸ್ಟನ್ನು ವಾರಕ್ಕೊಮ್ಮೆಯಾದರು ಕೂದಲಿಗೆ ಲೇಪಿಸುವುದರಿಂದ ತಲೆ ಹೊಟ್ಟನ್ನು (ಡ್ಯಾಂಡ್ರಫ್) ನಿವಾರಿಸಬಹುದು, ಜೊತೆಗೆ ಕೂದಲಿಗೆ ಹೊಳಪು ಬರುತ್ತದೆ ಮತ್ತು ಕೂದಲಿನ ಆಯಸ್ಸು ಹೆಚ್ಚುತ್ತದೆ. ಇದರ ಜೊತೆಗೆ ಬಿಳಿ ಕೂದಲನ್ನು ಕಂದು ಕೂದಲಾಗಿ ಪರಿವರ್ತಿಸಲು ಮೆಹಂದಿ ಉಪಯೋಗಕ್ಕೆ ಬರುತ್ತದೆ. ಈಗಾಗಿ ಕೂದಲಿನ ಆರೋಗ್ಯದ ವಿಷಯದಲ್ಲಿ ಮೆಹಂದಿಗೆ ಪ್ರಮುಖ ಸ್ಥಾನವಿದೆ.

ತಲೆ ನೋವು ನಿವಾರಕ
ಮೆಹಂದಿಯಲ್ಲಿರುವ ತಂಪುಕಾರಕ ಗುಣಗಳ ಪರಿಣಾಮವಾಗಿ ತಲೆನೋವನ್ನು ನಿವಾರಿಸುವ ಅತ್ಯುತ್ತಮ ಔಷಧಿಯಾಗಿದೆ. ಮೆಹಂದಿ ಎಲೆಗಳು ಅಥವಾ ಮೆಹಂದಿಯನ್ನು ಹಣೆಗೆ ಹಚ್ಚಿಕೊಂಡರೆ ವಿಪರೀತವಾದ ತಲೆನೋವಿನಿಂದ ಮುಕ್ತಿ ಪಡೆಯಬಹುದು.

ತಂಪು ತಂಪು ಕೂಲ್ ಕೂಲ್
ಮೆಹಂದಿಯಲ್ಲಿ ತಂಪನ್ನುಂಟು ಮಾಡುವ ಅಂಶಗಳು ಇರುವುದರಿಂದ ಇದನ್ನು ರಾತ್ರಿ ಸಮಯಲ್ಲಿ ಕಾಲಿಗೆ ಹಚ್ಚಿಕೊಂಡರೆ ಅದರಿಂದ ದೇಹಕ್ಕೆ ಅಗತ್ಯವಾದ ತಂಪು ಒದಗುತ್ತದೆ.

– ಆಮಶಂಕೆ ಅಥವಾ ಅತಿಸಾರ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಪರಿಣಾಮಕಾರಿ ಪ್ರಭಾವ ಬೀರುತ್ತದೆ. ಮೆಹಂದಿ ಬೀಜಗಳನ್ನು ಪುಡಿ ಮಾಡಿ ತುಪ್ಪದೊಂದಿಗೆ ಬೆರೆಸಿ ಸಣ್ಣ ಉಂಡೆ ಮಾಡಿಕೊಂಡು ನೀರಿನೊಂದಿಗೆ ಸೇವಿಸಬೇಕು.

Advertisement

– ಜಾಂಡೀಸ್ ಮತ್ತು ಲಿವರ್ ತೊಂದರೆಯಿಂದ ಬಳಲುತ್ತಿರುವವರು ಮೆಹಂದಿ ಗಿಡದ ಬೇರಿನ ತುಂಡನ್ನು ನೀರಿನಲ್ಲಿ ಬೇಯಿಸಿ ಡಿಕಾಕ್ಷನ್ ತಯಾರಿಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಪರಿಣಾಮಕಾರಿಯಾಗಿರುತ್ತದೆ.

-ಗಂಟಲು ಬೇನೆಯಿಂದ ಬಳಲುತ್ತಿರುವವರು ಮೆಹಂದಿ ಎಲೆಯ ಡಿಕಾಕ್ಷನ್ ಅನ್ನು ಗಂಟಲಿಗೆ ಹಾಕಿಕೊಂಡು ಮುಕ್ಕಳಿಸಿದರೆ ಗಂಟಲು ನೋವಿನ ಕಿರಿಕಿರಿಯಿಂದ ಮುಕ್ತಿಯನ್ನು ಪಡೆಯುತ್ತಾರೆ.

– ಅತಿ ಉಷ್ಣದಿಂದ ಗುಳ್ಳೆಗಳು ಎದ್ದಿದ್ದರೆ, ಆ ಜಾಗಕ್ಕೆ ನೀರಿನೊಂದಿಗೆ ರುಬ್ಬಿದ ಮೆಹಂದಿ ಎಲೆಯನ್ನು ಹಚ್ಚಿ 10 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ಶುದ್ಧಗೊಳಿಸಿದರೆ ಉತ್ತಮ ಫಲಿತಾಂಶ ನೀಡುತ್ತದೆ.

– ಮೆಹಂದಿ ಎಲೆಗಳನ್ನು ಹುಣ್ಣು, ಕಜ್ಜಿ ಹಾಗೂ ಸುಟ್ಟ ಗಾಯಗಳನ್ನು ಗುಣಪಡಿಸಲೂ ಬಳಸುತ್ತಾರೆ.

– ಮೆಹಂದಿ ಹೂವನ್ನು ವಿನೇಗರ್ ನೊಂದಿಗೆ ಬೆರೆಸಿ ಮುಲಾಮು ತಯಾರಿಸಿಕೊಂಡು ಹಣೆಗೆ ಹಚ್ಚಿದರೆ ಅತಿಯಾಗಿ ಕಾಡುವ ತಲೆ ನೋವು ಮಾಯವಾಗುತ್ತದೆ.

  • ಇನ್ನು ಮದುವೆಯಲ್ಲಿ ಮದುಮಗಳು ಇದನ್ನು ಹಚ್ಚಿಕೊಳ್ಳುವುದಕ್ಕೊಂದು ವಿಶೇಷ ಕಾರಣವಿದೆ. ಮದುವೆಯ ದಿನಗಳು ಯಾವುದೇ ಯುವತಿಗೆ ಒತ್ತಡದ ಹಾಗೂ ಟೆನ್ಷನ್ನಿನ ದಿನಗಳಾಗಿರುತ್ತವೆ. ಆ ಒತ್ತಡದಿಂದ ಕೆಲವರಿಗೆ ತಲೆನೋವು, ಜ್ವರ ಬರುವುದೂ ಉಂಟು. ಈ ಒತ್ತಡ ಹಾಗೂ ಸುಸ್ತನ್ನು ನಿವಾರಿಸುವ ಔಷಧೀಯ ಗುಣ ಮೆಹಂದಿಯಲ್ಲಿದೆ. ಹೀಗಾಗಿ, ಅಲಂಕಾರ ಶಾಸ್ತ್ರ ಹಾಗೂ ಔಷಧ ಈ ಎರಡೂ ಕಾರಣಗಳಿಗೆ ಮೆಹಂದಿ ಬಳಕೆಯಲ್ಲಿದೆ.

ಹೀಗೆ ಬಹುಪಯೋಗಿ ಗುಣವನ್ನು ಹೊಂದಿರುವ ಮೆಹಂದಿ ಸದಾಕಾಲ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ನಮಗೊದಗುವ ಸ್ನೇಹಿತನಂತೆ ಕಾರ್ಯನಿರ್ವಹಿಸುತ್ತದೆ ಎಂದರೆ ತಪ್ಪಾಗಲಾರದು.

Advertisement

Udayavani is now on Telegram. Click here to join our channel and stay updated with the latest news.

Next