Advertisement

ಕಳ್ಳತನ; ಆರೋಪಿ ಸೆರೆ-ಚಿನ್ನಾಭರಣ ಜಪ್ತಿ

05:48 PM Jul 27, 2022 | Team Udayavani |

ಮುದಗಲ್ಲ: ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಠಾಣೆ ಸೇರಿದಂತೆ ಮುದಗಲ್ಲ ಠಾಣೆ ವ್ಯಾಪ್ತಿಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುದಗಲ್ಲ ಪೊಲೀಸರು 2.45 ಲಕ್ಷ ರೂ. ಮೌಲ್ಯದ ಬೆಳ್ಳಿ ಮತ್ತು ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ ಎಂದು ಲಿಂಗಸುಗೂರು ಡಿವೈಎಸ್ಪಿ ಎಸ್‌. ಮಂಜುನಾಥ ತಿಳಿಸಿದರು.

Advertisement

ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತೀಚೆಗೆ ಮುದಗಲ್ಲ ಠಾಣೆ ವ್ಯಾಪ್ತಿಯಲ್ಲಿ 2 ಕಳ್ಳತನ ಪ್ರಕರಣಗಳು ಜರುಗಿದ್ದವು. ಅದಕ್ಕೆ ಸಂಬಂಧಿಸಿದಂತೆ ಎಸ್ಪಿ ನಿಖೀಲ್‌ ಬಿ. ವಿಶೇಷ ತಂಡ ರಚಿಸಿದ್ದರು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಕುಕಮಾರ, ಡಿವೈಎಸ್ಪಿ ಲಿಂಗಸುಗೂರ, ಮಸ್ಕಿ ಸಿಪಿಐ ಸಂಜೀವ ಬಳಿಗಾರ ಮಾರ್ಗದರ್ಶನದಲ್ಲಿ ಮುದಗಲ್ಲ ಠಾಣೆ ಪಿಎಸೈ ಪ್ರಕಾಶರಡ್ಡಿ ಡಂಬಳ ಹಾಗೂ ಸಿಬ್ಬಂದಿಗಳಾದ ಶರಣರಡ್ಡಿ, ಮಂಜುನಾಥ, ಅಮರೇಶ, ಶಿವನಗೌಡ, ಕೃಷ್ಣ, ಅಡಿವೆಪ್ಪ, ಹನುಮಂತ ತಂಡವು ಕಳ್ಳರನ್ನು ಬಂಧಿಸಿದೆ ಎಂದರು.

ಕದೀಮರನ್ನು ತನಿಖೆಗೊಳಪಡಿಸಿ ಇಳಕಲ್ಲ ಠಾಣೆ ವ್ಯಾಪ್ತಿಯಲ್ಲಿ ಒಂದು ಮತ್ತು ಮುದಗಲ್ಲ ಠಾಣೆ ವ್ಯಾಪ್ತಿಯ ನಾಗರಾಳ ಗ್ರಾಮದ ಬಸವರಾಜ ಬಿರಾದಾರ, ನಾಗಲಾಪುರ ಗ್ರಾಮದ ಹನುಮಪ್ಪ ಪೂಜಾರಿ ಎಂಬವರ ಮನೆಯಲ್ಲಿ ಕಳ್ಳತನ ಮಾಡಿರುವುದನ್ನು ಆರೋಪಿತರಾದ ಇಳಕಲ್ಲ ಮೂಲದ ಆಲಂಪೂರ ಪೇಟೆಯ ನಾಗರಾಜ ಆಂಜನೇಯ್ಯ ಕಲ್ಲುಗುಡಿ ಕುಂಚಿ ಕೊರವರ ಮತ್ತು ಇನ್ನೋರ್ವ ಆರೋಪಿ ಬಾಲಪರಾಧಿಯಾಗಿದ್ದು, ಅವರನ್ನು ಪ್ರತ್ಯೇಕವಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದರು.

ಈ ವೇಳೆ ಮಸ್ಕಿ ಸಿಪಿಐ ಸಂಜೀವ ಬಳಿಗಾರ, ಮುದಗಲ್ಲ ಪಿಎಸೈ ಪ್ರಕಾಶ ರಡ್ಡಿ ಡಂಬಳ, ಎಎಸೈ ಹಾಗೂ ಸಿಬ್ಬಂದಿ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next