ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಮಸ್ತಾನಮ್ಮ ಅಡುಗೆ ಮಾಡ್ತಾರಂದ್ರೆ ಜಗತ್ತು ಹೀಗೆ ಕಾಯುತ್ತೆ. ಅಜ್ಜಿ ಮಾಡುವ ಪ್ರತಿ ಅಡುಗೆಯ ವಿಡಿಯೋಗಳೂ ಯೂಟ್ಯೂಬ್‌ನಲ್ಲಿ ಮೂವತ್ತು, ನಲ್ವತ್ತು, ಐವತ್ತು ಲಕ್ಷ ವೀಕ್ಷಣೆ ಪಡೆದು, ಸೂಪರ್ ಹಿಟ್ ಆಗಿವೆ…
ಅಲ್ಲೊಂದು ನದಿ. ಮೊಮ್ಮಗ ಅದರಲ್ಲಿ ಮುಳುಗಿ, ಮೀನು ಹಿಡಿದು ತರುತ್ತಾನೆ. ಆ ಮೀನಿಗಾಗಿಯೇ ಕಾಯುತ್ತಿರುತ್ತಾಳೆ 106 ವರ್ಷದ ಅಜ್ಜಿ. ಒರಟು ಕಲ್ಲಿನ ಮೇಲೆ ಕುಳಿತು, ಮೀನನ್ನು ಶುದ್ಧ ಮಾಡಿ, ಇನ್ನೊಂದು ಕಡೆ ಮಸಾಲೆಗೆ ಈರುಳ್ಳಿ ಹೆಚ್ಚುತ್ತಾಳೆ. ಶುಂಠಿಯ ಸಿಪ್ಪೆ ತೆಗೀತಾಳೆ. ಮೆಣಸನ್ನು ಕುಟ್ಟುತ್ತಾಳೆ. ನೋಡ್ತಾ ನೋಡ್ತಾ, ಅಡುಗೆಯೇ ಆಗಿ ಹೋಗುತ್ತೆ. ಈ ಅಜ್ಜಿ ಆಂಧ್ರಶೈಲಿಯ ಮೀನಿನ ಅಡುಗೆ ಮಾಡುವುದನ್ನು ಯೂಟ್ಯೂಬ್‌ನಲ್ಲಿ ನೋಡಿರುವವರ ಸಂಖ್ಯೆ 72 ಲಕ್ಷ!
ಹೌದು, ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಮಸ್ತಾನಮ್ಮ ಅಡುಗೆ ಮಾಡ್ತಾರಂದ್ರೆ ಜಗತ್ತು ಹೀಗೆ ಕಾಯುತ್ತೆ. ಅಜ್ಜಿ ಮಾಡುವ ಪ್ರತಿ ಅಡುಗೆಯ ವಿಡಿಯೋಗಳೂ ಯೂಟ್ಯೂಬ್‌ನಲ್ಲಿ ಮೂವತ್ತು, ನಲ್ವತ್ತು, ಐವತ್ತು ಲಕ್ಷ ವೀಕ್ಷಣೆ ಪಡೆದು, ಸೂಪರ್ ಹಿಟ್ ಆಗಿವೆ! ಯೂಟ್ಯೂಬ್ ಅಂದ್ರೆ ಅದು ಯುವಸಮೂಹದ ಗೂಡು. ಟ್ರೆಂಡಿ ಆಗಿರುವ, ಜನಪ್ರಿಯತೆಯನ್ನೇ ಅಸ್ತ್ರ ಆಗಿಸಿಕೊಂಡ ಸಂಗತಿಗಳೇ ಅಲ್ಲಿ ಸದ್ದು ಮಾಡ್ತವೆ ಅನ್ನೋ ನಂಬಿಕೆ ನಮುª. ಎಷ್ಟೋ ಮಂದಿ ಹಾಕಿದ ವಿಡಿಯೋಗಳು ಲಕ್ಷದ ಲೆಕ್ಕದಲ್ಲೂ ವೀಕ್ಷಣೆ ಪಡೆದಿರೋದಿಲ್ಲ. ಅಷ್ಟು ಸಬ್‌ಸೆð„ಬರ್‌ಗಳು ಸಿಗೋದಿಕ್ಕೂ ಭರ್ಜರಿ ಟ್ಯಾಲೆಂಟ್ ಪ್ರದರ್ಶಿಸಬೇಕು. ಆದರೆ, ಮಸ್ತಾನಮ್ಮ ಇಲ್ಲಿ ಮಸ್ತ್ ಮ್ಯಾಜಿಕ್ ಮಾಡಿದ್ದಾರೆ. 106 ವರ್ಷದ ಈ ಮಹಾತಾಯಿ ವಿಶ್ವದ ಅತಿಹಿರಿಯ ಯೂಟ್ಯೂಬರ್!
2,92,000ಕ್ಕೂ ಅಧಿಕ ಸಬ್‌ಸೆ„ಬರ್ ಹೊಂದಿರುವ ಮಸ್ತಾನಮ್ಮ ಅವರ ಯೂಟ್ಯೂಬ್ ಕುಕ್ಕಿಂಗ್ ಚಾನೆಲ್ ಲಕ್ಷಾಂತರ ಮಂದಿಗೆ ರುಚಿರುಚಿಯ ಅಡುಗೆ ಉಣ್ಣಿಸಿದೆ. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡಾ ಎಂಬಲ್ಲಿ ಈ ಅಜ್ಜಿ ಅಡುಗೆ ಮಾಡೋದು ಬೀದಿಯ ಬದಿ! ಎಮೂ ಮೊಟ್ಟೆಗಳನ್ನು ಒಡೆದು, ಆಮ್ಲೆಟ್ ಹೊಯ್ದರೆ, ಆ ಪರಿಮಳಕ್ಕೆ ರಸ್ತೆ ಬದಿಯಲ್ಲಿ ಹೋಗುವ ವಾಹನ ಸವಾರರೆಲ್ಲ ಅಲ್ಲೊಮ್ಮೆ ಸ್ಟಾಪ್ ಕೊಟ್ಟು, ಟೇಸ್ಟ್ ನೋಡದೆ ಹೋಗೋದಿಲ್ಲ. ಅಜ್ಜಿಯ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳದಿದ್ರೆ ಅವರಿಗೆ ಸಮಾಧಾನವೂ ಸಿಗೋದಿಲ್ಲ.
ಮಸ್ತಾನಮ್ಮ ಅವರ ಈ ಪಾಪ್ಯುಲಾರಿಟಿಯನ್ನು ಕಂಡು ಮೊಮ್ಮಗ ಲಕ್ಷ್ಮಣ ಯೂಟ್ಯೂಬ್‌ನಲ್ಲಿ ಕುಕ್ಕಿಂಗ್ ಚಾನೆಲ್ ಆರಂಭಿಸಿದರಂತೆ. ಅಜ್ಜಿ ಮಾಡುವ ಆಂಧ್ರಶೈಲಿಯ ಮೀನಿನ ಅಡುಗೆ, ಹೈದ್ರಾಬಾದ್ ಬಿರಿಯಾನಿ, ಎಮು ದೋಸಾಗಳ ರುಚಿ ಈಗ ಜಗತ್ತಿನ ತುದಿ ತಲುಪಿದೆ. ಹೈದರಾಬಾದಿಗೆ ಬರುವ ಅನೇಕ ವಿದೇಶಿಗರು ಈಕೆಯನ್ನು ಸಂದರ್ಶಿಸಲೆಂದೇ ಈ ಹಳ್ಳಿಯ ಹಾದಿ ಹಿಡಿಯುತ್ತಾರೆ. ಫೈವ್‌ಸ್ಟಾರ್, ಹೈಫೈ ರೆಸ್ಟೋರೆಂಟು, ಪಿಜ್ಜಾ ಹಟ್‌ಗಳು ಗ್ರಾಹಕರನ್ನು ಸೆಳೆಯಲು ಜಾಹೀರಾತಿಗಾಗಿಯೇ ಕೋಟಿಗಟ್ಟಲೆ ಖರ್ಚು ಮಾಡುತ್ತವೆ. ಅಂಥಾದ್ರಲ್ಲಿ ಮಸ್ತಾನಮ್ಮ ಅವರನ್ನು ಕಂಡರೆ ಗ್ರೇಟ್ ಅನ್ನಿಸುತ್ತೆ. ಅಜ್ಜಿ ಕೈರುಚಿಯನ್ನು ಮೀರಿಸೋದಿಕ್ಕೆ ಆಗುತ್ತಾ?
ಅಜ್ಜಿಯ ಸ್ಯಾಂಪಲ್ ಅಡುಗೆ ನೋಡಲು: https://www.youtube.com/watch?v=7pOo5UyDWVw ಜಾಲತಾಣ ಕೊಂಡಿಗೆ ಭೇಟಿ ನೀಡಬಹುದು.