Advertisement

ಕಾಸರಗೋಡು ಜಿಲ್ಲೆಯ ವಿವಿಧೆಡೆ ಕೋವಿಡ್‌ 19 ಚಿಕಿತ್ಸಾ ಕೇಂದ್ರಗಳು

09:32 PM Mar 29, 2020 | Sriram |

ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್‌ 19 ಚಿಕಿತ್ಸಾ ಸೌಲಭ್ಯ ಸಿದ್ಧಪಡಿಸುವ, ರೋಗಿಗಳನ್ನು ಮತ್ತು ನಿಗಾದಲ್ಲಿರುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಟ್ಟದಲ್ಲಿ ಸಜ್ಜುಗೊಳಿಸಲಾದ ಕೋವಿಡ್‌ ಕೇರ್‌ ಸೆಂಟರ್‌ಗಳು ಇಂತಿವೆ.

Advertisement

ಕಾಂಞಂಗಾಡ್‌ ಜಿಲ್ಲಾ ಆಸ್ಪತ್ರೆ, ಕಾಸರಗೋಡು ಜನರಲ್‌ ಆಸ್ಪತ್ರೆ, ಪನತ್ತಡಿ ತಾಲೂಕು ಸರಕಾರಿ ಆಸ್ಪತ್ರೆ, ಪೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಬದಯಡ್ಕ ಸಮುದಾಯ ಆರೋಗ್ಯ ಕೇಂದ್ರ.

ಇತರ ಶಾಲೆಗಳು, ಸಂಸ್ಥೆಗಳು
ಉದುಮ ಸ.ಹೈಯರ್‌ ಸೆಕೆಂಡರಿ ಶಾಲೆ, ಪಳ್ಳಿಕ್ಕರೆ ಸ.ಹೈ.ಸೆ. ಶಾಲೆ, ಪೆರಿಯ ಸ.ಹೈ.ಸೆ. ಶಾಲೆ, ಇಕ್ಬಾಲ್‌ ಸ. ಹೈ.ಸೆ. ಶಾಲೆ, ಕಯ್ಯೂರು ಸ.ಹೈ.ಸೆ. ಶಾಲೆ, ಕಯ್ಯೂರು ಐ.ಟಿ.ಐ, ಪುತ್ತಕ್ಕಾಲ್‌ ಸ.ಹಿ.ಪ್ರಾ.ಶಾಲೆ, ಚೆರುವತ್ತೂರು ಟಿ.ಎಚ್‌.ಎಸ್‌.ಎಸ್‌. ಹಾಸ್ಟೆಲ್‌, ಎಂ.ಆರ್‌.ಎಸ್‌. ವೆಳ್ಳಚ್ಚಾಲ್‌, ತ್ರಿಕರಿಪುರ ವಿ.ಪಿ.ಪಿ.ಎಂ.ಕೆ.ಪಿ. ಸ.ಹೈ.ಸೆ. ಶಾಲೆ, ಪಡನ್ನಕ್ಕಾಡ್‌ ಕಡಪ್ಪುರಂ ಸ.ಹೈ.ಸೆ. ಶಾಲೆ, ಬಲ್ಲ ಹೈ.ಸೆ. ಶಾಲೆ, ಪೇರೋಲ್‌ ಐ.ಸಿ.ಡಿ.ಎಸ್‌. ತರಬೇತಿ ಶಾಲೆ, ಚೆಮ್ಮಟ್ಟಂವಯಲ್‌ ವಿಜ್ಞಾನ ಪಾರ್ಕ್‌, ಶರಫ್‌ ಕಾಲೇಜಿನ ಹಳೆಯ ಕಟ್ಟಡ, ವೆಳ್ಳರಿಕುಂಡ್‌ ಸಂತ ಜೂಡಸ್‌ ಕಾಲೇಜು, ತೋಮಾಪುರಂ ಹೈ.ಸೆ. ಶಾಲೆ, ಕರಿಂದಳಂ ಸರಕಾರಿ ಕಾಲೇಜು, ತಾಯನ್ನೂರು ಸ.ಹೈ.ಸೆ. ಶಾಲೆ, ರಾಜಪುರಂ ಹಾಲಿ ಫÉವರ್‌ ಹೈ.ಸೆ. ಶಾಲೆ, ಪಾಣತ್ತೂರು ಸ.ಹೈ.ಸೆ. ಶಾಲೆ, ಕಾಸರಗೋಡು ಸ.ಹೈ.ಸೆ. ಶಾಲೆ, ಮುಳ್ಳೇರಿಯ ಪ್ರೌಢಶಾಲೆ, ದೇಲಂಪಾಡಿ ಎಸ್‌.ಸಿ./ಎಸ್‌.ಟಿ. ಹಾಸ್ಟೆಲ್‌, ಪನತ್ತಡಿ ಹೈ.ಸೆ. ಶಾಲೆ, ಬಂಡದ್ಕ ಸ.ಹೈ.ಸೆ. ಶಾಲೆ, ಬೇಡಡ್ಕ ಪಂ. ಎಂಡೋಸಲ್ಫಾನ್‌ ಕಟ್ಟಡ, ಮುನ್ನಾಡ್‌ ಕಾಲೇಜು, ಕುಂಡಂಕುಳಿ ಹೈ.ಸೆ. ಶಾಲೆ, ಪೊಲೀಸ್‌ ಕ್ವಾರ್ಟರ್ಸ್‌, ಚೆಂಗಳ ಹೈ.ಸೆ. ಶಾಲೆ, ಚೆಮ್ನಾಡ್‌ ಎಚ್‌.ಎನ್‌.ಎ.ಸಿ. ಆಸ್ಪತ್ರೆ, ಮೊಗ್ರಾಲ್‌ ಪುತ್ತೂರು ಸ.ಹೈ.ಸೆ. ಶಾಲೆ, ಮಾಯಿಪ್ಪಾಡಿ ಡಯಟ್‌, ಕುಂಬಾxಜೆ ಪಂ. ಬಡ್ಸ್‌ ಶಾಲೆ, ದುರ್ಗಾ ಪರಮೇಶ್ವರೀ ಹೈ.ಸೆ. ಶಾಲೆ, ಸರಕಾರಿ ಜೆ.ಬಿ. ಹೈಯರ್‌ ಸೆಕೆಂಡರಿ ಶಾಲೆ, ಮುಳಿಯಾರು ಬಡ್ಸ್‌ ಶಾಲೆ, ಬೋವಿಕ್ಕಾನ ಹೈ.ಸೆ. ಶಾಲೆ, ಬೆಳ್ಳೂರು ಪ್ರಾ.ಆ. ಕೇಂದ್ರ, ಬದಿಯಡ್ಕ ಪ.ಜಾ. ಹಾಸ್ಟೆಲ್‌, ಪೆರಡಾಲ ಸ.ಹೈ. ಸೆಕೆಂಡರಿ ಶಾಲೆ, ಮಂಜೇಶ್ವರ ತಾ| ಆ. ಕೇಂದ್ರ ಬಳಿಯ ಶಾಲೆಗಳು, ಮಂಜೇಶ್ವರ ಎಸ್‌. ಎ.ಟಿ. ಹೈಯರ್‌ ಸೆಕೆಂಡರಿ ಶಾಲೆ, ಕೊಡ್ಲಮೊಗರು ವಾಣಿವಿಜಯ ಹೈ.ಸೆ. ಶಾಲೆ, ಮಂಗಲ್ಪಾಡಿ ಸ.ಹೈ. ಸೆಕೆಂಡರಿ ಶಾಲೆ, ಪೈವಳಿಕೆ ಸ.ಹೈ.ಸೆ. ಶಾಲೆ, ಕುಂಬಳೆ ಸ.ಹೈ.ಸೆ. ಶಾಲೆ, ಅಂಗಡಿಮೊಗರು ಸ.ಹೈ. ಸೆಕೆಂಡರಿ ಶಾಲೆ, ಎಣ್ಮಕಜೆ ಸತ್ಯನಾರಾಯಣ ಪ್ರೌಢಶಾಲೆ.

100 ಮಂದಿಗೆ ಒಂದು ಸಮುದಾಯ ಅಡುಗೆ ಮನೆ
ಕಾಸರಗೋಡು: ತಲಾ 100 ಮಂದಿಗೆ ಒಂದು ಕಮ್ಯೂನಿಟಿ ಕಿಚ್ಚನ್‌ ಸಜ್ಜುಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ ಬಾಬು ತಿಳಿಸಿದ್ದಾರೆ.

ಪ್ರತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಿಗಾದಲ್ಲಿರುವವರಿಗೆ ಮತ್ತು ಭೋಜನ ಅಗತ್ಯವಿರುವವರಿಗೆ ಆಹಾರ ಒದಗಿಸುವ ನಿಟ್ಟನಲ್ಲಿ ಸಮುದಾಯ ಅಡುಗೆ ಮನೆ ಯೋಜನೆಯ ಅಂಗವಾಗಿ ಇದು ಜಾರಿಗೊಳ್ಳಲಿದೆ. ಈ ಕೇಂದ್ರಗಳಿಗೆ ಆಹಾರ ಸಾಮಗ್ರಿ ತಲಪಿಸುವ ನಿಟ್ಟಿನಲ್ಲಿ ವಾಹನ ಒದಗಿಸುವಿಕೆಗೆ ಆರ್‌.ಟಿ.ಒ. ನೀಡಿರುವ ಪಟ್ಟಿಯನ್ನು ಜಿಲ್ಲಾಧಿಕಾರಿ ಪಂಚಾಯತ್‌ ಡೆಪ್ಯೂಟಿ ಡೈರೆಕ್ಟರ್‌ ಅವರಿಗೆ ಸಲ್ಲಿಸಿದ್ದಾರೆ.

Advertisement

ವಾಹನಗಳನ್ನು ಒದಗಿಸಲು, ಚಾಲಕ ಮತ್ತು ಸಹಾಯಕರಿಗೆ ಪಾಸ್‌ ಒದಗಿಸಲು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಸಭೆ ತೀರ್ಮಾನಿಸಿದೆ.

ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಅಡುಗೆ ಮನೆಯಲ್ಲಿ ಚಟುವಟಿಕೆ ನಡೆಸುವ ಕುಟುಂಬಶ್ರೀ ಕಾರ್ಯಕರ್ತರಿಗೆ ಜಿಲ್ಲಾ ವೈದ್ಯಾಧಿಕಾರಿ ಅವರ ಅರ್ಹತಾಪತ್ರ ಕಡ್ಡಾಯವಾಗಿದೆ.

ಖಾಸಗಿ ಆಸ್ಪತ್ರೆಗಳು, ಸಂಸ್ಥೆಗಳು
ಕಾಸರಗೋಡು ಅರಮನ ಆಸ್ಪತ್ರೆ, ಕೇರ್‌ವೆಲ್‌ ಆಸ್ಪತ್ರೆ, ಕಾಸರಗೋಡು ಏರ್‌ಲೆನ್ಸ್‌ ವಸತಿಗೃಹ, ಪೆರಿಯ ಕೇಂದ್ರೀಯ ವಿವಿ ಹಾಸ್ಟೆಲ್‌, ಪಡನ್ನಕ್ಕಾಡ್‌ ಕೇಂದ್ರೀಯ ವಿವಿಯ ಹಳೆಯ ಕಟ್ಟಡ, ಉದಯಗಿರಿ ವರ್ಕಿಂಗ್‌ ವುಮನ್‌ ಹಾಸ್ಟೆಲ್‌, ಬೆಂಡಿಚ್ಚಾಲ್‌ ಇಸ್ಲಾಮಿಕ್‌ ಶಾಲೆ, ಮಾಲಿಕ್‌ದೀನಾರ್‌ ಆಸ್ಪತ್ರೆ, ಉಕ್ಕಿನಡ್ಕ ಮೆಡಿಕಲ್‌ ಕಾಲೇಜು ಕಟ್ಟಡ, ಕಾಂಞಂಗಾಡ್‌ ಸರ್ಜಿಕೇರ್‌ ಆಸ್ಪತ್ರೆ, ಕೇರ್‌ ಆಂಡ್ಕೂ ರ್‌ ಆಸ್ಪತ್ರೆ, ಕಾಂಞಂಗಾಡ್‌ ಮದರ್ಸ್‌ ಆಸ್ಪತ್ರೆ.

Advertisement

Udayavani is now on Telegram. Click here to join our channel and stay updated with the latest news.

Next