Advertisement

ಹಿರಿಯ ವರ್ತಕ ಪಿ.ರಘುವೀರ್ ಪ್ರಭು ನಿಧನ

01:37 PM Feb 05, 2023 | Team Udayavani |

ತೀರ್ಥಹಳ್ಳಿ: ಪಟ್ಟಣದ ಗೌಡ ಸಾರಸ್ವತ ಸಮಾಜದ ಪ್ರಮುಖ, ಹಿರಿಯ ವರ್ತಕ ಪಿ. ರಘುವೀರ್ ಪ್ರಭು (78 ವರ್ಷ) ಶನಿವಾರ ತಡರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು ಎಂದು ತಿಳಿದು ಬಂದಿದೆ.

Advertisement

ಇವರು ತಮ್ಮ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಗಳ ಮೂಲಕ ತಾಲೂಕಿನ ಚಿರಪರಿಚಿತ ವ್ಯಕ್ತಿಯಾಗಿದ್ದವರು.

ರಥಬೀದಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ನಿರ್ಮಾಣದ ಮೂಲ ಪ್ರೇರಕರಲ್ಲೊಬ್ಬರಾಗಿದ್ದರು. ತಮ್ಮ ವ್ಯವಹಾರಕ್ಕೆ ಕೊಟ್ಟಷ್ಟೇ ಪ್ರಾಮುಖ್ಯತೆ ದಾರ್ಮಿಕ ಕಾರ್ಯಗಳಿಗೂ ಕೊಟ್ಟಿರುವುದು ಗಮನಾರ್ಹ.ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ  ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next