ಕಾರ್ಕಳ: ಕಲ್ಯಾ ಗ್ರಾಮದ ಕಂಗಿತ್ಲು ಎಂಬಲ್ಲಿ ಡಿ.3ರಂದು ರಾತ್ರಿ ಇಲ್ಲಿನ ನಿವಾಸಿ ಉಷಾ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ.
Advertisement
ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಅಡುಗೆ ಮನೆಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ ಕೊಠಡಿಯಲ್ಲಿದ್ದ ಗೋದ್ರೆಜ್ ಕಪಾಟಿನಲ್ಲಿಟ್ಟಿದ್ದ ಪರ್ಸ್ ಹಾಗೂ ಸ್ಟೀಲಿನ ಡಬ್ಬದಲ್ಲಿ ಇರಿಸಿದ್ದ ಸುಮಾರು 4,50 ಲಕ್ಷ ರೂ ಮೌಲ್ಯದ ಸುಮಾರು 156 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಘಟನೆಗೆ ಸಂಬಂದಿಸಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ