Advertisement

ಟಿಕೆಟ್‌ಗಳಲ್ಲಿ ಇರಲ್ಲ ಪಿಎಂ ಫೋಟೋ

12:30 AM Mar 21, 2019 | |

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಫೋಟೋಗಳು ಇರುವ ಟಿಕೆಟ್‌ಗಳನ್ನು ಹಿಂಪಡೆಯಲು ರೈಲ್ವೆ ಇಲಾಖೆ ಮುಂದಾಗಿದೆ. 

Advertisement

ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸ್ವಯಂ ಪ್ರೇರಿತವಾಗಿಯೇ ಈ ತೀರ್ಮಾನ ಕೈಗೊಳ್ಳಲಾಗಿದೆ. 

ಈ ಬಗ್ಗೆ ಯಾವುದೇ ಆದೇಶ ಬಂದಿಲ್ಲ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳು ನವದಿಲ್ಲಿಯಲ್ಲಿ ತಿಳಿಸಿದ್ದಾರೆ. ಎಲ್ಲಾ ಹದಿನೇಳು ರೈಲ್ವೆ ವಲಯಗಳ ಮುಖ್ಯಸ್ಥರಿಗೂ ಈ ಬಗ್ಗೆ ಪತ್ರ ರವಾನಿಸಲಾಗಿದೆ. 

ಕುತೂಹಲಕಾರಿ ಅಂಶವೆಂದರೆ ರೈಲು ಟಿಕೆಟ್‌ಗಳಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ತೆಗೆಯಬೇಕು ಎಂದು ಮಂಗಳವಾರ ತೃಣಮೂಲ ಕಾಂಗ್ರೆಸ್‌ನ ನಿಯೋಗ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿತ್ತು. ರೈಲಿನ ಟಿಕೆಟ್‌ಗಳಲ್ಲಿ ಕೇಂದ್ರ ಸರಕಾರದ ಸಾಧನೆಗಳನ್ನು ವಿವರಿಸುವುದರ ಜತೆಗೆ ಪ್ರಧಾನಿ ಚಿತ್ರವೂ ಇತ್ತು.

28ಕ್ಕೆ ಉತ್ತರಾಖಂಡದಲ್ಲಿ ಪ್ರಧಾನಿ ರ‍್ಯಾಲಿ
ಏ.11ರಿಂದ ಆರಂಭವಾಗುವ ಮೊದಲ ಹಂತದ ಮತದಾನಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ರುದ್ರಪುರ ಪಟ್ಟಣದಲ್ಲಿ ಮಾ.28ಕ್ಕೆ ಪ್ರಚಾರ ನಡೆಸಲಿದ್ದಾರೆ. 

Advertisement

ಇದು ಪ್ರಧಾನಿಯವರ ಅಧಿಕೃತ ಪ್ರಚಾರ ಕಾರ್ಯಕ್ರಮದ ಆರಂಭವಾಗಲಿದೆ. ಈಗಾಗಲೇ ಅವರು 22 ರಾಜ್ಯಗಳ 100ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಹಂತದ ಪ್ರಚಾರ ನಡೆಸಿದ್ದಾರೆ. ಮಾ.24-26ರ ನಡುವೆ ದೇಶಾದ್ಯಂತ 500 ರ್ಯಾಲಿಗಳನ್ನು ನಡೆಸಲೂ ತೀರ್ಮಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next