Advertisement
ಬೆಂಗಳೂರಿನ ಸಿಂಗಲ್ ಚಿಪ್ ಸಾಫ್ಟ್‌ವೇರ್ ಖಾಸಗಿ ಕಂಪೆನಿಯ ಸಾಫ್ಟ್‌ವೇರ್ ಎಂಜಿನಿಯರ್ ಸುಜಿತ್ (26) ಮೃತಪಟ್ಟವರು. ಇವರು ಜಯನಗರದ ನಾಗರಾಜ್ ಅವರು ಏಕೈಕ ಪುತ್ರರಾಗಿದ್ದರು. ಅವರ ಗೆಳೆಯರಾದ ಸುಕೃತ್ (25) ಮತ್ತು ಅಕ್ಷಯ್ (25)ನನ್ನು ರಕ್ಷಿಸಲಾಗಿದೆ. ಶುಕ್ರವಾರ ಸಂಜೆ 4.30ರ ಸುಮಾರಿಗೆ ಘಟನೆ ಸಂಭವಿಸಿದೆ.
ಸುಮಾರು 15 ಮಂದಿಯ ತಂಡ ಮಂಜೇಶ್ವರದಲ್ಲಿ ಸ್ನೇಹಿತನ ಮದುವೆ ಸಮಾರಂಭ ಮುಗಿಸಿ, ತೆಕ್ಕಟ್ಟೆ ಕೊಮೆ ಕಡಲ ತೀರದಲ್ಲಿರುವ ಬೀಚ್ ವೇವ್ಸ್ ರೆಸಾರ್ಟ್‌ನಲ್ಲಿ ತಂಗಲು ಬಂದಿತ್ತು. ಅಲ್ಲಿ ನೀರಿನಲ್ಲಿ ಚೆಂಡಾಟವಾಡುತ್ತಿದ್ದರು. ಆಗ ಸಮೀಪದಲ್ಲಿದ್ದ ಮೀನು ಗಾರ ರವಿ ಬಂಗೇರ ಅವರು ನೀರಿನ ಅಬ್ಬರ ಹೆಚ್ಚಾಗಿದೆ ಜಾಗೃತರಾಗಿ ಎಂದು ಎಚ್ಚರಿಸಿದ್ದರು. ಆದರೆ ಅದನ್ನು ಕಡೆಗಣಿಸಿ ಆಟ ಮುಂದುವರಿಸಿದ್ದು ದುರಂತಕ್ಕೆ ಕಾರಣವೆನ್ನಲಾಗಿದೆ. ಸ್ಥಳೀಯರಿಂದ ತುರ್ತು ಸಹಾಯ
ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಮುಂದಾ ದರು. ಸುಜಿತ್ ಅಲೆಗಳ ಮಧ್ಯದಲ್ಲಿ ತೇಲುತ್ತಿರುವುದನ್ನು ಕಂಡ ಮಹಾಬಲ ಬಂಗೇರ, ಗಣೇಶ್ ಪೂಜಾರಿ, ಸಂತೋಷ್, ನಾಗರಾಜ್ ಸಂದೀಪ್, ವಿಜಯ, ಸಂಪತ್ , ರಾಘವೇಂದ್ರ ಹರಪನಕೆರೆ ಹಾಗೂ ಉಮೇಶ್ ಮೆಂಡನ್‌ಅವರು ಥರ್ಮೋಕಾಲ್ ಹಾಗೂ ಹಗ್ಗಗಳ ಸಹಾಯದಿಂದ ತೀರಕ್ಕೆ ತಂದು ಪ್ರಥಮ ಚಿಕಿತ್ಸೆ ನೀಡಿದರು. ಆದರೆ ಸ್ಥಿತಿ ಗಂಭೀರವಾಗಿದ್ದರಿಂದ ಜೀವ ಉಳಿಸಲಾಗಲಿಲ್ಲ. ಸುದ್ದಿ ಕೇಳಿ ಅಪಾರ ಸಂಖ್ಯೆಯ ಜನರು ಸ್ಥಳದಲ್ಲಿ ನೆರೆದಿದ್ದರು. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ಸುಜಿತ್‌ನನ್ನು ಸ್ಥಳೀಯರು ತೀರಕ್ಕೆ ತರುತ್ತಿದ್ದಂತೆ ಜತೆಯಲ್ಲಿದ್ದ ಸ್ನೇಹಿತರು ಆತನ ಜೀವ ರಕ್ಷಣೆಗೆ ಹೆಣಗಾಡುತ್ತಿದ್ದ ಹಾಗೂ ಆಸ್ಪತ್ರೆಗೆ ಸಾಗಿಸಲು ಸುಮಾರು ಅರ್ಧ ಕಿಲೋ ಮೀಟರ್ ವರೆಗೆ ಕಡಲ ತೀರದಲ್ಲೇ ಹೊತ್ತೂಯ್ಯುತ್ತಿದ್ದ ದೃಶ್ಯ ಮನಕಲಕುತ್ತಿತ್ತು
Advertisement