Advertisement

ರಂಗಭಾಷೆಗಿದೆ ಜಾಗತಿಕ ಸಂವೇದನ

02:40 PM Mar 13, 2018 | |

ಬಸವಕಲ್ಯಾಣ: ಪ್ರಪಂಚದ ಎಲ್ಲಾ ಸಮುದಾಯಗಳಿಗೆ ಅರ್ಥವಾಗುವ ರಂಗ ಭಾಷೆ ಜಾಗತಿಕ ಭಾಷಾ ಸ್ವರೂಪ
ಪಡೆದಿದೆ ಎಂದು ಬೆಂಗಳೂರಿನ ಹಿರಿಯ ಚಿಂತಕ ಡಾ| ಕೆ.ವೈ.ನಾರಾಯಣಸ್ವಾಮಿ ಹೇಳಿದರು.

Advertisement

ನಗರದ ವಸ್ತು ಸಂಗ್ರಾಲಯ ಸಭಾಂಗಣದಲ್ಲಿ ಡಾ|ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನ ಮತ್ತು ಎಸ್‌ಎಸ್‌
ಕೆಬಿ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಂಗಭೂಮಿ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ
ಉಪನ್ಯಾಸ ನೀಡಿದ ಅವರು, ನಾಟಕ ಕೇವಲ ರಂಗಕ್ಕೆ ಮಾತ್ರಕ್ಕೆ ಸೀಮಿತವಲ್ಲ. ಬದುಕಿನ ಪ್ರತಿ ಹಂತದಲ್ಲೂ ನಾಟಕ ಆವರಿಸಿದೆ. ನಾಟಕ ವಾಸ್ತವ ಸಮಾಜ ಮತ್ತು ವಾಸ್ತವ ಬದುಕನ್ನು ಬಿಂಬಿಸುವ ನೈಜತೆಯ ಸ್ವರೂಪ ಪಡೆದಿದೆ ಎಂದರು.

ಅತ್ಯಂತ ಪ್ರಾಚೀನ ರಂಗಭೂಮಿಯಾದ ಗ್ರೀಕ್‌ನಲ್ಲಿ ರುದ್ರ ನಾಟಕಗಳು ಗ್ರೀಕ್‌ ಸಮಾಜ ಮತ್ತು ಪ್ರಭುತ್ವವನ್ನು
ಪ್ರಭಾವಿಸಿದವು. ಸಂಸ್ಕೃತ ನಾಟಕಕಾರರಾದ ಭಾಸ, ಕಾಳಿದಾಸ ಮೊದಲಾದವರು ಭಾರತೀಯ ರಂಗ ಪರಂಪರೆ ಕಟ್ಟಿದ್ದಾರೆ. ಕೈಲಾಸಂ, ಸಂಸ, ಶ್ರೀರಂಗ, ಕುವೆಂಪು ಮೊದಲಾದವರು ಕನ್ನಡ ರಂಗಭೂಮಿ ಬೆಳೆಸಿದ್ದಾರೆ. ಗಿರೀಶ ಕಾರ್ನಾಡರ ಕೇವಲ ನಾಟಕ ಸಾಹಿತ್ಯಕ್ಕೆ ಮಾತ್ರ ಸಿಕ್ಕ ಜ್ಞಾನ ಪೀಠ ಇಡೀ ಭಾರತೀಯ ರಂಗಭೂಮಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಮನುಷ್ಯನ ಹುಟ್ಟು ಬೆಳವಣಿಗೆ ಹೀಗೆ ಬದುಕಿನ ಅನೇಕ ಮಗ್ಗಲು ಆವರಿಸಿದ ನಾಟಕ ಬದುಕಿಗೊಂದು ರಂಗಭಾಷೆ
ಒದಗಿಸಿದೆ. ಸಂಗೀತ, ಸಾಹಿತ್ಯ, ವಸ್ತ್ರಾಲಂಕಾರ, ಚಿತ್ರಕಲೆ ಹೀಗೆ ಅನೇಕ ಕುಶಲಕಲೆಗಳನ್ನು ಒಳಗೊಳ್ಳುವ ಸಾಧ್ಯತೆ
ರಂಗಭೂಮಿಗಿದೆ. ಇದು ಎಲ್ಲ ಕಲೆಗಳ ತಾಯಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರಿನ ಹಿರಿಯ ಸಾಹಿತಿ ಡಾ| ನಾ. ದಾಮೋದರ ಶೆಟ್ಟಿ ಮಾತನಾಡಿ, ರಂಗಭೂಮಿ ಪುರಾಣ ಚರಿತ್ರೆ ಮತ್ತು ವರ್ತಮಾನಗಳನ್ನು ಭಿನ್ನ ಆಯಾಮಗಳಲ್ಲಿ ಅನಾವರಣಗೊಳಿಸುವ ಶಕ್ತಿ ಪಡೆದಿದೆ. ನಾಟಕ ಸಮಾಜದ ಸ್ವಾಸ್ಥ Âಕ್ಕೆ ಔಷ ಧಿಯಾಗಿದೆ. ಟಿವಿ ಮತ್ತು ಸಿನಿಮಾಗಿಂತ ಹೆಚ್ಚು ನೈಜತೆ ಮತ್ತು ವಾಸ್ತವ ಜಗತ್ತನ್ನು ನಾಟಕ ಕಟ್ಟಿಕೊಡುತ್ತದೆ ಎಂದರು.

Advertisement

ಬೆಂಗಳೂರಿನ ಹಿರಿಯ ರಂಗ ನಿರ್ದೇಶಕ ಶಶಿಧರ ಬಾರಿಘಾಟ್‌, ಪ್ರತಿಷ್ಠಾನದ ನಿರ್ದೇಶಕ ಭೀಮಾಶಂಕರ ಬಿರಾದಾರ, ಅಧ್ಯಕ್ಷತೆ ವಹಿಸಿದ್ದ ಪ್ರೊ| ಡಿ.ಎಸ್‌. ಪಾಟೀಲ ಮಾತನಾಡಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ| ವಿಕ್ರಮ ವಿಸಾಜಿ, ಹಿರಿಯ ರಂಗ ನಿರ್ದೇಶಕ ಶಂಕರಯ್ಯ
ಘಂಟಿ, ಪ್ರತಿಷ್ಠಾನದ ನಿರ್ದೇಶಕ ಡಾ| ಶಿವಾಜಿ ಮೇತ್ರೆ, ಬಸವರಾಜ ಬಿಳಗಿ, ಸುಧಾಕರ ಬಿರಾದಾರ, ಕೆ.ಎಸ್‌.
ಬಿರಾದಾರ, ಕಲ್ಯಾಣಪ್ಪ ನಾವದಗಿ, ಶರಣಬಸವ ಬಿರಾದಾರ, ನಾಗಪ್ಪ ನಿಣ್ಣೆ ಉಪಸ್ಥಿತರಿದ್ದರು. ಕವಿತಾ ಮೋರಖಂಡೆ
ಸ್ವಾಗತಿಸಿದರು. ಸುಮಾ ಭಾಲ್ಕೆ ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next