Advertisement

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

01:30 AM Apr 19, 2024 | Team Udayavani |

ಹೊಸದಿಲ್ಲಿ: ವಾರದ ಹಿಂದಷ್ಟೇ ಇರಾನ್‌ ಪಡೆಗಳು ವಶಪಡಿಸಿಕೊಂಡಿದ್ದ ಸರಕು ಸಾಗಣೆ ಹಡಗು ಎಂಎಸ್‌ಸಿ ಏರಿಸ್‌ನಲ್ಲಿದ್ದ 17 ಮಂದಿ ಭಾರತೀಯ ಸಿಬಂದಿ ಪೈಕಿ ಮಹಿಳಾ ಸಿಬಂದಿ ಆ್ಯನ್‌ ಟೆಸ್ಸಾ ಜೋಸೆಫ್ ಗುರುವಾರ ಭಾರತಕ್ಕೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಈ ಮಾಹಿತಿ ನೀಡಿದ್ದು, ಇರಾನ್‌ ಸರಕಾರದ ಜತೆಗೆ ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸತತ ಮಾತುಕತೆ ನಡೆಸಿ, ಕೇರಳದ ತೃಶೂರ್‌ ಮೂಲದ ಆ್ಯನ್‌ರನ್ನು ಸುರಕ್ಷಿತ ವಾಗಿ ಭಾರತಕ್ಕೆ ಕಳುಹಿಸಿಕೊಟ್ಟಿದೆ. ಉಳಿದ 16 ಸಿಬಂದಿ ಬಿಡು ಗಡೆ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ ಎಂದಿದ್ದಾರೆ.

Advertisement

ಇರಾನ್‌ ವಿರುದ್ಧ ನಿರ್ಬಂಧಕ್ಕೆ ಐರೋಪ್ಯ ಒಕ್ಕೂಟ ನಿರ್ಧಾರ
ಹೊಸದಿಲ್ಲಿ: ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ಬುಧವಾರ ಸಭೆ ಸೇರಿದ ಐರೋ ಪ್ಯ ಒಕ್ಕೂಟದ (ಇಯು) ನಾಯಕರು, ಇರಾನ್‌ ಮೇಲೆ ನಿರ್ಬಂಧಗಳನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. 27 ರಾಷ್ಟ್ರೀ ಯ ನಾಯಕರು ಪಾಲ್ಗೊಂಡಿದ್ದ ಸಭೆಯಲ್ಲಿ, ಮಧ್ಯಪ್ರಾಚ್ಯ ಪ್ರದೇಶದಲ್ಲಿ ಸಂಘರ್ಷ ತಗ್ಗಿಸಲು ನಿರ್ಧರಿಸಲಾಗಿದೆ. ಕಳೆದ ಶನಿವಾರ ಇಸ್ರೇಲ್‌ ಮೇಲೆ ಇರಾನ್‌ ಕ್ಷಿಪಣಿ ದಾಳಿ ಮಾಡಿದ ಅನಂತರ ಒಕ್ಕೂಟ ನಡೆಸಿದ ಮೊದಲ ಸಭೆಯಿದು. ಇದೇ ವೇಳೆ, ಇಸ್ರೇಲ್‌ನೊಂದಿಗೆ ಪ್ರಾಜೆಕ್ಟ್ ನಿಂಬಸ್‌ ಹೆಸರಿನಲ್ಲಿ ಗೂಗಲ್‌ ಸಂಸ್ಥೆ ಕ್ಲೌಡ್ ಕಂಪ್ಯೂಟಿಂಗ್‌ ಒಪ್ಪಂದ ಮಾಡಿಕೊಂಡಿದೆ. ಇದನ್ನು ವಿರೋಧಿಸಿ ಗೂಗಲ್‌ನ ಎರಡು ಕಚೇರಿಗಳಲ್ಲಿ ಪ್ರತಿಭಟನೆ ನಡೆಸಿದ 28 ಉದ್ಯೋಗಿಗಳನ್ನು, ಗೂಗಲ್‌ ಕಿತ್ತೂಗೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next