Advertisement

Theft: ಅಮೀನಗಡದ ದೇವಸ್ಥಾನದಲ್ಲಿ ಕಳ್ಳತನ

04:54 PM Mar 26, 2024 | Team Udayavani |

ಅಮೀನಗಡ: ಪಟ್ಟಣದ ಕೊರವರ ಓಣಿಯ ಗದ್ದೆಮ್ಮ ದೇವಿ ದೇವಸ್ಥಾನದಲ್ಲಿ ಬೆಳ್ಳಿ- ಬಂಗಾರದ ವಸ್ತುಗಳನ್ನು ಕಳುವು ಮಾಡಿಕೊಂಡು ಹೋದ ಘಟನೆ ನಡೆದಿದೆ.

Advertisement

ಪಟ್ಟಣದ ಚಿತ್ತರಗಿ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಗದ್ದೆಮ್ಮ ದೇವಿ ದೇವಸ್ಥಾನದ ಕೀಲಿಗಳನ್ನು ಕಳ್ಳರು ಮುರಿದು ದೇವಸ್ಥಾನ ಒಳನುಗ್ಗಿ, ಗದ್ದೇಮ್ಮ ದೇವಿಗೆ ಹಾಕಿದ್ದ 1 ತೊಲೆಯ ಬಂಗಾರದ ಮೂಗುತಿ, 1 ತೊಲೆ ಬೆಳ್ಳಿಯ ಕೊರೆಮಿಸೆ, 2 ತೊಲೆಯ ಬಂಗಾರದ ಬೋರಮಳ, ಒಂದೂವರೇ ತೊಲೆಯ ಬಂಗಾರದ 2 ತಾಳಿ, 10 ತೊಲೆಯ  ಬೆಳ್ಳಿಯ ಎರಡು ಖಡಗ ಹಾಗೂ ಎರಡು ರೇಷ್ಮೆ ಸೀರೆ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೇವಸ್ಥಾನದ ಪೂಜಾರಿ ಸುಂಕಪ್ಪ ಕೊರವರ ತಿಳಿಸಿದ್ದಾರೆ.

ಸ್ಥಳಕ್ಕೆ ಸ್ಥಳೀಯ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ, ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದ  ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next