Advertisement

ನೇಕಾರ ನಾಯಕ ಸಿದ್ದು ಸವದಿಗೆ 3ನೇ ಬಾರಿ ಒಲಿದ ತೇರದಾಳ ಮತಕ್ಷೇತ್ರ

10:58 PM May 13, 2023 | Team Udayavani |

ರಬಕವಿ-ಬನಹಟ್ಟಿ : ಬಾಗಲಕೋಟೆ ಜಿಲ್ಲೆಯಲ್ಲಿ ಜಿದ್ದಾಜಿದ್ದಿ ಕ್ಷೇತ್ರವಾಗಿದ್ದ ತೇರದಾಳ ವಿಧಾನಸಭಾ ಕ್ಷೇತ್ರ ಚಿತ್ರ ಸ್ಥಳೀಯ, ನೇಕಾರ ಎಂಬ ಕೂಗಿನಿಂದ ಕೂತುಹಲ ಮೂಡಿಸಿತ್ತು. ಇದರಲ್ಲಿ ಹಾಲಿ ಶಾಸಕ ಬಿಜೆಪಿಯ ಸಿದ್ದು ಸವದಿ ಕಾಂಗ್ರೆಸ್‌ನ ಸಿದ್ದಪ್ಪ ಕೊಣ್ಣೂರ ವಿರುದ್ಧ ಜಯ ಸಾಧಿಸುವುದರ ಮೂಲಕ ಬಾರಿ ಕುತೂಹಲಕ್ಕೆ ತೆರೆ ಏಳೆದಿದ್ದಾರೆ.

Advertisement

ಈ ಬಾರಿ ಬಿಜೆಪಿಯ ಸಿದ್ದು ಸವದಿ, ತಮ್ಮದೇ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ಸಿದ್ದಪ್ಪ ಕೊಣ್ಣೂರ ವಿರುದ್ಧ 10745 ಮತಗಳ ಅಂತರದಿಂದ ಜಯ ಗಳಿಸಿ ಮತ್ತೋಮ್ಮೆ ತೇರದಾಳ ಕ್ಷೇತ್ರವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವುದರ ಮೂಲಕ 3ನೇ ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಕಳೇದ ಬಾರಿ ಮಾಜಿ ಸಚಿವೆ ಉಮಾಶ್ರೀ ವಿರುದ್ಧ 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದ ಸವದಿಯವರ ಗೆಲುವಿನ ಅಂತರ ಈ ಬಾರಿ 10 ಸಾವಿರಕ್ಕೆ ಇಳಿದಿದೆ.

ಎರಡು ರಾಷ್ಟ್ರೀಯ ಪಕ್ಷ ಹಾಗೂ ಸ್ಥಳೀಯ ಪಕ್ಷೇತರ ಅಭ್ಯರ್ಥಿಗೆ ಇದು ಪ್ರತಿಷ್ಠೆಯ ಕಣವಾಗಿತ್ತು. ಆದರೆ ಇಂದು ಮುಂಜಾನೆ ಫಲಿತಾಂಶ ಹೊರ ಬರಲು ಪ್ರಾರಂಭವಾದ ನಂತರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಮೊದಲು ಕೆಲವು ಸುತ್ತುಗಳಲ್ಲಿ ಕಾಂಗ್ರೆಸ್‌ನ ಸಿದ್ದು ಕೊಣ್ಣೂರ ಮುನ್ನಡೆ ಸಾಧಿಸುತ್ತಿದಂತೆ ಬಿಜೆಪಿ ಕಾರ್ಯಕರ್ತರಲ್ಲಿ ಆತಂಕ ಮೂಡಿತ್ತು. ನಂತರ ನಡೆದ ಏಣಿಕೆಯಲ್ಲಿ ಸವದಿ ಪ್ರತಿ ಹಂತದಲ್ಲಿ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡರು. ನಂತರ ನಿರಂತರವಾಗಿ ಹೆಚ್ಚಿನ ಮುನ್ನಡೆಯನ್ನು ಗಳಿಸಿಕೊಂಡು ಅಂತಿಮವಾಗಿ ಜಯ ತಮ್ಮದಾಗಿಸಿಕೊಂಡರು.

ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ನೇಕಾರ ಅಭ್ಯರ್ಥಿಗೆ ಟಿಕೆಟ್ ನೀಡಿರಲಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂಬಾದಾಸ ಕಾಮೂರ್ತಿ ನೇಕಾರರ ಹೆಚ್ಚಿನ ಬೆಂಬಲ ಸಿಗುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಕ್ಷೇತ್ರದಲ್ಲಿನ ನೇಕಾರರು ಆಯಾ ಪಕ್ಷಗಳಿಗೆ ಮತ ಚಲಾಯಿಸಿದ್ದರಿಂದ ನೇಕಾರ ಅಭ್ಯರ್ಥಿ ಅಂಬಾದಾಸ ನಿರೀಕ್ಷಿತ ಮತಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಕಾಂಗ್ರೆಸ್ ಪಕ್ಷದ ೩ ಆಂತರಿಕ ಸಮೀಕ್ಷೆಗಳಲ್ಲಿ ತಮ್ಮ ಹೆಸರೇ ಪ್ರಥಮವಾಗಿದ್ದರೂ ಪರಿಗಣಿಸದೇ ಸಿದ್ದು ಕೊಣ್ಣೂರಗೆ ಟಿಕೆಟ್ ನೀಡಿದ್ದಕ್ಕೆ ಬೇಸರಗೊಂಡ ಡಾ.ಪದ್ಮಜೀತ್ ನಾಡಗೌಡ ಪಾಟೀಲಗೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಡಾ.ಎ.ಆರ್.ಬೆಳಗಲಿ ಅವರು ಬೆಂಬಲ ನೀಡಿದ್ದರಿಂದ ಮತ್ತು ಕಾರ್ಯಕರ್ತರ ಒತ್ತಾಸೆಯಿಂದ ಸ್ಪರ್ಧೆಗಿಳಿದ ಡಾ.ಪದ್ಮಜೀತ್ ರಾಜ್ಯದೆಲ್ಲೆಡೆ ಧೂಳೆಬ್ಬಿಸಿದ ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆದು 22480 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಾಗಾಲೋಟಕ್ಕೆ ಲಗಾಮು ಹಾಕಿದ ಕಾರಣ ಬಿಜೆಪಿಯ ಕಮಲ ಅರಳಲು ದಾರಿ ಸುಗಮಗೊಂಡಂತಾಯಿತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next