Advertisement

“ವಿಶ್ವದ ಸುಂದರ ಮಹಿಳಾ ಪೊಲೀಸ್‌ ಅಧಿಕಾರಿ’

10:54 AM Nov 12, 2022 | Team Udayavani |

ಬೊಗೊಟಾ: ದಕ್ಷಿಣ ಅಮೆರಿಕದ ಕೊಲೊಂಬಿಯಾದ ಮೆಡಲಿನ್‌ನ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ.

Advertisement

ಆಕೆಯನ್ನು “ವಿಶ್ವದ ಅತ್ಯಂತ ಸುಂದರ ಮಹಿಳಾ ಪೊಲೀಸ್‌ ಅಧಿಕಾರಿ’ ಎಂದು ಕರೆಯಲಾಗುತ್ತಿದೆ. ಡಯಾನಾ ರಮಿರೇಜ್‌ ಈ ಸುಂದರಿಯಾಗಿದ್ದು, ಇನ್ಸ್‌ಸ್ಟಾಗ್ರಾಂನಲ್ಲಿ ಸುಮಾರು 4 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದಾರೆ.

ಪೊಲೀಸ್‌ ಅಧಿಕಾರಿಯಾಗಿರುವ ಈಕೆ, ವಿಶ್ವದ ಅತ್ಯಂತ ಅಪಾಯಕಾರಿ ನಗರಗಳಲ್ಲಿ ಒಂದಾಗಿದ್ದ ಮೆಡಲಿನ್‌ ನಗರದಲ್ಲಿ ಪ್ರತಿ ನಿತ್ಯ ಗಸ್ತು ತಿರುಗುತ್ತಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಡಯಾನಾ, “ಮಾಡೆಲ್‌ ಆಗಲು ಪೊಲೀಸ್‌ ಉದ್ಯೋಗವನ್ನು ಬಿಡುವುದಿಲ್ಲ. ಪೊಲೀಸ್‌ ಅಧಿಕಾರಿಯಾಗಿರುವ ಬಗ್ಗೆ ನನಗೆ ಹೆಮ್ಮೆ ಇದೆ,’ ಎಂದಿದ್ದಾರೆ.

ಕೊಲೊಂಬಿಯಾದ ಇನ್ಸಾಫೆಸ್ಟ್‌ ಪ್ರಶಸ್ತಿ ಸಮಾರಂಭದಲ್ಲಿ ಡಯಾನಾ ಅವರನ್ನು “ವರ್ಷದ ಅತ್ಯುತ್ತಮ ಪೊಲೀಸ್‌ ಅಧಿಕಾರಿ ಅಥವಾ ಮಿಲಿಟರಿ ಪ್ರಭಾವಿ ವ್ಯಕ್ತಿ’ ಎಂಬ ಪ್ರಶಸ್ತಿಗೆ ನಾಮಾಂಕಿತರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next