ವಿಟ್ಲ: ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರು ಆರೋಪಿಯೋರ್ವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳದ ಕಣ್ಣೂರು ಜಿಲ್ಲೆಯ ಕೂಟಪರಂಬ ಗ್ರಾಮದ ಮಹಮ್ಮದ್ ಕೆ.ಯು.(42) ಬಂಧಿತ ಆರೋಪಿ.
ಘಟನೆ ವಿವರ: ಮನೆ ಸದಸ್ಯರು ಮನೆಯಲ್ಲಿರುವಾಗಲೇ ಕಳ್ಳರು ಮನೆಯ ಹಿಂಬಾಗಿಲು ಮುರಿದು ಮನೆಯ ಕಪಾಟಿನಲ್ಲಿದ್ದ ಸುಮಾರು 4,28,000 ರೂ. ಮೌಲ್ಯದ ಒಟ್ಟು 107 ಗ್ರಾಂ. ನಷ್ಟು ಆಭರಣ ಕಳ್ಳತನ ಮಾಡಿದ ಘಟನೆ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿ ಮಾ.10 ರಂದು ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅದರಂತೆ ಕಳವುಗೈದ ಮಾಲನ್ನು ಕಾಸರಗೂಡಿನ ಜ್ಯುವೆಲರಿ ಅಂಗಡಿಯಿಂದ ಸುಮಾರು 3,71,600 ರೂ. ಮೌಲ್ಯದ 80.10 ಗ್ರಾಂ ನಷ್ಟು ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
Related Articles
ಕಳ್ಳತನ ಪ್ರಕರಣ ದಾಖಲಾದ ಕೂಡಲೇ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನವಣೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಹಾಗೂ ಬಂಟ್ವಾಳ ಡಿವೈಎಸ್‌ಪಿ ಪ್ರತಾಪಸಿಂಗ್ ತೋರಟ್ ಅವರ ಮಾರ್ಗದರ್ಶನದಲ್ಲಿ ವಿಟ್ಲದ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ನಾಗರಾಜ್ ಎಚ್ ಇ ಇವರ ನೇತೃತ್ವದಲ್ಲಿ ಠಾಣಾ ಪಿಎಸ್ ಐ ಸಂದೀಪ್ ಕುಮಾರ್ ಶೆಟ್ಟಿ ಪಿಎಸ್ ಐ (ಕಾಮತ್ತುಸು), ರುಕ್ಮಾ ನಾಯ್ಕ್ ಪಿಎಸ್‌ಐ (ತನಿಖೆ-1) ಹಾಗೂ ಸಿಬಂದಿಗಳು ಪತ್ತೆಗೆ ಪ್ರಮುಖ ಪಾತ್ರ ವಹಿಸಿದ್ದಾರೆ.