Advertisement

ಬ್ಯಾಂಕ್‌ನಲ್ಲಿ 2 ಕೋಟಿ ರೂ. ಚಿನ್ನ ಕನ್ನ

01:29 PM Nov 27, 2022 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಬಾಗಿಲನ್ನು ಗ್ಯಾಸ್‌ ಕಟರ್‌ ಬಳಸಿ ನುಗ್ಗಿರುವ ಕಳ್ಳರು, ನಗದು ಸೇರಿ ಸುಮಾರು ಎರಡು ಕೋಟಿ ಮೌಲ್ಯದ ರೂ ಚಿನ್ನದ ಒಡವೆ ದೋಚಿ ಪರಾರಿ ಯಾಗಿರುವ ಘಟನೆ ಶುಕ್ರವಾರ ರಾತ್ರಿ ಘಟನೆ ನಡೆದಿದೆ.

Advertisement

ನಾಲ್ಕನೇ ಶನಿವಾರ ಬ್ಯಾಂಕ್‌ ರಜೆ ಎಂಬುದನ್ನು ತಿಳಿದಿದ್ದ ಕಳ್ಳರು ಈ ಕೃತ್ಯವನ್ನು ಎಸಗಿದ್ದಾರೆಂದು ಶಂಕಿಸಲಾಗಿದೆ. ವಿಷಯ ತಿಳಿದ ಹೊಸಹಳ್ಳಿ ಠಾಣೆ ಪೊಲೀಸರು, ರಜೆಯಲ್ಲಿದ್ದ ಬ್ಯಾಂಕ್‌ ಸಿಬ್ಬಂದಿಯನ್ನು ಕರೆಸಿ ಬ್ಯಾಂಕ್‌ ಒಳಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಗದು ಹಣ ಮತ್ತು ರೈತರಿಂದ ಅಡಮಾನವಿಟ್ಟಿದ್ದ ಚಿನ್ನದ ಒಡವೆಗಳು ಸೇರಿ ಸುಮಾರು ಎರಡರಿಂದ, ಮೂರು ಕೋಟಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್‌ ವರಿಷ್ಠಾಧಿಕಾರಿ ಪುರುಷೋತ್ತಮ್, ಡಿವೈಎಸ್ಪಿ ನಾಗರಾಜ್, ಸರ್ಕಲ್‌‌ ಇನ್ಸ್‌ಪೆಕ್ಟರ್ ಹರೀಶ್‌, ಸಬ್‌ ಇನ್ಸ್‌ಪೆಕ್ಟರ್‌ ಗಜೇಂದ್ರ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಕಳ್ಳರ ಜಾಡು ಪತ್ತೆಗೆ ಶ್ವಾನದಳ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತಂತೆ ಹೊಸಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next