Advertisement

ತೀರ್ಥಹಳ್ಳಿಯಲ್ಲಿ ಕೋವಿಡ್ ಪತ್ತೆ: ಸ್ಥಳೀಯರ ಆತಂಕ

01:05 PM Jun 29, 2020 | Naveen |

ತೀರ್ಥಹಳ್ಳಿ: ಶಾಂತವಾಗಿದ್ದ ಪಟ್ಟಣದಲ್ಲಿ ಇದೀಗ ಮೊದಲ ಕೋವಿಡ್ ಪ್ರಕರಣ ದಾಖಲಾಗಿದೆ. ತಾಲೂಕಿನಲ್ಲಿ ಈ ವರೆಗೆ 8 ಪ್ರಕರಣ ದಾಖಲಾಗಿದ್ದು, ಇದೀಗ 9ನೇ ಪ್ರಕರಣ ಪತ್ತೆಯಾಗಿದೆ.

Advertisement

33 ವರ್ಷದ ನರ್ಸ್‌ಗೆ ಕೋವಿಡ್ ದೃಢಪಟ್ಟಿದ್ದು, ಪಟ್ಟಣದ ಬಾಳೆಬೈಲು ಸಮೀಪದ ಮನೆ, ಹೋಟೆಲ್‌ ಮತ್ತು ಸುತ್ತಮುತ್ತ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಮನೆಯವರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಕೋವಿಡ್ ಪಾಸಿಟಿವ್‌ ಇರುವ ಮಹಿಳೆ ಹೆಬ್ರಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಅವರು ಕೋವಿಡ್ ವಾರಿಯರ್ಸ ಆಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ರೋಗ ತಗುಲಿರುವ ಶಂಕೆ ವ್ಯಕ್ತವಾಗುತ್ತಿದೆ. ನರ್ಸ್‌ ಉಡುಪಿಯ ಅಜ್ಜರಕಾಡು, ಹೆಬ್ರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಸೋಂಕು ತಗುಲಿರಬಹುದು ಎಂಬ ಬಗ್ಗೆ ಪ್ರಾಥಮಿಕ ತನಿಖೆ ನಡೆಯುತ್ತಿದೆ.

ಮನೆ ಸುತ್ತಮುತ್ತ ಸೀಲ್‌ಡೌನ್‌: ತೀರ್ಥಹಳ್ಳಿಯ ಇಂದಿರಾ ನಗರ ರಸ್ತೆಯಿಂದ ಸುಮಾರು 300 ಮೀ. ಸೀಲ್‌ಡೌನ್‌ ಮಾಡಲಾಗಿದೆ. ಅಲ್ಲಿ 4 ಕುಟುಂಬಗಳಿದ್ದು, ಅವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಪತಿ ಆಟೋ ಚಾಲಕನಾಗಿದ್ದು, ಅನೇಕ ಕಡೆ ಓಡಾಡಿರುವ ಶಂಕೆ ಇದೆ. ಮನೆ ಪಕ್ಕದ ಸ್ಥಳೀಯ ಹೋಟೆಲ್‌ ಕೂಡ ಸೀಲ್‌ಡೌನ್‌ ಮಾಡಲಾಗಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು, ಜನತೆ ಆತಂಕಕ್ಕೆ ಒಳಗಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next