Advertisement

ಆಟೋಮೊಬೈಲ್‌ ಕ್ಷೇತ್ರದಲ್ಲಿದೆ ವಿಪುಲ ಆಯ್ಕೆಗಳು

06:02 PM Jun 09, 2022 | Team Udayavani |

ಆಟೋಮೊಬೈಲ್‌ ಕ್ಷೇತ್ರ ಇಂದು ಜನಜೀವನದಲ್ಲಿ ಹಾಸುಹೊಕ್ಕಾಗಿದ್ದು ಅತ್ಯಂತ ದೊಡ್ಡ ಕ್ಷೇತ್ರವಾಗಿದೆ. ಈಗಿನ ಪೀಳಿಗೆಯಲ್ಲಿ ಚಲನಶೀಲತೆ ಇಲ್ಲದೆ ಯಾವುದೇ ಕೆಲಸ ಸಾಧ್ಯವಿಲ್ಲ ಎಂಬ ಮಾತು ಸುಳ್ಳಾಗದು. ವಾಹನದ ತಯಾರಿಕೆಯಿಂದ ಹಿಡಿದು, ಅದರ ಕಾರ್ಯಾಚರಣೆ, ವಿನ್ಯಾಸ, ದುರಸ್ತಿ, ಪುನರ್‌ನಿರ್ಮಾಣ, ಮಾರ್ಪಾಡು, ವೈಫ‌ಲ್ಯದ ತನಿಖೆ ಇತ್ಯಾದಿ ವಿಷಯಗಳನ್ನು ಒಳಗೊಂಡ ಆಟೋಮೊಬೈಲ್‌ ಕ್ಷೇತ್ರವು ವಾಯುಬಲ ವಿಜ್ಞಾನ, ದಕ್ಷತಾ ಶಾಸ್ತ್ರ, ಪರ್ಯಾಯ ಇಂಧನಗಳು, ಪಾದಚಾರಿಗಳ ಸುರಕ್ಷತೆ, ಪೂರೈಕೆ ಸರಪಳಿ ಮತ್ತು ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ವಿಶೇಷತೆಗಳನ್ನು ಒಳಗೊಂಡಿರುತ್ತದೆ.

Advertisement

ಆಟೋಮೊಬೈಲ್‌ ಕೌಶಲ ಅಭಿವೃದ್ಧಿ ಪ್ರಾಧಿಕಾರ (ASDC)ದ ಮಾಹಿತಿ ಪ್ರಕಾರ ಭಾರತೀಯ ಆಟೋಮೊಬೈಲ್‌ ಉದ್ಯಮವು ಪ್ರಸ್ತುತ ಎಈಕಯ ಶೇ.7 ಮತ್ತು ಒಟ್ಟು ಉತ್ಪಾದನೆಯ ಶೇ.49ರಷ್ಟು ಪಾಲನ್ನು ಹೊಂದಿದ್ದು, ಇದು 32 ದಶಲಕ್ಷ ನೇರ ಅಥವಾ ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಭಾರತ ಸರಕಾರದ ಆಟೋಮೊಬೈಲ್‌ ಮಿಷನ್‌ ಪ್ಲಾನ್‌ 2019-2026 ಪ್ರಕಾರ 2026ರ ವೇಳೆಗೆ 4 ದಶಲಕ್ಷ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ ಇದ್ದು, ಭಾರತವನ್ನು ಉತ್ಪಾದನ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಸಂಶೋಧನ ಹಾಗೂ ಅಭಿವೃದ್ಧಿ, ನಾವೀನ್ಯತೆಯಲ್ಲೂ ಅಂತಾರಾಷ್ಟ್ರೀಯ ಮಟ್ಟದ ಆಟೋಮೊಬೈಲ್‌ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.

ಈ ನಿಟ್ಟಿನಲ್ಲಿ ಭಾರತೀಯ ಆಟೋಮೊಬೈಲ್‌ ಸಂಶೋಧನ ಸಂಸ್ಥೆ (ASDC)ಯು ಆಟೋಮೊಬೈಲ್‌ ಶಿಕ್ಷಣ ಅಕಾಡೆಮಿಯನ್ನು ಸ್ಥಾಪಿಸಿದ್ದು, ಇದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲ ಯಗಳ ಸಹಯೋಗದೊಂದಿಗೆ, ಆಟೋಮೊಬೈಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ, ಸ್ನಾತಕೋತ್ತರ, ಪಿಎಚ್‌.ಡಿ. ಹಾಗೂ ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ.

ಭವಿಷ್ಯದಲ್ಲಿ ಆಟೋಮೊಬೈಲ್‌ ಕ್ಷೇತ್ರದಲ್ಲಿ ಅಂತರಿಕ ದಹನ ಎಂಜಿನ್‌ (IC-ENGINE) ಬಳಕೆ ಕಡಿಮೆಯಾಗಿ, ರೂಪಾಂತರಿ ವಾಹನಗಳಾದ ಎಲೆಕ್ಟ್ರಿಕ್‌ ಚಾಲಿತ ವಾಹನಗಳು, ಸೌರಶಕ್ತಿ ಚಾಲಿತ ವಾಹನಗಳು, ಜಲಜನಕ ಇಂಧನ ಚಾಲಿತ ವಾಹನಗಳು ಈ ಕ್ಷೇತ್ರವನ್ನು ಆಳಲಿವೆ ಎಂದರೆ ತಪ್ಪಾಗಲಾರದು.

ಕೇಂದ್ರ ಮತ್ತು ಹಲವಾರು ರಾಜ್ಯ ಸರಕಾರಗಳು, ಸಾರ್ವಜನಿಕ ಸಾರಿಗೆಗಾಗಿ ಇ-ಮೊಬಿಲಿಟಿಯನ್ನು ಉಪಯೋಗಿಸುತ್ತಿವೆ ಮತ್ತು ಪ್ರಮುಖ ನಗರಗಳಾ ದ್ಯಂತ ಎಲೆಕ್ಟ್ರಿಕ್‌ ಇಂಟರ್‌ ಸಿಟಿಬಸ್‌ಗಳನ್ನು ನಿಯೋಜಿ ಸಿವೆ. ಹಾಗಾಗಿ ಆಟೋಮೊಬೈಲ್‌ ಕ್ಷೇತ್ರದ ಭವಿಷ್ಯವು ಭದ್ರವಾಗಿದ್ದು, ಉದ್ಯೋಗ ಭದ್ರತೆ, ಹೆಚ್ಚಿನ ವೇತನ, ಬೆಳವಣಿಗೆಗೆ ಅವಕಾಶಗಳು, ಮುಂದುವರಿದ ಶಿಕ್ಷಣ, ನೆಟ್‌ವರ್ಕಿಂಗ್‌ಗಳಿಗೆ ಅವಕಾಶಗಳನ್ನು ನೀಡುತ್ತಾ, ಉದ್ಯೋಗಸ್ಥರಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಭವಿಷ್ಯದ ಭರವಸೆಯನ್ನು ನಿಖರವಾಗಿ ನೀಡುತ್ತಿದೆ.

Advertisement

ಪದವಿಪೂರ್ವ ಶಿಕ್ಷಣವು ವಿಜ್ಞಾನದ ವಿಷಯ ದಲ್ಲಿ ಆಗಿದ್ದರೆ ಹಾಗೂ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ
ಏನಾದರೂ ಸಾಧನೆ ಮಾಡಬೇಕೆಂದು ಗುರಿಯನ್ನು ಹೊಂದಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಆಟೋ ಮೊಬೈಲ್‌ ಕ್ಷೇತ್ರವು ಪ್ರಶಸ್ತವಾದ ಆಯ್ಕೆ ಎಂದು ಹೇಳಿದರೆ ಈಗಿನ ಕಾಲಘಟ್ಟಕ್ಕೆ ತಪ್ಪಾಗಲಾರದು. ಏಕೆಂದರೆ ಆಟೋಮೊಬೈಲ್‌ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯ ವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದ್ದು ಬಹು ಆಯ್ಕೆಯ ಅವಕಾಶವನ್ನು ಕೊಡುತ್ತದೆ. ಉದಾಹರಣೆಗೆ ಸೈದ್ಧಾಂತಿಕ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಕ್ಷೇತ್ರವನ್ನು ಆಯ್ಕೆ ಮಾಡಿ ಕೊಂಡು ಸ್ನಾತಕೋತ್ತರ ಪದವಿ,
ಬಳಿಕ ಪಿಎಚ್‌.ಡಿ. ಮಾಡಲು ಅವಕಾಶವಿದ್ದು, ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾದ -ಭಾರತೀಯ ತಂತ್ರಜ್ಞಾನ ಸಂಸ್ಥೆ, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ಭಾರತೀಯ ಆಟೋಮೊಬೈಲ್‌ ಸಂಶೋಧನ ಸಂಸ್ಥೆಹಾಗೂ ಅನೇಕ ವಿ.ವಿ.ಗಳು ಆಟೋ ಮೊಬೈಲ್‌ ಕ್ಷೇತ್ರದಲ್ಲಿ ವಿವಿಧ ಕೋರ್ಸ್‌ಗಳನ್ನು ನೀಡುತ್ತಿವೆ.

ಪ್ರಾಯೋಗಿಕವಾಗಿ ಹೆಚ್ಚಿನ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಡಿಪ್ಲೊಮಾ ಕೋರ್ಸ್‌ಗಳನ್ನು ಆಯ್ಕೆ ಮಾಡಿ ಕೈಗಾರಿಕೆಗಳಲ್ಲಿ ಉದ್ಯೋಗ ಗಳಿಸಬಹುದು. ತಾಂತ್ರಿಕ ಶಿಕ್ಷಣ ನಿರ್ದೇಶನಾಲಯವು ಆಟೋಮೊಬೈಲ್‌ ಕ್ಷೇತ್ರದಲ್ಲಿ ಡಿಪ್ಲೊಮಾ ಕೋರ್ಸ್‌ ಗಳನ್ನು ಒದಗಿಸುತ್ತಿದ್ದು , ಕೈಗಾರಿಕೆಗಳಿಗೆ ಗರಿಷ್ಠ ಮಟ್ಟದ ಪ್ರಾಯೋಗಿಕ ಪ್ರವೃತ್ತಿಯ ಕಾರ್ಯಪಡೆಗಳನ್ನು ಒದಗಿಸುತ್ತಿದೆ. ಈ ಮೇಲಿನ ಎರಡೂ ಸಾಮಾನ್ಯ ಆಯ್ಕೆಗಳಾಗಿದ್ದು, ಇದರ ಹೊರತಾಗಿ ಕೌಶಲ್ಯಯುಕ್ತ ವೃತ್ತಿಪರ ಕೋರ್ಸ್‌ ಗಳನ್ನು ಕೆಲವು ಆಸಕ್ತಿ ಪರ ವಿದ್ಯಾರ್ಥಿಗಳು ಆಯ್ಕೆ ಮಾಡುವ ಅವಕಾಶವನ್ನೂ ಆಟೋಮೊಬೈಲ್‌ ಕ್ಷೇತ್ರವು ಒದಗಿಸಿದೆ.

ಹೊರದೇಶಗಳಲ್ಲಿ ಪದವಿಪೂರ್ವ ವಿದ್ಯಾರ್ಥಿ ಗಳಿಗೆ, ಕೌಶಲಯುಕ್ತ ವಿವಿಧ ಕೋರ್ಸ್‌ಗಳ ಆಯ್ಕೆಗಳು ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಲಭ್ಯವಿದ್ದು, ಆಸಕ್ತ ವಿದ್ಯಾರ್ಥಿಗಳು ಪದವಿ ಪಡೆಯದೇ ಇಂತಹ ಕೌಶಲಪೂರ್ಣ ತರಬೇತಿಗಳನ್ನು ಪಡೆದು ಆಟೋಮೊಬೈಲ್‌ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆಯುವ ಅವಕಾಶವನ್ನು ಅಲ್ಲಿನ ಸರಕಾರಗಳು ಒದಗಿಸಿಕೊಟ್ಟಿದೆ. ಆದರೆ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಇಂತಹ ಆಯ್ಕೆಗಳ ಕೊರತೆ ಇದ್ದು , ಬಹುಶಃ ರಾಷ್ಟ್ರೀಯ ಶಿಕ್ಷಣ ನೀತಿಯು ಪೂರ್ಣ ಅನುಷ್ಠಾನಗೊಂಡರೆ, ಈ ಕೊರತೆಗಳನ್ನು ಪರಿಹರಿಸುವಲ್ಲಿ ಅತೀ ಮುಖ್ಯ ಪಾತ್ರ ವಹಿಸುವಲ್ಲಿ ಯಾವುದೇ ಸಂಶಯವಿಲ್ಲ.

ಕೌಶಲಯುಕ್ತ ವೃತ್ತಿಪರ ಕೋರ್ಸ್‌ಗಳ ತರಬೇತಿ (GTTC)ಯ ನಿಟ್ಟಿನಲ್ಲಿ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರವು ಟೋಯೋಟ ಕಿರ್ಲೋಸ್ಕರ್‌ ಮೋಟಾರ್‌ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಕರ್ನಾಟಕದ ವಿವಿಧ ಭಾಗಗಳ ಯುವಕರಿಗೆ ಉದ್ಯಮ ನಿರ್ದಿಷ್ಟ ಕೌಶಲ ತರಬೇತಿಯನ್ನು ನೀಡುತ್ತಿದ್ದು, ತರಬೇತಿ ಪಡೆಯುವವರಿಗೆ ಉತ್ಪಾದನ ಉದ್ಯಮಕ್ಕೆ ಸಂಬಂಧಿಸಿದ ಕೌಶಲಗಳನ್ನು ಪಡೆಯಲು ಮತ್ತು ಸೈದ್ಧಾಂತಿಕ ಹಾಗೂ ಉದ್ಯೋಗ ಅಭಿವೃದ್ಧಿಯ ಮಿಶ್ರಣಗಳನ್ನು ಒಳಗೊಂಡಿರುವ ‘ಕಲಿಯಿರಿ ಮತ್ತು ಗಳಿಸಿ’ ವಿಧಾನದ ಮೂಲಕ ತಮ್ಮ ಉದ್ಯೋಗ ಸಾಮರ್ಥ್ಯವನ್ನು ಸುಧಾರಿಸಲು ಅವಕಾಶಗಳನ್ನು ಒದಗಿಸುತ್ತದೆ.

ತರಬೇತಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅನಂತರ, ವಿದ್ಯಾರ್ಥಿಗಳು ಪ್ರಮಾಣೀಕರಣಕ್ಕಾಗಿ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾಗಿದ್ದು ಆಟೋ ಮೊಬೈಲ್‌ ಕೌಶಲ ಅಭಿವೃದ್ಧಿಯ ಪ್ರಾಧಿಕಾರದ ಮಾರ್ಗ
ಸೂಚಿಗಳ ಪ್ರಕಾರ ಜಿಟಿಟಿಸಿ ಹಾಗೂ ಟಿಕೆಎಮ್‌ ಜಂಟಿಯಾಗಿ ನಡೆಸುತ್ತದೆ.

ಈ ತರಬೇತಿಗಳು ಹತ್ತನೇ ತರಗತಿ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದ್ದು, 3 ವರ್ಷಗಳ ತರಬೇತಿ ಕಾರ್ಯಕ್ರಮಗಳನ್ನು 2 ವಹಿವಾಟುಗಳಲ್ಲಿ ಒದಗಿಸ ಲಾಗುತ್ತದೆ. ಅದೇನೆಂದರೆ ಆಟೋ ಮೊಬೈಲ್‌ ವೆಲ್ಡಿಂಗ್‌ ಮತ್ತು ಆಟೋಮೊಬೈಲ್‌ ಎಸೆಂಬ್ಲಿ ಹೆಚ್ಚಿನ ವಿವರಗಳಿಗೆ gttc.karnataka.gov.inಸಂಪರ್ಕಿಸಬಹುದು.

ಅದೇ ರೀತಿ, ಭಾರತ ಸರಕಾರದ ಸಂಸ್ಥೆಯಾದ ಆಟೋಮೊಬೈಲ್‌ ಕೌಶಲ ಅಭಿವೃದ್ಧಿ ಪ್ರಾಧಿಕಾರ, ಪ್ರಸ್ತುತ ಉದ್ಯಮಕ್ಕೆ ಅಗತ್ಯವಿರುವ ಕೌಶಲಗಳು ಮತ್ತು ನಮ್ಮ ದೇಶದ ಯುವಕರು ಹೊಂದಿರುವ ಕೌಶಲಗಳ ನಡುವೆ, ಕೆಲವು ಕ್ಷೇತ್ರಗಳಲ್ಲಿ ಹೊಂದಾ ಣಿಕೆ ಇಲ್ಲ ಎಂಬುದನ್ನು ಅರಿತು, ರಚನಾತ್ಮಕ ಸುಧಾರಣೆಗಳೊಂದಿಗೆ ಯಾವ ಮಟ್ಟದ ಕೌಶಲಗಳನ್ನು ಹೇಗೆ ಅಭ್ಯಾಸ ಮಾಡುವುದರಿಂದ ವ್ಯಕ್ತಿ ಹಾಗೂ ವ್ಯವಹಾರಕ್ಕೆ ಮೌಲ್ಯವನ್ನು ಸೇರಿಸಬಹುದು ಎಂಬ ಪರಿಕಲ್ಪನೆಯೊಂದಿಗೆ ಬಂಡವಾಳ ಮತ್ತು ಹೆಚ್ಚಿನ ಉದ್ಯೋಗ ಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.

ಅದೇ ರೀತಿ, ಆಟೋಮೊಬೈಲ್‌ ಕೌಶಲ ಅಭಿವೃದ್ಧಿ ಪ್ರಾಧಿಕಾರವು ಸಂಶೋಧನೆ, ಉದ್ಯೋಗದ ಪಾತ್ರ, ವಿತರಣ ವಿಧಾನ, ಗುಣಮಟ್ಟದ ಭರವಸೆಗಳಂತಹ ಕಾರ್ಯವಿಧಾನ ವಿಭಾಗಗಳನ್ನು ಒಳಗೊಂಡಿದ್ದು, ಆಟೋಮೊಬೈಲ್‌ ಕ್ಷೇತ್ರದ ನಿರಂತರ ಕ್ರಿಯಾತ್ಮಕ ಆವಿಷ್ಕಾರಗಳ ಮೂಲಕ, ಅವರ ರೂಪಾಂತರವನ್ನು ನಿಭಾಯಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಉತ್ಪಾದನ ವಿಧಾನದಿಂದ ದೂರ ಸರಿಯುವ ಸಾಧ್ಯತೆ ಇದ್ದು , ಬದಲಿಗೆ ಐOಖ, ಮೆಕಾಟ್ರಾನಿಕ್ಸ್‌ , ರೋಬೋಟೆಕ್ಸ್‌ , 3ಈ ಸಹಯೋಗ, ಆಟೋಮೋಟಿವ್‌ ವಿನ್ಯಾಸ ಮತ್ತು ಕಂಪ್ಯೂಟರ್‌ ಚಿಂತನೆಯ ಕ್ಷೇತ್ರಗಳನ್ನು ಸೇರಿಸುವ ದೂರದೃಷ್ಟಿಯನ್ನು ಹೊಂದಿದೆ.

ಆಟೋಮೊಬೈಲ್‌ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ 80ಕ್ಕೂ ಅಧಿಕ ಅಲ್ಪಾವಧಿ ತರಬೇತಿ ಕೋರ್ಸ್‌ಗಳನ್ನು ಅಭಿವೃದ್ಧಿ ಪಡಿಸಿದ್ದು, ಹತ್ತನೇ ತರಗತಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಲ್ಲಿನ ಕೌಶಲವನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದೆ.

ಸಂಸ್ಥೆಯು ನೀಡುವ ತರಬೇತಿ ಕೋರ್ಸ್‌ಗಳ ವಿವರಗಳನ್ನು ಚsಛc.cಟಞ ವೆಬ್‌ಸೈಟ್‌ನಿಂದ ಪಡೆದು ಕೊಳ್ಳಬಹುದು. ಕೌಶಲಯುಕ್ತ ವೃತ್ತಿಪರ ತರಬೇತಿ ಕೋರ್ಸ್‌ಗಳ ನಿಟ್ಟಿನಲ್ಲಿ ಜಿಟಿಟಿಸಿಯು ಪದವಿಪೂರ್ವ ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳ ಕೌಶಲವನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದ್ದು 3 ವರ್ಷಗಳ ಡಿಪ್ಲೊಮಾ ತರಬೇತಿಗಳನ್ನು ಒದಗಿಸುತ್ತಿದೆ.

-ಯತೀಶ್‌ ರಾವ್‌ ಸುರತ್ಕಲ್‌

Advertisement

Udayavani is now on Telegram. Click here to join our channel and stay updated with the latest news.

Next