ಕಾಸರಗೋಡು: ಜಿಲ್ಲಾ ಇನ್ಶೂರೆನ್ಸ್ ಕಚೇರಿಯ ಶಟರ್ ಹಾಗೂ ಗ್ರಿಲ್ಸ್ ಮುರಿದು ಕಚೇರಿಯ ಕ್ಯಾಶ್ ಕೌಂಟರ್ ಕಳವುಗೈದು ಸಮೀಪದಲ್ಲಿ ಎಸೆದಿದ್ದಾರೆ. ಕಾಸರಗೋಡು ಹಳೆ ಬಸ್ ನಿಲ್ದಾಣ ಪರಿಸರದ ಮುನ್ಸಿಪಲ್ ಶಾಪಿಂಗ್ ಕಾಂಪ್ಲೆಕ್ಸ್‌ನ ಎರಡನೇ ಮಹಡಿಯಲ್ಲಿರುವ ಕಚೇರಿಯಿಂದ ಕಳವು ಮಾಡಲಾಗಿದೆ. ಕ್ಯಾಶ್ ಕೌಂಟರ್ ಮೂರನೇ ಮಹಡಿಯಲ್ಲಿ ಪತ್ತೆಯಾಗಿದೆ. ದ್ವಿತೀಯ ಶನಿವಾರವಾದುದರಿಂದ ಕಚೇರಿಗೆ ರಜೆ ಇತ್ತು. ಈ ಕಾರಣದಿಂದ ಕ್ಯಾಶ್ ಕೌಂಟರ್‌ನಿಂದ ಏನೆಲ್ಲ ಕಳವಾಗಿದೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕಾಸರಗೋಡು ಸಿ.ಐ. ಪಿ. ಅಜಿತ್ ಕುಮಾರ್ ತಿಳಿಸಿದ್ದಾರೆ.
Advertisement