Advertisement

ರಂಗಕರ್ಮಿ, ನಿರ್ದೇಶಕಿ ಎಸ್‌. ಮಾಲತಿ ಇನ್ನಿಲ್ಲ

01:50 AM Apr 02, 2019 | Sriram |

ಸಾಗರ: ರಂಗಕರ್ಮಿ, ನಟಿ, ನಿರ್ದೇಶಕಿ, ಹೋರಾಟಗಾರ್ತಿ ಎಸ್‌. ಮಾಲತಿ (66) ಸೋಮವಾರ ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಪತಿ, ಅಪಾರ ಅಭಿಮಾನಿಗಳಿದ್ದಾರೆ.

Advertisement

ಮಾಲತಿ ಎಚ್‌1ಎನ್‌1 ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಮಾರ್ಚ್‌ ಎರಡನೇ ವಾರದಲ್ಲಿ ಮಣಿಪಾಲ್‌ಗೆ ಸೇರಿಸಲಾಗಿತ್ತು. ಅವರ ಆರೋಗ್ಯ ತೀರಾ ಗಂಭೀರ ಸ್ಥಿತಿಯಲ್ಲಿ ಇದ್ದುದ್ದರಿಂದ ಐಸಿಯುನಲ್ಲಿ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿತ್ತು. ಕೊನೆಯ ಕೆಲ ದಿನಗಳಲ್ಲಿ ಕಿಡ್ನಿ ವೈಫಲ್ಯವಾದ ಹಿನ್ನೆಲೆಯಲ್ಲಿ ಅವರಿಗೆ ಡಯಾಲಿಸಿಸ್‌ ಮಾಡಲಾಗಿತ್ತು. ಬಹು ಅಂಗಾಂಗ ವಿಫಲತೆಯ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ.

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾಗಿದ್ದ ಅವರು, ಕೆರೆಗೆ ಹಾರ, ಯಯಾತಿ, ಹಯವದನ, ಭೀಮ ಕಥಾನಕ, ಹ್ಯಾಮ್ಲೆಟ್‌ ಸೇರಿ ಅನೇಕ ನಾಟಕಗಳನ್ನು ನಿರ್ದೇಶಿಸಿ, ನಟಿಸಿದ್ದರು. ಅನೇಕ ಇಂಗ್ಲಿಷ್‌ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಅವುಗಳನ್ನು ರಂಗದ ಮೇಲೆ ತಂದು ಯಶಸ್ವಿಯಾಗಿದ್ದರು. ಚಲನಚಿತ್ರ, ಧಾರಾವಾಹಿಗಳಲ್ಲೂ ನಟಿಸಿದ್ದರು. ಓರ್ವ ಕವಿಯಿತ್ರಿಯಾಗಿ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದರು. ಇವರ ಕ್ಷಣಿಕವಲ್ಲದ ಕ್ಷಣಗಳು ಕವನ ಸಂಕಲನಕ್ಕೆ ಮುಂಬಯಿ ಕನ್ನಡ ಸಂಘದವರು ಪೇಜಾವರ ಸದಾಶಿವರಾವ್‌ ಪ್ರಶಸ್ತಿ ನೀಡಿ ಗೌರವಿಸಿದ್ದರು.

ಎಡ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಸಾಗರ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದದರು. ಇತ್ತೀಚೆಗೆ ಅಂತರಂಗ ಟ್ರಸ್ಟ್‌ ಸ್ಥಾಪಿಸಿ ರಂಗ ಚುಟುವಟಿಕೆಯಲ್ಲಿ ತೊಡಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next