ಹುಣಸೂರು: ಎರಡು ದಿನಗಳ ಹಿಂದಷ್ಟೆ ಉದ್ಘಾಟನೆಗೊಂಡಿದ್ದ ದೇವಾಲಯದಲ್ಲಿ ಕಳ್ಳತನ ನಡೆದಿರುವ ಘಟನೆ ನಗರಕ್ಕೆ ಸಮೀಪದ ಚಿಕ್ಕ ಹುಣಸೂರು ಹಳೆಯೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ.
ಚಿಕ್ಕಹುಣಸೂರು ಹಳೆಯೂರಿನ ಕೆರೆ ದಡದಲ್ಲಿ ನಿರ್ಮಿಸಿದ್ದ ಬನ್ನಂತಮ್ಮ ದೇವಾಲಯ ಶುಕ್ರವಾರ ಉಧ್ಘಾಟನೆಗೊಂಡಿತ್ತು. ದೇವಾಲಯದ ಬಾಗಿಲಿನ ಬೀಗ ಮುರಿದು ಹಾಕಿರುವ ಕಳ್ಳರು ಗೋಲಕ ಒಡೆದು ಹುಂಡಿ ಹಣ, ದೇವರ ಮೇಲಿನ ತಾಳಿ ಹಾಗೂ ದೇವಸ್ಥಾನದ ಆವರಣದಲ್ಲಿ ಅಳವಡಿಸಿದ್ದ ಎರಡು ಲೈಟ್ ಗಳನ್ನು ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಭಾನುವಾರ ಬೆಳಗ್ಗೆ ಪೂಜೆ ಮಾಡಲು ಅರ್ಚಕರು ಬಂದ ವೇಳೆ ಆವರಣದಲ್ಲಿ ಅಳವಡಿಸಿದ್ದ ಮಕ್ಯೂ೯ರಿ ಲೈಟ್ ಉರಿದಿರುವುದು ಕಂಡು ಅನುಮಾನದಿಂದ ದೇವಾಲಯದ ಬಳಿ ಹೋಗಿ ನೋಡಿದಾಗ ಬಾಗಿಲು ಒಡೆದಿರುವುದು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Related Articles
ನಗರ ಠಾಣೆ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ದೇವಾಲಯಕ್ಕೆ ಭೇಟಿ ನೀಡಿ ಪರಿಶಿಲಿಸಿದ್ದಾರೆ.