ಬೆಂಗಳೂರು: ಶೋಕಿ ಜೀವನಕ್ಕಾಗಿ ತನ್ನ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕರನ್ನು ಕರೆದೊಯ್ದು ಚಿನ್ನಾಭರಣ ಅಂಗಡಿ ಯಲ್ಲಿ ಬೆಳ್ಳಿಯ ಗಟ್ಟಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳು ಚಾಮರಾಜಪೇಟೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಾಗರಬಾವಿ ನಿವಾಸಿ ರಾಹುಲ್ ಜೈನ್ ಹಾಗೂ ಆತನ ಸಹಚರರಾದ ಎಸ್.ಜಿ.ಪಾಳ್ಯ ನಿವಾಸಿಗಳಾದ ರಾಜೇಶ್ ಮತ್ತು ಮಧು ಬಂಧಿತರು. ಆರೋಪಿಗಳಿಂದ 3.38 ಲಕ್ಷ ರೂ.ನಗದು, ಎಂಟುಕೆ.ಜಿ. ಬೆಳ್ಳಿಯ ಗಟ್ಟಿ, ವಸ್ತುಗಳು ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.
ಚಾಮರಾಜಪೇಟೆ ಠಾಣೆ ವ್ಯಾಪ್ತಿಯ ಬೃಂದಾವನಗರದಲ್ಲಿ ಆಭರಣ ತಯಾರು ಮಾಡಿಸಿಕೊಡುವ ಅಂಗಡಿ ಇದ್ದು, ಗ್ರಾಹಕರಿಗೆ ಬೇಕಾದ ವಿನ್ಯಾಸವುಳ್ಳ ಆಭರಣಗಳನ್ನು ಆರ್ಡರ್ ಪಡೆದು ಬೇರೆಡೆಮಾಡಿಸಿ ಕೊಡಲಾಗುತ್ತದೆ. ಅದೇ ಅಂಗಡಿಯಲ್ಲಿ ಮೂವರು ಮೇ 21ರಂದು ರಾತ್ರಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಮರುದಿನ ಅಂಗಡಿ ಮಾಲೀಕರು ಬಾಗಿಲು ತೆರೆಯುವಾಗ ಸತ್ಯಾಂಶ ಬೆಳಕಿಗೆ ಬಂದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದ ಪೊಲೀಸರು ಹೇಳಿದರು.
ಆರೋಪಿ ಕೃತ್ಯ ಎಸಗಿದ ಚಿನ್ನಾಭರಣ ಮಳಿಗೆಯಲ್ಲಿ ಎರಡ್ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾನೆ. ಹೀಗಾಗಿ ಮಳಿಗೆಯಲ್ಲಿ ಎಲ್ಲೆಲ್ಲಿ ಚಿನ್ನಾಭರಣ, ನಗದು ಇಡಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದ.
Related Articles
ಶೋಕಿಗಾಗಿ ಕೃತ್ಯ: ರಾಹುಲ್ ಜೈನ್ ತನ್ನ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಮತ್ತು ಮಧುಗೆ ಹಣದ ಆಮಿಷವೊಡ್ಡಿದ್ದಾನೆ. ಕಷ್ಟದಲ್ಲಿದ್ದ ಇಬ್ಬರು ಕೃತ್ಯಕ್ಕೆ ಸಹಕಾರ ನೀಡುವುದಾಗಿ ಒಪ್ಪಿಕೊಂಡಿದ್ದರು. ಅದರಂತೆ ಮೇ 21ರಂದು ರಾತ್ರಿ 11ಗಂಟೆ ಸುಮಾರಿಗೆ ಚಿನ್ನಾಭರಣ ಮಳಿಗೆಯರೋಲಿಂಗ್ ಶೆಟರ್ಗೆ ಹಾಕಿದ್ದ ಬೀಗಗಳನ್ನು ಆಕ್ಸೆಡ್ಬ್ಲೇಡ್ನಿಂದ ಕತ್ತರಿಸಿ, ಸಿಸಿಕ್ಯಾಮೆರಾಕ್ಕೆ ಬಟ್ಟೆ ಕಟ್ಟಿ ಒಳ ನುಗ್ಗಿ ಬೆಳ್ಳಿಯ ಗಟ್ಟಿಗಳನ್ನು ಪರಾರಿಯಾಗಿದ್ದರು ಅನುಮಾನದ ಮೇಲೆ ಪೊಲೀಸರು ರಾಹುಲ್ನನ್ನು ವಿಚಾರಣೆ ನಡೆಸಿದಾಗ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಚಾಮರಾಜಪೇಟೆ ಠಾಣೆಯ ಇನ್ಸ್ಪೆಕ್ಟರ್ ಎರ್ರಿಸ್ವಾಮಿ ಮತ್ತು ತಂಡ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.