Advertisement

158 ದಿನ ಚಿಕಿತ್ಸೆ ಪಡೆದು ಕೋವಿಡ್‌ ಗೆದ್ದ ಮಹಿಳೆ

11:43 PM Dec 07, 2021 | Team Udayavani |

ಕೊಪ್ಪಳ: ಕೊರೊನಾ ಸೋಂಕಿಗೆ ತುತ್ತಾಗಿ 158 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಮಹಿಳೆ ಕೊನೆಗೂ ಗುಣಮುಖವಾಗಿ ಮನೆಗೆ ಮರಳಿದ್ದಾರೆ. ಈ ಮಹಿಳೆ 104 ದಿನ ಐಸಿಯುನಲ್ಲೇ ಇದ್ದಿರುವುದು ವಿಶೇಷವಾಗಿದೆ !

Advertisement

ಯಲಬುರ್ಗಾ ತಾಲೂಕಿನ ಬೋದೂರು ಗ್ರಾಮದ ನಿವಾಸಿ ಗೀತಾ ಬಾಯಿ (46) ಕಳೆದ ಜೂನ್‌, ಜುಲೈ ತಿಂಗಳಲ್ಲಿ ಸೋಂಕಿಗೆ ತುತ್ತಾಗಿದ್ದರು.

ಜು. 3ರಂದು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಶೆ. 96ರಷ್ಟು ಶ್ವಾಸಕೋಶದಲ್ಲಿ ಹಾನಿಯಾಗಿತ್ತು. ಮಹಿಳೆ ಸ್ಥಿತಿ ಚಿಂತಾಜನಕವಾದ ಹಿನ್ನೆಲೆಯಲ್ಲಿ ವೈದ್ಯರು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲು ಆರಂಭಿಸಿದ್ದರು.

ಪ್ರತಿನಿತ್ಯ 15-20 ಲೀಟರ್‌ ಆಕ್ಸಿಜನ್‌ ಬಳಕೆಯಾಗುತ್ತಿತ್ತು. ಕ್ರಮೇಣ ಸುಧಾರಣೆ ಕಂಡು ಬಂದ ಹಿನ್ನೆಲೆಯಲ್ಲಿ ಸಂಪೂರ್ಣ ಚೇತರಿಸಿಕೊಂಡಿದ್ದು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ:ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

Advertisement

ಕೋವಿಡ್‌ ದೃಢಪಟ್ಟ 7ರಿಂದ 10 ದಿನಗಳ ಒಳಗಾಗಿಯೇ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಮನೆಗೆ ಕಳುಹಿಸ
ಲಾಗುತ್ತದೆ. ಆದರೆ, ಈ ಮಹಿಳೆ 158 ದಿನಗಳ ಕಾಲ ಸುದೀರ್ಘ‌ ಸಮಯ ಕೋವಿಡ್‌ಗಾಗಿ ಚಿಕಿತ್ಸೆ ಪಡೆದಿರುವುದು ಅಚ್ಚರಿ ಮೂಡಿಸಿದೆ.

ನಾವು ಅನೇಕ ರೋಗಿಗಳನ್ನು ನೋಡಿದ್ದೇವೆ, ಚಿಕಿತ್ಸೆ ನೀಡಿದ್ದೇವೆ. ಆದರೆ ಈ ಮಹಿಳೆ 158 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗಷ್ಟೇ ಗುಣಮುಖರಾಗಿದ್ದಾರೆ.

ಇಷ್ಟೊಂದು ಸುದೀರ್ಘ‌ ಅವಧಿಯ ಚಿಕಿತ್ಸೆ ನೀಡಿರುವುದು ರಾಜ್ಯದಲ್ಲಿ ಇದೇ ಮಹಿಳೆಗೆ ಎಂದರೂ ತಪ್ಪಾಗಲಾರದು ಎನ್ನುತ್ತಾರೆ ಜಿಲ್ಲಾಸ್ಪತ್ರೆ ವೈದ್ಯರು.

Advertisement

Udayavani is now on Telegram. Click here to join our channel and stay updated with the latest news.

Next