Advertisement

Thekkatte: ಸ್ಕೂಟಿ ಢಿಕ್ಕಿಯಾಗಿ ಪಾದಚಾರಿಗೆ ಗಾಯ

09:08 PM Sep 03, 2024 | Team Udayavani |

ತೆಕ್ಕಟ್ಟೆ: ಇಲ್ಲಿನ ರಾ.ಹೆ.66 ಗಣೇಶ್‌ ವೈನ್ಸ್‌ ಎದುರು ಪಾದಚಾರಿಗೆ ಸ್ಕೂಟಿ ಢಿಕ್ಕಿಯಾಗಿ ಗಾಯಗೊಂಡ ಘಟನೆ ಸೆ.2ರಂದು ಬೆಳಗ್ಗೆ ಸಂಭವಿಸಿದೆ.

Advertisement

ದೇವಕಿ(52) ಗಾಯಗೊಂಡವರು.

ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗಲು ರಸ್ತೆಯ ತೀರ ಅಂಚಿನಲ್ಲಿ ರಸ್ತೆ ದಾಟಲು ನಿಂತುಕೊಂಡಿರುವಾಗ  ಅತೀ ವೇಗದಿಂದ ಸ್ಕೂಟಿಯೊಂದು ನೇರವಾಗಿ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗಿದ್ದು, ಪರಿಣಾಮ ದೇವಕಿ ಅವರು ರಸ್ತೆ ಬದಿಗೆ ಬಿದ್ದು ಅವರ ಬಲ ಕೈಮೂಳೆ ಮುರಿತವಾಗಿ ಮುಖಕ್ಕೆ ಹಾಗೂ ಇತರೆ ಕಡೆಗಳಲ್ಲಿ ಗಾಯವಾಗಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯ ಸಹಕಾರದಿಂದ ತತ್‌ಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next