Advertisement

ಶೀಘ್ರದಲ್ಲೇ ಕೆರೆಗಳ ಕಾಮಗಾರಿ ಪೂರ್ಣ

04:32 PM Jan 21, 2023 | Team Udayavani |

ಗೌರಿಬಿದನೂರು: ತಾಲೂಕಿನ ವಿವಿಧ ಕೆರೆಗಳ ಅಭಿವೃದ್ಧಿಗೆ ಸರ್ಕಾರದಿಂದ 2.95 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕೆರೆ ಗಳ ಅಭಿವೃದ್ಧಿಯನ್ನು ಪೂರೈಸಲಾಗುವುದು ಎಂದು ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ಹೇಳಿದರು.

Advertisement

ತಾಲೂಕಿನ ಕಲ್ಲೂಡಿ ಗ್ರಾಮದ ಕೆರೆ ಜೀರ್ಣೋದ್ಧಾರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಮಳೆಗಾಲದಲ್ಲಿ ಮಳೆ ಹೆಚ್ಚು ಸುರಿದ ಪರಿಣಾಮ ತಾಲೂಕಿನ ಕಲ್ಲೂಡಿ, ಕೆಂಕರೆ ಮ್ಯಾಳ್ಯ ಕೆರೆಗಳ ಕಟ್ಟೆಗಳು ಒಡೆದು ನೀರಿಲ್ಲ ಸೋಲಾಗಿ, ಬೆಳೆಗಳು ಜಲಾವೃತಗೊಂಡು ರೈತರು ಅಪಾರ ನಷ್ಟ ಅನುಭವಿಸುವಂತಾಗಿತ್ತು. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಿದ್ದು, ಸರ್ಕಾರ ಕೆರೆಗಳ ಜೀರ್ಣೋದಾರಕ್ಕಾಗಿ 2.95 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. 3 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದು ಹೇಳಿದರು.

ಎಚ್‌.ಎನ್‌.ವ್ಯಾಲಿ ನೀರು: ತಾಲೂಕಿನಲ್ಲಿ ವಿವಿಧ ಕೆರೆಗಳಿಗೆ ಈಗಾಗಲೇ ಎಚ್‌.ಎನ್‌. ವ್ಯಾಲಿ ನೀರು ಹರಿಯುತ್ತಿದೆ. ತಾಲೂಕಿನ ಗಂಗಸಂದ್ರ ಕೆರೆಯಿಂದ ಮುದುಗಾನಕುಂಟೆ, ಸಾಗಾನಹಳ್ಳಿ, ಗೊಟಕನಾ ಮರ, ಕಲ್ಲೂಡಿ ಕೆರೆಗೆ ನೀರು ತುಂಬಿಸುವ ಯೋಜನೆ ಪ್ರಸ್ತಾವನೆ, ಸಲ್ಲಿಸಲಾಗಿದೆ. ಕಲ್ಲೂಡಿ ಕೆರೆಯಿಂದ ಚಿಕ್ಕಕುರುಗೋಡು, ದೊಡ್ಡ ಕುರು ಗೋಡು, ಕುಡುಮಲಕುಂಟೆ ಕೆರೆಗೆ ನೀರು ತುಂಬಿಸುವ ಯೋಜನೆ ಇದಾಗಿದೆ ಎಂದು ಹೇಳಿದರು.

ಇದೇ ವೇಳೆ ಗೌರಿಬಿದನೂರು ತಾಲೂಕಿನ ಇಡಗೂರು ನರ್ಲಕುಂಟೆ, ಮಾಳೇನಹಳ್ಳಿ ಕೆರೆಗೆ ನೀರು ತುಂಬಿಸುವ ಯೋಜನೆಗೆ 19 ಕೋಟಿ ರೂ. ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇದರಿಂದ ಮಂಟಚಕನಹಳ್ಳಿ, ಹಾಲಗಾನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಸ್ತಾವನೆಯಲ್ಲಿದೆ.ನಂತರ ನಗರ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ಎತ್ತಿನ ಹೊಳೆ ಯೋಜನೆಯಿಂದ ಉಡುಮಲೋಡು, ಗುಂಡಾಪುರ, ಗೋಟಕನಾ ಪುರ, ಕೆರೆಗಳಿಗೆ ಎತ್ತಿನ ಹೊಳೆ ಯೋಜನೆಯಿಂದ ನೀರು ಪೂರೈಕೆ ಮಾಡುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದರು.

ರಸ್ತೆಗಳ ಅಭಿವೃದ್ಧಿ: ತಾಲೂಕಿನ ರಸ್ತೆಗಳ ಅಭಿವೃದ್ಧಿಯಿಂದ ಮಾತ್ರ ತಾಲೂಕು ಆರ್ಥಿಕ- ಸಾಮಾಜಿಕ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಅಲ್ಲೀಮರ, ನಾಚ ಕುಂಟೆ, ಗೆದರೆ,ರಸ್ತೆಗಳ ಅಭಿ ವೃದ್ಧಿಗೆ 8 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಾಗಾರಿ ಎರಡು ತಿಂಗಳಲ್ಲಿ ಪೂರ್ಣಗೊಳಿಸ ಲಾಗುವುದು ಎಂದರು.

Advertisement

ಗೌರಿಬಿದನೂರು ತಾಲೂಕಿಗೆ ಕೆಲವು ಸ್ವಯಂಘೋಷಿತ ಸಮಾಜಸೇವಕರು ಚುನಾವಣೆಗೆ ಬಂದಿದ್ದಾರೆ. ತಾಲೂಕಿನ ಜನತೆ ಪ್ರಬುದ್ಧರು ಹಣದ ಆಮಿಷಕ್ಕೆ ಮತವನ್ನು ಹಾಕುವುದಿಲ್ಲ. ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಜನತೆ ನೆಮದಿ ಜೀವನ ಸಾಗಿಸಲು ಸಾಧ್ಯ ಎಂದು ಹೇಳಿದರು. ‌

ನಗರಸಭೆ ಸದಸ್ಯ ಗಾಯತ್ರಿ ಬಸವರಾಜ್‌, ಎಂ.ಡಿ.ರಫೀಕ್‌, ಗದರ ಗ್ರಾಪಂ ಅಧ್ಯಕ್ಷೆ ಪ್ರೇಮ ಕುಮಾರಿ, ಸದಸ್ಯರಾದ ಸರಳ, ಸುಧಾ, ಶಿವಕುಮಾರ್‌ ರೆಡ್ಡಿ, ಮುಖಂಡ ರಾದ ಎಚ್‌.ಎನ್‌. ಪ್ರಕಾಶ್‌ ರೆಡ್ಡಿ, ನಾನಾ, ಅಶ್ವತ್ಥನಾರಾಯಣ್‌, ತಾರಾ ನಾಥ್‌, ಬೊಮ್ಮಣ್ಣ ತರಿದಾಳು ಚಿಕ್ಕಣ್ಣ ನಾಗರಾಜ್, ರೇಣುಕಮ್ಮ, ವೆಂಕಟರಮಣ ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next