Advertisement

ಒಲವೆಂಬ ಪ್ರೀತಿಗೆ ಹಲವು ಹೆಸರಿದೆ

05:54 PM Aug 06, 2019 | Sriram |

ಒಂದು ಗಂಡು ಒಂದು ಹೆಣ್ಣು ಹತ್ತಿರವಿದ್ದರೆ ಅದು ಬರಿ ಪ್ರೀತಿಯೇ ಅಂತ ಏಕೆ ಊಹಿಸುವುದು? ಅಲ್ಲಿ ಅಣ್ಣ ತಂಗಿಯ ಒಲವು ಇರಬಹುದಲ್ಲಾ?.

Advertisement

ವೀಳ್ಯದೆಲೆ ಜಗಿದ ಕೆಂಪಗಿನ ತುಟಿಗಳ ನಡುವೆ, ಬಿಳಿ/ ದಂತಪಕ್ತಿ ಎಡೆಯಿಂದ ಹೊರಹೊಮ್ಮುವ ಆ ಮೃದು ದನಿ, ಅದರ ಬೆನ್ನಿಗೆ ಹೊಮ್ಮುವ ಆತ್ಮವಿಶ್ವಾಸದ ನುಡಿಗಳು, ಸಹನಶೀಲತೆ, ಮುಗುಳು ನಗು, ಅಪಾರವಾದ ಒಲವು, ಮನ ಗೆಲ್ಲುವ ಸರಳ ಸ್ವಭಾವ… ನಿನ್ನ ಬಗ್ಗೆ ಪದಗಳಲ್ಲಿ ಬರೆದರೆ ಕಡಿಮೆ ಆದೀತು ಅನ್ನಿಸುತ್ತಿದೆ. ಆ ಮುಗ್ಧ ಪ್ರೀತಿಯಲ್ಲೂ ಎದ್ದು ಕಾಣುವ ಗಾಂಭೀರ್ಯ, ಅಪಾರ ಜ್ಞಾನ, ಯಾರೂ ಸಹ ಸ್ಪೂರ್ತಿಯಾಗುವ ನಿನ್ನ ವ್ಯಕ್ತಿತ್ವ ಅನನ್ಯ.

ನಿನ್ನ ಪುಟ್ಟ ಪುಟ್ಟ ಕನಸುಗಳನ್ನೂ ಆಗಸದೆತ್ತರಕ್ಕೆ ಏರಿಸಿ ನನಸು ಮಾಡಬೇಕಂಬ ಹಂಬಲವಿದೆ. ಅದಕ್ಕೆ ಬೇಕಾದ ಶಕ್ತಿಯನ್ನು ದೇವರು ಕರುಣಿಸಬೇಕಷ್ಟೇ. ನಿನ್ನ ನೋಡುತ್ತಾ ನೋಡುತ್ತಾ ಒಲವಿನ ಕರೆಗೆ ಕಾದು ಕುಳಿತದ್ದು ಸತ್ಯ. ಒಲವೆಂದರೆ ಅದು ಪ್ರೇಮವೆಂದು ತಿಳಿದೆಯಾ? ಅನುಮಾನ. ಒಲವಿಗೂ ಹಲವು ಹೆಸರಿದೆ. ಒಂದು ಗಂಡು ಒಂದು ಹೆಣ್ಣು ಹತ್ತಿರವಿದ್ದರೆ ಅದು ಬರಿ ಪ್ರೀತಿಯೇ ಅಂತ ಏಕೆ ಊಹಿಸುವುದು? ಅಲ್ಲಿ ಅಣ್ಣ ತಂಗಿಯ ಒಲವು ಇರಬಹುದಲ್ಲಾ?.

ಹೌದು, ನಾನು ನಿನ್ನಲ್ಲಿ ಸಹೋದರನ ಪ್ರೀತಿ ಕಂಡೆ. ಆದರೆ, ಸುತ್ತಲಿನ ಜನಕ್ಕೆ ನೀನು ಭಯಪಟ್ಟೆ.

ನಮ್ಮ ನಡುವೆ ಇಲ್ಲ ಸಲ್ಲದ ಕತೆಗಳು ಹುಟ್ಟಿದರೆ, ಅದು ಜೀವನದ ಕಪ್ಪುಚುಕ್ಕೆಯಾದರೆ ಅನ್ನುವ ನಿನ್ನೊಳಗಿನ ನೀನೇ ಸೃಷ್ಟಿಸಿಕೊಂಡ ಊಹಾಪೋಹಗಳಿಗೆ ನೀನೇ ರೆಕ್ಕೆ ಪುಕ್ಕ ಕಟ್ಟಿದೆ ಅಲ್ಲವೇ ?

Advertisement

ನಿಜಕ್ಕೂ ನನಗೆ ನಿನ್ನ ಗುಣಗಳು ಇಷ್ಟವಾದದ್ದು ಸತ್ಯ. ಅದರಿಂದ ನಿನ್ನ ಆತ್ಮವಿಶ್ವಾಸದ ನಡೆ ನನ್ನನ್ನು ನನ್ನೊಳಗೆ ಗಟ್ಟಿಮಾಡಿಸಿದ್ದು ಹೌದು. ನಿನಗೊಂದು ಮೂರ್ತರೂಪ ಕೊಟ್ಟು ಮಾತನಾಡಿಸಿ ನಾನು ನನ್ನವಳಾಗಿ ಬದುಕಲಾರಂಭಿಸಿದೆ. ಕಷ್ಟಗಳಿಗೆ ಬೆದರುತ್ತಿದ್ದವಳಿಗೆ ನನ್ನೊಳಗಿನ ನೀನು ಸ್ಪೂರ್ತಿಯಾಗಿ ಹುರಿದುಂಬಿಸುತ್ತಿದ್ದೆ. ಅಚಲವಾಗಿ ನಿಂತು ನಾನು ಮುಂದೆ ನಡೆದೆ… ಹೆದರಿ ಬೆದರಿ ಕಳೆದು ಕೊಂಡದ್ದು ನೀನು ಒಬ್ಟಾಕೆ ಸಹೋದರಿಯನ್ನು..

ಒಂದು ಮಾತು ನೆನಪಿರಲಿ; ಯಾವತ್ತೂ ನಾನು ನಿನ್ನನ್ನು ನೋಡೋಕೆ ಬರುವುದಿಲ್ಲ. ಆದರೆ ಗೊತ್ತಿರಲಿ, ಒಲವೆಂಬ ಪ್ರೀತಿಗೆ ಹಲವು ಹೆಸರಿದೆ……

-ರಜನಿ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next