Advertisement

ನಗರದಲ್ಲಿ ಕಳ್ಳತನ ಪ್ರಕರಣ ತಡೆಗಟ್ಟಲು ಪೊಲೀಸರ ಕಟ್ಟೆಚ್ಚರ

07:32 PM Sep 17, 2022 | Team Udayavani |

ಹೊಳೆನರಸೀಪುರ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧಡೆ ಕಳೆದ ಒಂದು ತಿಂಗಳಿಂದ ಕಳವು ಪ್ರಕರಣ ಹೆಚ್ಚಾಗಿರುವ ಹಿನ್ನೆಲೆ ಪೋಲಿಸ್‌ ಇಲಾಖೆಯನ್ನು ಬೆಚ್ಚಿ ಬೀಳಿಸಿತ್ತು. ಅದರ ಹಿನ್ನೆಲೆ ತಾಲೂಕಿನಾದ್ಯಂತ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಿದೆ.

Advertisement

ಪಟ್ಟಣ ಮತ್ತು ತಾಲೂಕಿನ ಗ್ರಾಮೀಣ ಪ್ರದೇಶ ಗಳಲ್ಲಿ ಅನುಮಾನಸ್ಪದವಾಗಿ ಓಡಾಡುವವರನ್ನು ನಗರ ಠಾಣೆ ಪೊಲೀಸರು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿ ಕಳುಹಿಸಿಕೊಡುವಷ್ಟರ ಮಟ್ಟಿಗೆ ಚುರುಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಖಾವಿ ಧರಿಸಿ ಮನೆ-ಮನೆಗೆ ಭೇಟಿ ಮಾಡಿ, ಭಿಕ್ಷೆ ಬೇಡುತ್ತಿದ್ದ ಖಾವಿಧಾರಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಕಳುಹಿಸಿದ ಘಟನೆ ನಡೆಯಿತು. ಪಟ್ಟಣದ ಕೃಷಿ ಮಾ ರುಕಟ್ಟೆ ಆವರಣದಲ್ಲಿ ರಾತ್ರಿ ತಂಗಿದ್ದು, ಬೆಳಗ್ಗೆ ಎದ್ದು ಗ್ರಾಮೀಣ ಪ್ರದೇಶಗಳಲ್ಲಿ ತೆರಳಿ ವ್ಯಾಪಾರ ಮಾಡುವವರನ್ನು ಸಹ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿ, ಅವರಿಂದ ಅಧಿಕೃತ ಮಾಹಿತಿಯಂತೆ ಅಧಾರ್‌ ಕಾರ್ಡ್‌ ಇತ್ಯಾದಿ ಗಳನ್ನು ಪಡೆದು ಪರಿಶೀಲಿಸಿ ಕಳುಹಿಸಿಕೊಟ್ಟ ಪ್ರಸಂಗ ನಡೆಯಿತು.

ಕಳ್ಳತನ ತಡೆಗೆ ವಾಟ್ಸಾಪ್‌ ಗ್ರೂಪ್‌: ನಗರಠಾಣೆ ಪೊಲೀಸ್‌ ಠಾಣೆ ಅಧಿಕಾರಿಗಳು ಪಟ್ಟಣದಲ್ಲಿ ನಡೆ ಯುತ್ತಿರುವ ಅಪರಾಧ ಪ್ರಕರಣ ಗಳನ್ನು ತಡೆಯುವ ಸಲುವಾಗಿ ವಾಟ್ಸಾಪ್‌ ಗ್ರೂಪ್‌ ಒಂದನ್ನು ರಚಿಸಿ ಆ ಗ್ರೂಪ್‌ನಲ್ಲಿ ಸುಮಾರು ಆರುನೂರಕ್ಕು ಹೆಚ್ಚು ಸದಸ್ಯರನ್ನು ನೋಂದಾಯಿಸಿ ಸಮಾಜದಲ್ಲಿನ ಅಪರಾಧ ಪ್ರಕರಣ ಸೇರಿದಂತೆ ಬಹಳಷ್ಟು ಮಾಹಿತಿಗಳನ್ನು ಸಾರ್ವಜನಿಕರಿಗೆ ತಿಳಿಸುವ ಹೊಸ ಪ್ರಯತ್ನ ಆರಂಭಿಸಿದೆ. ಇದರಿಂದ ಪಟ್ಟಣದಲ್ಲಿ ಇನ್ಮುಂದೆ ಯಾವುದೇ ಕಳವು ಪ್ರಕರಣ ಸೇರಿದಂತೆ ಯಾವುದೇ ಅಪರಾಧ ಪ್ರಕರಣಗಳು ನಡೆಯದಂತೆ ತಡೆಯುವುದು ಮುಖ್ಯ ಉದ್ದೇಶವಾಗಿದೆ.

ನಿವಾಸಿಗಳಿಗೆ ಆತಂಕ ಸೃಷ್ಟಿಸಿದ ಸರಣಿ ಕಳವು: ಕಳೆದ ಹದಿನೈದು ದಿನಗಳ ಹಿಂದೆ ಪಟ್ಟಣದ ಹೃದ ಯಭಾಗದಲ್ಲಿ ಒಂದೇ ದಿನದಲ್ಲಿ ಏಳು ಕಡೆ ಕಳುವು ಪ್ರಕರಣಗಳು ನಡೆದವು. ಅದರಂತೆ ಪಟ್ಟಣದ ಅಕ್ಕಕುರು ಬರ ಬೀದಿಯಲ್ಲಿ ಬೆಳ್ಳಂಬೆಳಗ್ಗೆಯೇ ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆ ಕತ್ತಿನಲ್ಲಿದ್ದ ಚಿನ್ನದ ಸರ ಕದ್ದೊಯ್ದ ಘಟನೆ ಮತ್ತು ಚಿಟ್ಟನಹಳ್ಳಿ ಬಡಾವಣೆಯಲ್ಲಿ ಮನೆ ಬಾಗಿಲು ಮುರಿದ ಘಟನೆಗಳು ಪಟ್ಟಣದ ನಿವಾಸಿಗಳಿಗೆ ಆತಂಕ ಸೃಷ್ಟಿಸಿತ್ತು. ಈ ಕಳವು ಪ್ರಕರಣಗಳು ನಡೆದ ನಂತರ ಪೊಲೀಸ್‌ ಇಲಾಖೆ ಸಂಪೂರ್ಣವಾಗಿ ಅಲರ್ಟ್‌ ಅಗಿದೆ ಎಂದು ಹೇಳಬಹುದಾಗಿದೆ.

ಪ್ರಸ್ತುತ ನಗರಠಾಣೆ ಪಿಎಸ್‌ಐ ಅರುಣ್‌ ಅವರು ಕಳವು ಪ್ರಕರಣಗಳನ್ನು ತಡೆಯಲು ಬೇಕಾದ ಎಲ್ಲ ರೀತಿಯ ಕ್ರಮಕೈಗೊಳ್ಳಲು ಮುಂದಾಗಿರುವುದು ಸಾರ್ವಜ ನಿಕರ ಪ್ರಶಂಶೆಗೆ ಪಾತ್ರವಾಗಿದೆ.ಜನಸಂಖ್ಯ ಹೆಚ್ಚಾ ದಂತೆ ಪೊಲೀಸ್‌ ಸಿಬ್ಬಂದಿ ಹೆಚ್ಚಾಗಬೇಕಿದ್ದು, ಸರ್ಕಾರ ಹೆಚ್ಚಿನ ಸಿಬ್ಬಂದಿ ಒದಗಿ ಸುವಂತೆ ಸಾರ್ವಜನಿಕರು ಮತ್ತು ಸಂಘ ಸಂಸ್ಥೆ ಪದಾಧಿಕಾರಿಗಳು ರಾಜ್ಯ ಸರ್ಕಾರವನ್ನು ಆಗ್ರಹಪಡಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next