Advertisement

ಹಿರೀಸಾವೆ ಶಾಲಾ ಕಾಲೇಜಿನಲ್ಲಿ ಕಳ್ಳತನ

04:29 PM Mar 22, 2020 | Suhan S |

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿ ಕೇಂದ್ರದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಗೆ ಶುಕ್ರವಾರ ತಡರಾತ್ರಿ ನುಗ್ಗಿರುವ ಕಳ್ಳರು ಸುಮಾರು 2.40 ಲಕ್ಷ ರೂ. ಮೌಲ್ಯದ ಯುಪಿಎಸ್‌ ಬ್ಯಾಟರಿ, ಸಿಸಿ ಕ್ಯಾಮೆರಾ ಹಾಗೂ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

Advertisement

ಹಿರೀಸಾವೆಯ ಒಂಟಿಕೊಪ್ಪಲಿನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿರುವ ಕಂಪ್ಯೂಟರ್‌ ಕೊಠಡಿಯ ಬಾಗಿಲ ಬೀಗ ಮುರಿದು ಒಳಗೆ ನುಗ್ಗಿರುವ ಕಳ್ಳರು ಸುಮಾರು 16 ಬ್ಯಾಟರಿಗಳನ್ನು ಕಳ್ಳತನ ಮಾಡಿದ್ದು, ನಂತರ ಅದರ ಪಕ್ಕದಲ್ಲಿ ಇರುವ ಸರ್ಕಾರಿ ಪ್ರೌಢಶಾಲೆಯ ಕಂಪ್ಯೂಟರ್‌ ಕೊಠಡಿಯ ಬಾಗಿಲು ಬೀಗ ಮುರಿದು ಅಲ್ಲಿದ್ದ ಹದಿನಾರು ಬ್ಯಾಟರಿ, ಕಚೇರಿಯಲ್ಲಿದ್ದ ಸಿಸಿ ಕ್ಯಾಮರಾದ ಡಿಆರ್‌, ಹಾರ್ಡ್‌ಡಿಸ್ಕ್, ಮಾನಿಟರ್‌ ಹಾಗೂ ಹೊರಭಾಗದಲ್ಲಿ ಅಳವಡಿಸಿದ್ದ, ಎರಡು ಸಿಸಿ ಕ್ಯಾಮೆರಾವನ್ನು ಹೊತ್ತೂಯ್ದಿದ್ದಾರೆ.ಶಾಲಾ ಕಾಲೇಜಿನ ಕಂಪ್ಯೂಟರ್‌ ಕೊಠಡಿಯಿಂದ ಸುಮಾರು 2.40 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದೆ ಎಂದು ಇಲಾಖೆ ಅಧಿಕಾರಿಗಳು ಹಿರೀಸಾವೆ ಠಾಣೆಗೆ ದೂರು ನೀಡಿದ್ದಾರೆ.

ಕಳ್ಳತನ ನಡೆದ ಸ್ಥಳಕ್ಕೆ ಶನಿವಾರ ಬೆಳಗ್ಗೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ತಪಾಸಣೆ ನಡೆಸಿದರು. ಹಿರೀಸಾವೆ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next