Advertisement

95 ಲಕ್ಷ ಮೌಲ್ಯದ ಕಳವು ಸ್ವತ್ತು ವಾಪಸ್‌

11:19 AM Nov 26, 2021 | Team Udayavani |

ನೆಲಮಂಗಲ: ಪೊಲೀಸ್‌ ಉಪವಿಭಾಗ ವ್ಯಾಪ್ತಿಯ ಪೊಲೀಸ್‌ ಅಧಿಕಾರಿಗಳ ತಂಡ ಕಳೆದ ಮೂರು ತಿಂಗಳಿಂದ ವಿವಿಧ ಪ್ರಕರಣಗಳನ್ನು ಭೇದಿಸಿ ವಶಪಡಿಸಿಕೊಂಡಿದ್ದ ಸುಮಾರು 95 ಲಕ್ಷ ರೂಪಾಯಿಗಳ ಮೌಲ್ಯದ ಕಳವು ಸ್ವತ್ತುಗಳನ್ನು ಕೇಂದ್ರವಲಯ ಐಜಿಪಿ ಎಂ. ಚಂದ್ರಶೇಖರ್‌ ವಾರಸುದಾರರಿಗೆ ಹಿಂತಿರುಗಿಸಿದರು.

Advertisement

ಪಟ್ಟಣ ಪೊಲೀಸ್‌ ಠಾಣೆವ್ಯಾಪ್ತಿಯಲ್ಲಿ ಹಮ್ಮಿ ಕೊಂಡಿದ್ದ ವಿವಿಧ ಅಪರಾಧ ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಂಡ ಕಳವುಮಾಲುಗಳನ್ನು ವಾರಸುದಾರರಿಗೆ ಹಿಂತಿರುಗಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೆಲಮಂಗಲ ಪೊಲೀಸ್‌ ಉಪವಿಭಾಗವ್ಯಾಪ್ತಿಯ ನೆಲಮಂಗಲ ಪಟ್ಟಣ ಠಾಣೆ, ಗ್ರಾಮಾಂತರ ಠಾಣೆ ಮತ್ತು ಮಾದನಾಯಕನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದ ವಿವಿಧ ಪ್ರಕರಣಗಳಲ್ಲಿ 15 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 423 ಗ್ರಾಂ ಚಿನ್ನಾಭರಣಗಳು, 1.41 ಕೆ.ಜಿ. ಬೆಳ್ಳಿ ಆಭರಣಗಳು, 855 ಮೊಬೈಲ್‌ಗ‌ಳು, 11 ದ್ವಿಚಕ್ರ ವಾಹನಗಳನ್ನು ಹಾಗೂ ಸುಮಾರು 25ಸಾವಿರ ರೂಗಳು ಬೆಲೆಬಾಳುವ 2 ಸರಕು ಸಾಗಣೆ ಆಟೋ ಗಳನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ.

ಇದನ್ನೂ ಓದಿ;- ಸಂಗೀತ ಆಲಿಸಲು ಉತ್ತಮ ಆಯ್ಕೆ ಒನ್‍ಪ್ಲಸ್‍ ಬಡ್ಸ್ ಪ್ರೊ: ಏನಿದರ ವಿಶೇಷತೆ? ಬೆಲೆ ಎಷ್ಟು?

ಅಪರಾಧ ಪ್ರಕರಣಗಳನ್ನು ಭೇದಿಸುವ ವೇಳೆ ಹಾಗೂ ಕೆಲವೊಮ್ಮೆ ಕಷ್ಟದ ಕೆಲಸಗಳನ್ನು ಮಾಡುವ ಧಿಕಾರಿಗಳು ಮತ್ತು ಸಿಬ್ಬಂದಿ ಹೆದರದೆ ಧೈರ್ಯವಾಗಿ ಮುನ್ನುಗಬೇಕು ಎಂದು ತಿಳಿಸಿದರು.

Advertisement

ಪೊಲೀಸರಿಗೆ ಬಹಮಾನ: ಮೂರು ಠಾಣೆಗಳ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪಟ್ಟಣಠಾಣೆ ಇನ್ಸ್‌ಪೆಕ್ಟರ್‌ ಎ.ವಿ.ಕುಮಾರ್‌, ಮಾದನಾಯಕನಹಳ್ಳಿ ಇನ್ಸ್‌ಪೆಕ್ಟರ್‌ ಬಿಎಸ್‌.ಮಂಜುನಾಥ್‌, ಸಬ್‌ ಇನ್‌ Õಪೆಕ್ಟರ್‌ಗಳಾದ ದಾಳೇಗೌಡ, ಡಿ.ಮುರಳೀಧರ್‌, ಎನ್‌. ಸುರೇಶ್‌, ಪುಟ್ಟಸ್ವಾಮಿ ಮತ್ತು ಸಿಬ್ಬಂದಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಸೂಕ್ತ ನಗದು ಬಹುಮಾನ ನೀಡುವುದಾಗಿ ಭರವಸೆ ನೀಡಿದರು.

ಎಚ್ಚರವಹಿಸಿ: ಪ್ರಸ್ತುತ ಸಮಾಜದಲ್ಲಿಲ ಎಲ್ಲೆಡೆ ಮಳೆಯಿಂದಾಗಿ ಸಾಕಷ್ಟು ಹಾನಿಗಳಾಗುತ್ತಿರುವುದನ್ನು ಕಾಣುತಿದ್ದೇವೆ. ನಗರ ಪ್ರದೇಶಗಳಲ್ಲಿ ಹಾದುಹೋಗುವ ರಾಜಕಾಲುವೆಗಳು ಮತ್ತು ಗ್ರಾಮೀಣ ಭಾಗದ ದೊಡ್ಡ ದೊಡ್ಡಕಾಲುವೆಗಳಿಗೆ ನಗರ ಪ್ರದೇಶಗಳ ಕಟ್ಟಡ ತ್ಯಾಜ್ಯಗಳನ್ನು ಅವೈಜ್ಞಾನಿಕವಾಗಿ ಹಾಕುತ್ತಿರುವುದರಿಂದ ಮಳೆಯ ನೀರು ಸರಾಗವಾಗಿ ಹರಿದು ಹೋಗದ ಕಾರಣಕ್ಕೆ ಮಳೆಯನೀರು ಎಲ್ಲೆಂದರಲ್ಲಿ ಹರಿದು ಅವಾಂತರಗಳು ಸೃಷ್ಟಿಯಾಗಿವೆ.

ಆದ್ದರಿಂದ ಪ್ರತಿಯೊಬ್ಬರು ತಮ್ಮ ನೆರೆಹೊರೆ ಮತ್ತು ಪ್ರಕೃತಿ ಕುರಿತಾಗಿ ಕಾಳಜಿಯನ್ನು ವಹಿಸಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ನಾವುಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕುರಿತಾಗಿ ಪ್ರತಿಯೊಬ್ಬರು ಎಚ್ಚರಿಕೆಯನ್ನು ವಹಿಸಬೇಕೆಂದು ಐಜಿಪಿ ಎಂ. ಚಂದ್ರಶೇಖರ್‌ ಎಚ್ಚರಿಸಿದರು.

ಭೂಮಿಪೂಜೆ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೊಮ್ಮನಹಳ್ಳಿ ಗ್ರಾಮದ ಬಳಿಯಲ್ಲಿ ನೆಲಮಂಗಲ ವೃತ್ತನಿರೀಕ್ಷಕರ ಕಚೇರಿ, ಸಂಚಾರಿ ಪೊಲೀಸ್‌ಠಾಣೆ, ಗ್ರಾಮಾಂತರ ಪೊಲೀಸ್‌ಠಾಣೆಗಳಿಗೆ ಸುಮಾರು 4.54ಕೋಟಿ ರೂ. ಗಳ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲು ಭೂಮಿಪೂಜೆ ಮಾಡಲಾಗಿದ್ದು ಶೀಘ್ರದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಎಂದರು.

ಜಿಲ್ಲಾಪೊಲೀಸ್‌ವರಿಷ್ಟಾಧಿಕಾರಿ ಡಾ.ಕೋನವಂಶಿಕೃಷ್ಣ ಮಾತನಾಡಿ, ಗ್ರಾಮಾಂತರ ಜಿಲ್ಲೆಯಾದ್ಯಂತ ವಿವಿಧ ಪ್ರಕರಣಗಳಲ್ಲಿ ಹಾಗೂ ವೃತ್ತಿಪರ ಅಪರಾಧಿಗಳಿಗೆ ಕಡಿವಾಣ ಹಾಕುವ ಸಲುವಾಗಿ ಈಗಾಗಲೆ ಅಪರಾಧಿಗಳಿಗೆ ಬೇರೆ ಬೇರೆ ಪ್ರಕರಣಗಳಲ್ಲಿ ಸಿಕ್ಕಿರುವ ಜಾಮೀನುಗಳನ್ನು ವಜಾಗೊಳಿಸಲು ಸೂಕ್ತ ಕ್ರಮವಹಿಸಲಾಗುತ್ತಿದೆ ಹಾಗೂ ಜಾಮೀನುದಾರರಿಗೂ ಎಚ್ಚರಿಕೆ ನೀಡುವ ಸಲುವಾಗಿ ಅವರು ಜಾಮೀನಿಗೆ ನೀಡಿರುವ ಚರ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕುರಿತಾಗಿ ಚಿಂತನೆಗಳನ್ನು ನಡೆಸಲಾಗುತ್ತಿದೆ ಎಂದರು.

ಎಎಸ್‌ಪಿ ಲಕ್ಷ್ಮೀಗಣೇಶ್‌, ಡಿವೈಎಸ್‌ಪಿ ಎಚ್‌ .ಪಿ.ಜಗದೀಶ್‌, ವೃತ್ತನಿರೀಕ್ಷಕ ಎಂ.ಆರ್‌.ಹರೀಶ್‌, ಸಂಚಾರಿ ಠಾಣೆ ಇನ್ಸ್‌ಪೆಕ್ಟರ್‌ ಅರುಣ್‌ಸೋಲುಂಕಿ, ಇನ್ಸ್‌ಪೆಕ್ಟರ್‌ ಎ.ವಿ.ಕುಮಾರ್‌, ಬಿಎಸ್‌.ಮಂಜುನಾಥ್‌, ಗ್ರಾಮಾಂತರ ಠಾಣೆ ಸಬ್‌ಇನ್ಸ್‌ಪೆಕ್ಟರ್‌ ಎಚ್‌.ಟಿ. ವಸಂತ್‌ಕುಮಾರ್‌ ಮತ್ತು ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next