Advertisement

ಗುಜರಾತ್‌ನಲ್ಲಿ ಸಿದ್ಧವಾಗಲಿದೆ ಜಗತ್ತಿನ ದೊಡ್ಡ ಮೃಗಾಲಯ : ಆರ್‌ಐಎಲ್‌ನಿಂದ ನಿರ್ಮಾಣ

01:01 AM Jul 04, 2022 | Team Udayavani |

ಏಷ್ಯಾ ಸಿಂಹಗಳ ಅಪರೂಪದ ತಳಿಯ ಏಕೈಕ ತಾಣವಾಗಿರುವ ಗುಜರಾತ್‌ನಲ್ಲಿ ಇನ್ನು ಎರಡು ವರ್ಷಗಳಲ್ಲಿ 280 ಎಕರೆ ವಿಸ್ತೀರ್ಣದಲ್ಲಿ ಜಗತ್ತಿನ ಅತಿ ದೊಡ್ಡ ಮೃಗಾಲಯ ನಿರ್ಮಾಣವಾಗಲಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌) ಈ ಮೃಗಾಲಯವನ್ನು ನಿರ್ಮಿಸುತ್ತಿದೆ.

Advertisement

ಎಲ್ಲಿ ನಿರ್ಮಾಣ?
ಅಹ್ಮದಾಬಾದ್‌ನಿಂದ ಸುಮಾರು 300 ಕಿ.ಮೀ. ದೂರದಲ್ಲಿ, ಅಹ್ಮದಾಬಾದ್‌- ಜಾಮ್‌ನಗರ ಹೆದ್ದಾರಿಯ ಪಕ್ಕದಲ್ಲಿ ನಿರ್ಮಾಣವಾಗಲಿರುವ ಈ ಮೃಗಾಲಯ ಏಷ್ಯಾ ಸಿಂಹ ಮಾತ್ರವಲ್ಲದೆ, ತೀರಾ ಅಪ ರೂಪದ ವನ್ಯಜೀವಿಗಳು, ಅಳಿವಿನಂಚಿನಲ್ಲಿ ರುವ ಪ್ರಾಣಿಗಳು ಹಾಗೂ ಇನ್ನಿತರ ಪ್ರಾಣಿಗಳ ಆಶ್ರಯತಾಣವಾಗಲಿದೆ. 79 ವಿವಿಧ ಜಾತಿಯ ಒಟ್ಟು 1,689 ಪ್ರಾಣಿಗಳು ಈ ಮೃಗಾಲಯದಲ್ಲಿ ಇರಲಿವೆ. ಇವುಗಳಲ್ಲಿ ಅತ್ಯಂತ ಅಪರೂಪದ 27 ಜಾತಿಯ 257 ಪ್ರಾಣಿಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ. ಈ ಅಪರೂಪದ ಪ್ರಾಣಿಗಳಲ್ಲಿ ಚಿರತೆಗಳು, ಜಾಗ್ವಾರ್‌ಗಳು, ನೀರಾನೆಗಳು, ಜಿರಾಫೆಗಳು, ಝೀಬ್ರಾಗಳು, ಕಾಂಗ ರೂ ಗಳು, ಬಿಳಿ ಖಡ್ಗಮೃಗಗಳು, ಆಫ್ರಿಕಾದ ಆನೆಗಳು ಇರಲಿವೆ.

ಸಾರ್ವಜನಿಕ ಪ್ರದರ್ಶನ
ಇತರ ಪ್ರಾಣಿಗಳ ಜೊತೆಗೆ, ಅಮೆರಿಕದ ಕರಡಿಗಳು, ಜಾಗ್ವಾರ್‌ಗಳು, ಕಾಡು ಬೆಕ್ಕಗಳು, ಬಿಳಿ ಸಿಂಹಗಳನ್ನು ಮೃಗಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗುವ ಪ್ರಾಣಿಗಳ ಜೊತೆಗೆ ಇಡಲಾಗುತ್ತದಾದರೂ, ಇವುಗಳಿಗೆ ಅಪರೂಪದ ಜೀವಿಗಳಿಗೆ ನಿರ್ಮಿಸಲಾಗುವ ವಿಶೇಷ ವ್ಯವಸ್ಥೆಯಲ್ಲಿ ವಾಸ್ತವ್ಯ ಕಲ್ಪಿಸಲಾಗುತ್ತದೆ. ಸಂದರ್ಶಕರು ಆ ವಿಭಾಗಕ್ಕೆ ಹೋಗಿ ಅವುಗಳನ್ನು ವೀಕ್ಷಿಸಬೇಕಾಗುತ್ತದೆ.ವಿಶೇಷ ಏನೆಂದರೆ, ಇವಿಷ್ಟೂ ಪ್ರಾಣಿಗಳನ್ನು ಈಗಾಗಲೇ ಭಾರತಕ್ಕೆ ಕರೆತರಲಾಗಿದೆ. ಅಹ್ಮದಾಬಾದ್‌ ಹಾಗೂ ಜಾಮ್‌ನಗರ್‌ಗೆ ಆರ್‌ಎಲ್‌ಐನ ಸಂರಕ್ಷಣಾ ತಂಡದ ವಿಶೇಷ ವಿಮಾನಗಳಲ್ಲಿ ಈ ಪ್ರಾಣಿಗಳನ್ನು ಕರೆತರಲಾಗಿದೆ.

ಆಹಾರ,ಸುರಕ್ಷೆೆ
ಮೃಗಾಲಯದಲ್ಲಿರುವ ಪ್ರಾಣಿಗಳಿಗೆ ಸಮಯಕ್ಕೆ ಸರಿಯಾಗಿ ಅವುಗಳ ಆಹಾರ ನೀಡಲು ಹಾಗೂ ಅವುಗಳಿಗೆ ಬೇಕಾಗ ಸೌಕರ್ಯಗಳು ಹಾಗೂ ವೈದ್ಯ ಕೀಯ ಸೌಲಭ್ಯಗಳನ್ನು ಕಲ್ಪಿಸಲೆಂದೇ ಪ್ರತ್ಯೇಕ ವಿಭಾಗವಿರುತ್ತದೆ. ಆ ವಿಭಾಗ ದಲ್ಲಿ ಆಹಾರ ಪೂರೈಕೆ ಸಿಬ್ಬಂದಿಯ ಜೊತೆಗೆ ಪೌಷ್ಠಿಕಾಂಶ ತಜ್ಞರು, ಪ್ರಾಣಿ ವೈದ್ಯರೂ ಇರಲಿದ್ದಾರೆ. ಇನ್ನು, ಸುರಕ್ಷೆಯ ವಿಚಾರದಲ್ಲಿ ಪ್ರತಿಯೊಂದು ಪ್ರಾಣಿ ಗಳ ಚಲವ ವಲನಗಳನ್ನು ಅಭ್ಯಸಿ ಸಲು ಸಿಸಿಟಿವಿ ಜಾಲವನ್ನು ಇಡೀ ಮೃಗಾ ಲ ಯದಲ್ಲಿ ನಿರ್ಮಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next