Advertisement

ದ್ವಿಚಕ್ರ ವಾಹನ ಕಳವು: ಮೂವರ ಸೆರೆ: 1.5 ಲ. ರೂ. ಮೌಲ್ಯದ ಸೊತ್ತು ವಶ

05:01 AM Jan 14, 2019 | |

ಮಂಗಳೂರು: ಮಂಗಳೂರು ನಗರ ಹಾಗೂ ಇತರ ಜಿಲ್ಲೆಗಳಿಂದ ದ್ವಿಚಕ್ರ ವಾಹನ ಕಳವು ಆರೋಪದಲ್ಲಿ ಮೂವರನ್ನು ನಗರ ಸಿಸಿಬಿ ಪೊಲೀಸರು ರವಿವಾರ ಬಂಧಿಸಿ, 5 ದ್ವಿಚಕ್ರ ವಾಹನ ಮತ್ತು ಮೂರು ಮೊಬೈಲ್‌  ಸಹಿತ 1,58,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗ್ರೆ ಕಸಬಾ ನಿವಾಸಿಗಳಾದ ಸಯ್ಯದ್‌ ಅಫ್ರಿದ್‌ (19), ಮಹಮ್ಮದ್‌ ಸಫಾನ್‌(19) ಮತ್ತು ಮಹಮ್ಮದ್‌ ಗೌಸ್‌ (20) ಬಂಧಿತರು.

Advertisement

ಜ.13ರಂದು  ಬಂದರು ಪೊಲೀಸ್‌ ಠಾಣಾ ವ್ಯಾಪ್ತಿಯ ಬಂದರ್‌ ಪೋರ್ಟ್‌ ರಸ್ತೆಯ ಸುಲಭ್‌ ಶೌಚಾಲಯದ ಬಳಿಯಲ್ಲಿ  ಕೆಲವರು ನಂಬರ್‌ ಪ್ಲೇಟ್‌ ಅಳವಡಿಸದ ದ್ವಿಚಕ್ರ ವಾಹನಗಳಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಬಗ್ಗೆ ಬಂದ ಮಾಹಿತಿ ಆಧಾರದಲ್ಲಿ  ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.

ಆರೋಪಿಗಳಲ್ಲಿ ಐದು ದ್ವಿಚಕ್ರ ವಾಹನಗಳು ಪತ್ತೆಯಾಗಿವೆ. 2018ರ ಆಗಸ್ಟ್‌ನಲ್ಲಿ  ನಗರದ ಜೋಡುಮಠ ರಸ್ತೆಯ ಯುನೈಟೆಡ್‌ ಫ್ಲಾಝಾ ಪಾರ್ಕಿಂಗ್‌ ಸ್ಥಳದಿಂದ ಕಳವುಗೈದ ಸುಝುಕಿ ಆ್ಯಕ್ಸಸ್‌ ಸ್ಕೂಟರ್‌, 2018ರ ಸೆಪ್ಟಂಬರ್‌ನಲ್ಲಿ  ದಕ್ಷಿಣ ದಕ್ಕೆಯ ಬಳಿಯಲ್ಲಿ ಪಾರ್ಕ್‌ ಮಾಡಿದ್ದ ಹೀರೋ  ಹೋಂಡಾ ಸ್ಪೆ$Éಂಡರ್‌ ಬೈಕ್‌, 2016ರಲ್ಲಿ ಮಂಗಳೂರು ಓಲ್ಡ್‌ ಕೆಂಟ್‌ ರಸ್ತೆಯ ಕಟ್ಟಡದ ಬಳಿ  ನಿಲ್ಲಿಸಿದ್ದ ಯಮಹಾ ಎಫ್ ಝೆಡ್‌ ಬೈಕ್‌, 2018ರಲ್ಲಿ ಮಣಿಪಾಲ  ಠಾಣಾ ವ್ಯಾಪ್ತಿಯಿಂದ ಕದ್ದಿದ್ದ ಹೀರೋ  ಹೋಂಡಾ ಸಿಡಿ 100 ಬೈಕ್‌, 2018 ಆಗಸ್ಟ್‌ನಲ್ಲಿ ಹಾಸನ ಜಿಲ್ಲೆಯ ಪೆನ್ಶನ್‌ ಮೊಹಲ್ಲ ವ್ಯಾಪ್ತಿಯಿಂದ  ಕದ್ದಿದ್ದ  ಹೋಂಡಾಡಿಯೋ ಸ್ಕೂಟರ್‌ಗಳನ್ನು  ಹಾಗೂ ಮೂರು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಹಾಗೂ  ಸೊತ್ತುಗಳನ್ನು ಬಂದರು  ಠಾಣೆಗೆ ಹಸ್ತಾಂತರಿಸಲಾಗಿದೆ.

ಇಬ್ಬರು ಹಳೆ ಆರೋಪಿಗಳು
ಬಂಧಿತರ ಪೈಕಿ ಸಯ್ಯದ್‌ ಅಫ್ರಿದ್‌  ವಿರುದ್ಧ  ಪಣಂಬೂರು  ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು,  ತಲೆಮರೆಸಿಕೊಂಡಿದ್ದ. ಮಹಮ್ಮದ್‌ ಸಫಾನ್‌ ವಿರುದ್ಧ ಪಾಂಡೇಶ್ವರ ಮತ್ತು ಪಣಂಬೂರು  ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿವೆ. ಆಯುಕ್ತ ಟಿ.ಆರ್‌. ಸುರೇಶ್‌ ಅವರ ಆದೇಶದಂತೆ ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್‌ ಮಾರ್ಗ ದರ್ಶನದಲ್ಲಿ ನಡೆದ  ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್‌ ಶಾಂತಾರಾಮ, ಪಿಎಸ್‌ಐಗಳಾದ ಶ್ಯಾಮ್‌ಸುಂದರ್‌, ಕಬ್ಟಾಳ್‌ರಾಜ್‌ ಎಚ್‌.ಡಿ. ಮತ್ತು ಸಿಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next