Advertisement

6 ವರ್ಷದ ಮಗುವಿಗೆ ಸೋಂಕು

06:46 PM Jun 19, 2020 | Naveen |

ತೀರ್ಥಹಳ್ಳಿ: ಪಟ್ಟಣಕ್ಕೆ ಹೊಂದಿ ಕೊಂಡಿರುವ ಮೇಲಿನ ಕುರುವಳ್ಳಿ ಗ್ರಾಪಂ ವ್ಯಾಪ್ತಿಯ ವಿಠಲ ನಗರದಲ್ಲಿ 6 ವರ್ಷದ ಗಂಡು ಮಗುವೊಂದಕ್ಕೆ ಕೋವಿಡ್ ಸೋಂಕು ದೃಢಪಟ್ಟಿದೆ.

Advertisement

ಕುರುವಳ್ಳಿ ಪುತ್ತಿಗೆ ಮಠದ ಹಿಂಭಾಗವಿರುವ ವಿಠಲ ನಗರಕ್ಕೆ ಮುಂಬೈನಲ್ಲಿದ್ದ ವ್ಯಕ್ತಿಯೊಬ್ಬರು ಇತ್ತೀಚೆಗೆ ಬಂದಿದ್ದರು. ವಿಷಯ ತಿಳಿಯುತ್ತಿದ್ದಂತೆ ತಾಲೂಕು ಆಡಳಿತ ತಕ್ಷಣ ಆ ವ್ಯಕ್ತಿಯನ್ನು ಕ್ವಾರಂಟೈನ್‌ಗೆ ಒಳಪಡಿಸಿತ್ತು. ಕ್ವಾರಂಟೈನ್‌ನಲ್ಲಿ ಆ ವ್ಯಕ್ತಿಗೆ ಕೋವಿಡ್ ಇರುವುದು ದೃಢಪಟ್ಟಿತ್ತು. ಕೂಡಲೇ ಅವರನ್ನು ಶಿವಮೊಗ್ಗದ ಕೋವಿಡ್ ಆಸ್ಪತ್ರೆಯಾದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಮೂರು ದಿನಗಳ ಹಿಂದೆ ಭಾನುವಾರ ವಿಠಲ ನಗರಕ್ಕೆ ಬಂದಿದ್ದರು. ಅವರಲ್ಲಿ 6 ವರ್ಷದ ಗಂಡು ಮಗುವಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ತಾಯಿ ಹಾಗೂ ಎಂಟು ವರ್ಷದ ಮಗುವಿಗೆ ಕೋವಿಡ್ ನೆಗೆಟಿವ್‌ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ವಿಠಲನಗರದ ಸೋಂಕು ದೃಢಪಟ್ಟ ಅಕ್ಕಪಕ್ಕದ 5 ಮನೆ ವ್ಯಾಪ್ತಿಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಇನ್ನುಳಿದ ಇನ್ನೂರು ಮೀಟರ್‌ ದೂರದವರೆಗಿನ ಮನೆಗಳನ್ನು ಬಫರ್‌ ಜೋನ್‌ ಮಾಡಲಾಗಿದೆ. ಗ್ರಾಪಂನಿಂದ ಮನೆಗಳ ಸುತ್ತ ಮುತ್ತ ಔಷಧ ಸಿಂಪಡಣೆ ಮಾಡಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಬೆಳಗ್ಗೆ ತಹಶೀಲ್ದಾರ್‌ ಡಾ| ಶ್ರೀಪಾದ್‌ ಸೇರಿದಂತೆ ಕಂದಾಯ ಅಧಿಕಾರಿ ಕಟ್ಟೆ ಮಂಜುನಾಥ್‌, ತಾಲೂಕು ಆರೋಗ್ಯಾಧಿಕಾರಿ, ಸ್ಥಳೀಯ ಗ್ರಾಪಂ ಪಿಡಿಒ, ಗ್ರಾಪಂ ಸದಸ್ಯರು, ಪೊಲೀಸರು ಸೇರಿ ಗ್ರಾಮಕ್ಕೆ ತೆರಳಿ ಸೀಲ್‌ಡೌನ್‌ ಮಾಡಿದ್ದಾರೆ. ತೀರ್ಥ ಹಳ್ಳಿಯಲ್ಲಿ ಇದು ನಾಲ್ಕನೇ ಕೇಸಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next