Advertisement

ಚಿಟ್ಟೆ ಬೈಲು-ಹಲಸಿನಹಳ್ಳಿ ಶಾಲೆಗೆ ತಮಾನೋತ್ಸವ ಸಂಭ್ರಮ

03:47 PM Sep 25, 2019 | Naveen |

ತೀರ್ಥಹಳ್ಳಿ: ತಾಲೂಕಿನ ಹೊದಲ-ಅರಳಾಪುರ ಗ್ರಾಪಂ ವ್ಯಾಪ್ತಿಯ ಚಿಟ್ಟೇಬೈಲು-ಹಲಸಿನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದು ಶತಮಾನೋತ್ಸವ ಸಂಭ್ರಮದ ಸನಿಹದಲ್ಲಿದೆ.

Advertisement

ಅ.19 ಮತ್ತು 20ರಂದು ಇದೇ ಶಾಲೆಯ ಆವರಣದಲ್ಲಿ ಶತಮಾನೋತ್ಸವ ಆಚರಣೆಯೆಂಬ ವಿಶೇಷ ಸಂಭ್ರಮ ಆಚರಿಸಲು ಗ್ರಾಮಸ್ಥರು ತೀರ್ಮಾನಿಸಿ ಶತಮಾನೋತ್ಸವ ಆಚರಣಾ ಸಮಿತಿ ರೂಪಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ಪೂರ್ವ 1919ನೇ ಇಸವಿಯಲ್ಲಿ ಚಿಟ್ಟೇಬೈಲು ಸಮೀಪದ ಹಲಸಿನಹಳ್ಳಿಯ ಹಿರಿಯ ಕೃಷಿಕರಾಗಿದ್ದ ಫ್ರಾನ್ಸಿಸ್‌ ಡಿಸೋಜ ಕುಟುಂಬದವರು ತಮ್ಮ ಊರಿಗೊಂದು ಶಾಲೆ ಬೇಕೆಂದು ಚಿಂತಿಸಿ ಗ್ರಾಮಸ್ಥರ ಸಹಕಾರದೊಂದಿಗೆ ಶಾಲೆ ಆರಂಭಿಸಿದರು.

ಅಂದು ಈ ಶಾಲಾ ಕಟ್ಟಡ ಕಟ್ಟಲು ತಗಲಿದ ವೆಚ್ಚವನ್ನು ಅವರೇ ಭರಿಸುತ್ತಾರೆ. ಈ ಶಾಲೆಯು 1924ರವರೆಗೆ ಅನುದಾನ ರಹಿತ ಶಾಲೆಯಾಗಿದ್ದು, 1925ರಲ್ಲಿ ಸರ್ಕಾರಿ ಶಾಲೆಯಾಗಿ ಮಾರ್ಪಡಾಯಿತು. 1924ರಲ್ಲಿ ಜಮೀನಾªರ್‌ ಫ್ರಾನ್ಸಿಸ್‌ ಡಿಸೋಜರವರಿಗೆ ಸರ್ಕಾರವು 400 ರೂ. ನೀಡಿ ಶಾಲಾ ಕಟ್ಟಡ ತನ್ನ ವಶಕ್ಕೆ ಪಡೆದುಕೊಂಡಿತು. ಆ ದಿನಗಳಲ್ಲಿ ಒಂದು ಕೋಣೆಯಿದ್ದ ಆ ಶಾಲೆಯಲ್ಲಿ ಹಲವು ಮಕ್ಕಳು ಕಲಿಯುತ್ತಿದ್ದರು.

1976ರಲ್ಲಿ ಮತ್ತೂಂದು ಕೋಣೆಯನ್ನು 1998ರಲ್ಲಿ ಮೂರನೇ ಕೋಣೆಯನ್ನು, 1998ರಲ್ಲಿ ಮೂರನೆ ಕೋಣೆಯನ್ನು 1999ರಲ್ಲಿ ನಾಲ್ಕನೇ ಕೋಣೆ ನಿರ್ಮಿಸಲಾಯಿತು. 1919ರಿಂದ 1981ರವರೆಗೆ 1ರಿಂದ 4ನೇ ತರಗತಿ ನಂತರ 1982 ರಿಂದ 5ನೇ ತರಗತಿ ಪ್ರಾರಂಭವಾಯಿತು.
1998-99 ಸಾಲಿನಲ್ಲಿ 6ನೇ ತರಗತಿ, 1999-2000 ಸಾಲಿನಲ್ಲಿ 7ನೇ ತರಗತಿ ಆರಂಭಿಸಲಾಯಿತು.
2003-04ರಲ್ಲಿ ಎಸ್‌ಎಸ್‌ಎ ಕೋಣೆ ನಿರ್ಮಿಸಲಾಯಿತು.

ಪ್ರಸ್ತುತ 1 ರಿಂದ 7ನೇ ತರಗತಿಯವರೆಗೆ ಮಕ್ಕಳು ಕಲಿಯುತ್ತಿದ್ದಾರೆ. ಈ ಶಾಲೆ ಶತಮಾನೋತ್ಸವ ಆಚರಿಸಲು ನಡೆದು ಬಂದ ದಾರಿಗೆ ಊರಿನ ಗ್ರಾಮಸ್ಥರು, ಶಾಲಾ
ಸಮಿತಿ ಹಾಗೂ ಕೆಲವು ದಾನಿಗಳು ನೀಡಿದ ಬೆಂಬಲ ಪ್ರೋತ್ಸಾಹವೇ ಮುಖ್ಯ ಕಾರಣವಾಗಿದೆ.

Advertisement

ಈ ಶಾಲೆಯಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಈ ಶಾಲಾ ಶತಮಾನೋತ್ಸವ ಆಚರಣೆಯ ಸಂಭ್ರಮದ ಹಬ್ಬಕ್ಕಾಗಿ ಶಾಲೆಯ ಎಲ್ಲ ಹಳೆಯ ವಿದ್ಯಾರ್ಥಿಗಳಿಗೂ ಮತ್ತು ಗ್ರಾಮಸ್ಥರಿಗೂ
ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next