Advertisement

ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಗಳಲ್ಲಿ  542 ಮಂದಿ ವಿದ್ಯಾರ್ಥಿಗಳು ಗೈರು

12:30 AM Mar 02, 2019 | Team Udayavani |

ಮಂಗಳೂರು/ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆ ಶುಕ್ರವಾರದಿಂದ ಆರಂಭಗೊಂಡಿತು. ದಕ್ಷಿಣ ಕನ್ನಡ ಜಿಲ್ಲೆಯ 54 ಕೇಂದ್ರಗಳಲ್ಲಿ ಸೂಕ್ತ ಭದ್ರತೆಯೊಂದಿಗೆ ಮೊದಲ ದಿನ ಪರೀಕ್ಷೆ ನಡೆಯಿತು. ಜಿಲ್ಲೆಯ ಒಟ್ಟು 36 ಸಾವಿರ ವಿದ್ಯಾರ್ಥಿಗಳಲ್ಲಿ 35,609 ಮಂದಿ ಪರೀಕ್ಷೆ ಬರೆದಿದ್ದರೆ, 391 ಮಂದಿ ಗೈರು ಹಾಜರಾಗಿದ್ದಾರೆ. ಉಡುಪಿ ಜಿಲ್ಲೆಯ 15,410 ವಿದ್ಯಾರ್ಥಿಗಳ ಪೈಕಿ 15,259 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ. 151 ವಿದ್ಯಾರ್ಥಿ ಗಳು ಗೈರುಹಾಜರಾಗಿದ್ದಾರೆ.

Advertisement

ದ.ಕ. ಜಿಲ್ಲೆಯಲ್ಲಿ ಅರ್ಥಶಾಸ್ತ್ರ ಪರೀಕ್ಷೆಗೆ 19,521 ಮಂದಿಯ ಪೈಕಿ 19,205 ಮಂದಿ ಪರೀಕ್ಷೆ ಬರೆದಿದ್ದು, 316 ಮಂದಿ ಗೈರಾಗಿದ್ದಾರೆ. ಭೌತಶಾಸ್ತ್ರ ಪರೀಕ್ಷೆಗೆ ಒಟ್ಟು 16,479 ಮಂದಿಯಲ್ಲಿ 16,404 ಮಂದಿ ಪರೀಕ್ಷೆ ಬರೆದಿದ್ದು, 75 ಮಂದಿ ಗೈರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಅರ್ಥಶಾಸ್ತ್ರ ಪರೀಕ್ಷೆಗೆ ಒಟ್ಟು 125, ಭೌತಶಾಸ್ತ್ರ ಪರೀಕ್ಷೆಗೆ ಒಟ್ಟು 26 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.

ವಿದ್ಯಾರ್ಥಿಗಳು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ ನಿರಾತಂಕವಾಗಿ ಪರೀಕ್ಷೆ ಬರೆಯುವಂತೆ ಉಪನ್ಯಾಸಕರು, ಪೋಷಕರು ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡುತ್ತಿರುವ ದೃಶ್ಯಗಳು ಹಲವು ಕಾಲೇಜುಗಳಲ್ಲಿ ಕಂಡುಬಂತು.

ವಿದ್ಯಾರ್ಥಿಗಳಿಂದ ಮಿಶ್ರ ಪ್ರತಿಕ್ರಿಯೆ
ಶುಕ್ರವಾರ ನಡೆದ ಅರ್ಥಶಾಸ್ತ್ರ ಹಾಗೂ ಭೌತಶಾಸ್ತ್ರ ಪರೀಕ್ಷೆಗೆ ವಿದ್ಯಾರ್ಥಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದ ಎಂಜಿಎಂ ಹಾಗೂ ಸರಕಾರಿ ಪ.ಪೂ. ಕಾಲೇಜು ಉಡುಪಿಯ ವಿದ್ಯಾರ್ಥಿಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಅರ್ಥಶಾಸ್ತ್ರ ಪರೀಕ್ಷೆ ಸುಲಭ ಎಂದು ಬಹುತೇಕ ವಿದ್ಯಾರ್ಥಿಗಳು ಹೇಳಿಕೊಂಡರೆ ಭೌತಶಾಸ್ತ್ರ ಪರೀಕ್ಷೆ ತುಸು ಕಷ್ಟಕರವಾಗಿತ್ತು ಎಂದು ಇನ್ನು ಕೆಲವು ವಿದ್ಯಾರ್ಥಿಗಳು ಹೇಳಿಕೊಂಡರು.

ಕೆಎಸ್ಸಾರ್ಟಿಸಿಯಲ್ಲಿ  ಉಚಿತ ಪ್ರಯಾಣ
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರವೇಶ ಪತ್ರ ತೋರಿಸಿ ವಿದ್ಯಾರ್ಥಿಗಳು ಸಂಚಾರ ಮಾಡಬಹುದಾಗಿದೆ.

Advertisement

ಪರೀಕ್ಷಾ ಕೇಂದ್ರಗಳಿಗೆ ಭೇಟಿ
7-8 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಯಾವುದೇ ಗೊಂದಲ, ಆತಂಕವಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಎದುರಿ ಸಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. 
– ಸುಬ್ರಹ್ಮಣ್ಯ ಜೋಷಿ, ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next