Advertisement

ಗಂಗಾವತಿ: ಸೂಪರ್ ಮಾರ್ಕೆಟ್ ನ ಬಾಗಿಲು ಮುರಿದು ಲಕ್ಷಾಂತರ ರೂ. ಕಳವು

09:22 AM Jul 18, 2021 | Team Udayavani |

ಗಂಗಾವತಿ: ನಗರದ ಹೃದಯ ಭಾಗದಲ್ಲಿರುವ ವಿ.ಎ. ಮಹಮ್ಮದ್ ಸೂಪರ್ ಮಾರ್ಕೆಟ್ ನ ಬಾಗಿಲು ಮುರಿದು ಕಳ್ಳತನ ಮಾಡಿದ ಪ್ರಕರಣ ಶನಿವಾರ ರಾತ್ರಿ ನಡೆದಿದೆ.

Advertisement

ಮಹಾವೀರ ವೃತ್ತದ ಬಳಿ ಇರುವ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿರುವ ವಿ.ಎ.ಮಹಮ್ಮದ್ ಸೂಪರ್ ಮಾರ್ಕೆಟ್ ಶಟರ್ ಬಾಗಿಲು ಮುರಿದು ಕಳ್ಳರು ಹಣ ಮತ್ತು ಕೆಲವು ವಸ್ತುಗಳನ್ನು ದೋಚಿದ್ದಾರೆ. ಕಳ್ಳತನ ಕ್ಕೂ ಮುಂಚೆ ಸೂಪರ್ ಮಾರ್ಕೆಟಿನ ಸುತ್ತಲಿರುವ ಸಿಸಿ ಕ್ಯಾಮೆರಾಗಳಿಗೆ ಹಾಳೆಯನ್ನು ಮುಚ್ಚಿ ನಂತರ ಶಟರ್ ಮತ್ತು ಕಿಟಕಿಯ ಗಾಜನ್ನು ಮುರಿದು ಕಳ್ಳರು ಒಳ ನುಗ್ಗಿದ್ದಾರೆ.

ಇದನ್ನೂ ಓದಿ:ಒಲಿಂಪಿಕ್ ಕ್ರೀಡಾಗ್ರಾಮದಲ್ಲಿ ಇಬ್ಬರು ಕ್ರೀಡಾಪಟುಗಳಿಗೆ ಕೋವಿಡ್ ಸೋಂಕು ದೃಢ

ಸ್ಥಳಕ್ಕೆ ನಗರ ಠಾಣೆ ಪಿಐ ಟಿ ವೆಂಕಟಸ್ವಾಮಿ ಹಾಗೂ ಕ್ರೈಂ ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳವನ್ನು ಕರೆಸಿ ಕಳ್ಳರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ .

Advertisement

ಕಳ್ಳರು ಸಿಸಿ ಕ್ಯಾಮೆರಾಗಳನ್ನು ಮುಚ್ಚಿ ನಂತರ ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ ಸೂಪರ್ ಮಾರ್ಕೆಟಿನ ಶಟರ್ ಮುರಿದು ಒಳನುಗ್ಗಿ ಹಣ ಮತ್ತು ವಸ್ತು ದೋಚಿದ್ದಾರೆಂಬ ಮಾಹಿತಿ ಲಭ್ಯವಾಗಲಿದೆ ಎಂದು ನಗರ ಠಾಣೆಯ ಪಿಐ ಟಿ. ವೆಂಕಟಸ್ವಾಮಿ ಉದಯವಾಣಿಗೆ ತಿಳಿಸಿದ್ದಾರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next