Advertisement

ಕಾವಲುಗಾರನ ಮೇಲೆ ಹಲ್ಲೆ ಮಾಡಿ ಇಪ್ಪತ್ತು ಲಕ್ಷ ಮೌಲ್ಯದ ಟೈರ್ ಕಳ್ಳತನ

02:17 PM Jul 23, 2022 | Team Udayavani |

ಕಲಬುರಗಿ: ಇಲ್ಲಿನ ಚಿಂಚೋಳಿ ತಾಲ್ಲೂಕಿನ ಚಂದಾಪುರ ಮುಖ್ಯ ರಸ್ತೆಯಲ್ಲಿರುವ ಟೈರ್ ಶೋರೂಂ ಕಾವಲುಗಾರನ ಮೇಲೆ ಹಲ್ಲೆ ಮಾಡಿ ಅಂದಾಜು 20 ಲಕ್ಷ ರೂ. ಮೌಲ್ಯದ ಟೈರ್ ಗಳನ್ನು ಕಳ್ಳತನ ಮಾಡಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.

Advertisement

ಸುಮಾರು 60 ಟೈರ್ ಕಳ್ಳತನವಾಗಿವೆ. ಬೆಳಗಿನ ಜಾವ ಶಬ್ದ ಕೇಳಿ ಹೊರಗಡೆ ಬದ್ಧ ಕಾವಲುಗಾರನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಕಳ್ಳರು 60 ಕ್ಕೂ ಹೆಚ್ಚು ಟೈರ್ ಗಳನ್ನು ಲಾರಿಯೊಂದರಲ್ಲಿ ಹಾಕಿಕೊಂಡು ಪರಾರಿಯಾಗಿರುವ ಘಟನೆ ವರದಿಯಾಗಿದೆ.

ಶೋರೂಂಗೆ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ. ಆದರೆ ಅವುಗಳ ಮುಖವನ್ನು ಕಳ್ಳರು ತಿರುವಿದ್ದಾರೆ. ಸಿ.ಸಿ ಕ್ಯಾಮೆರಾದ ಸ್ಟೋರೇಜ್ ಡಿವಿಆರ್ ಉಪಕರಣವನ್ನು ಕಳ್ಳರು ಒಯ್ದಿದ್ದಾರೆ ಎಂದು ಗೊತ್ತಾಗಿದೆ.

ಇದನ್ನೂ ಓದಿ:ಮೂಲ ಕಾಂಗ್ರೆಸಿಗರ ಸರ್ವನಾಶವೇ ಸಿದ್ದರಾಮೋತ್ಸವದ ಉದ್ದೇಶ: ಬಿಜೆಪಿ ವ್ಯಂಗ್ಯ

ಈ ಹಿಂದೆಯೂ ಹಲವು ಬಾರಿ ಇದೇ ಶೋರೂಮ್ ನಲ್ಲಿ ಟೈರ್ ಗಳ ಕಳ್ಳತನ ಆಗಿತ್ತು. ಅದೂ ಅಲ್ಲದೆ ಕೆಲವು ಬಾರಿ ಕಳ್ಳತನಕ್ಕೆ ಪ್ರಯತ್ನ ಮಾಡಲಾಗಿತ್ತು. ಈ ಎಲ್ಲ ವೇಳೆಯಲ್ಲಿ ಸಿಸಿಟಿವಿಯ ಫೂಟೇಜ್ ಗಳು ಮಾಯವಾಗಿದ್ದವು.

Advertisement

ಸ್ಥಳಕ್ಕೆ ಆಗಮಿಸಿರುವ ಚಿಂಚೋಳಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next