ಬೆಂಗಳೂರು: ಅಪಾರ್ಟ್‌ಮೆಂಟ್ ಒಂದರ ದುರು ಅನಾಥವಾಗಿ ನಿಂತಿದ್ದ ದ್ವಿಚಕ್ರ ವಾಹನವನ್ನು ಯಾರಾದರೂ ಕದಿಯುತ್ತಾರೆ ಎಂದರಿತ ಪೊಲೀಸರು ಅದನ್ನು ಠಾಣೆಗೆ ಕೊಂಡೊಯ್ದರೆ, “ಪೊಲೀಸರೇ ನನ್ನ ಸ್ಕೂಟರ್ ಕದಿದ್ದಾರೆ’ ಎಂದು ಆ ವಾಹನದ ವಾರಸುದಾರ ಮಹಿಳೆ ಟ್ವೀಟಿಸುವುದೇ! ಹೌದು. ನಗರದಲ್ಲಿ ಇತ್ತೀಚೆಗೆ ದ್ವಿಚಕ್ರ ವಾಹನಗಳ ಕಳವು ಮಿತಿ ಮೀರಿದೆ.
ಮನೆ ಹೊರಗೆ ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿದ ವಾಹನಗಳ ಲಾಕನ್ನೇ ಮುರಿದು ಕಳìಳರು ಹೊತ್ತೂಯ್ಯುತ್ತಾರೆ. ಅಂಥದರಲ್ಲಿ ಹ್ಯಾಂಡಲ; ಲಾಕ್ ಮಾಡದೆ ಇರುವ ವಾಹನವನ್ನು ಬಿಡುತ್ತಾರಾ… ಈ ವಿಷಯ ತಿಳಿದಿರುವ ಪೊಲೀಸರು, ಭಾರತಿನಗರದ ಅಪಾರ್ಟ್‌ಮೆಂಟ್ ಒಂದರತ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಠಾಣೆಗೆ ತಂದ ತಪ್ಪಿಗೆ “ಕಳ್ಳರು’ ಎಂಬ ಆರೋಪ ಎದುರಿಸುತ್ತಿದ್ದಾರೆ.
ಅ.31ರಂದು ತಡರಾತ್ರಿ ಭಾರತಿನಗರದ ಅಪಾರ್ಟ್‌ಮೆಂಟ್ ಒಂದರ ಎದುರು ವಾರಸುದಾರರಿಲ್ಲದ ದ್ವಿಚಕ್ರವಾಹನ ನಿಂತಿತ್ತು. ಇದನ್ನು ಗಮನಿಸಿದ ಗಸ್ತು ಪೊಲೀಸರು, ವಾಹನವನ್ನು ವಶಕ್ಕೆ ಪಡೆದು ಠಾಣೆಗೆ ತಂದಿದ್ದರು. ಮರು ದಿನ ಬೆಳಗ್ಗೆ ಠಾಣೆಗೆ ಬಂದ ಮಹಿಳೆಯೊಬ್ಬರು, ತಮ್ಮ ದ್ವಿಚಕ್ರ ವಾಹನ ಕಳುವಾಗಿದೆ ಎಂದಾಗ, ಎಚ್ಚೆತ್ತ ಪೊಲೀಸರು, ಹಿಂದಿನ ರಾತ್ರಿ ತಾವು ಜಪ್ತಿ ಮಾಡಿದ್ದ ವಾಹನಗಳನ್ನು ಗುರುತಿಸುವಂತೆ ಹೇಳಿದ್ದಾರೆ.
ಅದರಂತೆ ಠಾಣೆ ಆವರಣದಲ್ಲಿದ್ದ ತನ್ನ ದ್ವಿಚಕ್ರ ವಾಹನವನ್ನು ಮಹಿಳೆ ಗುರುತಿಸಿದ್ದರು. ಅನಂತರ ನಿರ್ಲಕ್ಷ್ಯ ಆರೋಪದಲ್ಲಿ ಮಹಿಳೆಯಿಂದ ದಂಡ ಕಟ್ಟಿಸಿಕೊಂಡ ಪೊಲೀಸರು, ವಾಹನವನ್ನು ಕೊಟ್ಟು ಕಳುಹಿಸಿದ್ದರು. ಆದರೆ, ಪೊಲೀಸರು ದಂಡ ಕಟ್ಟಿಸಿಕೊಂಡಿದ್ದರಿಂದಲೋ ಏನೋ ಕೋಪಗೊಂಡಿದ್ದ ಮಹಿಳೆ, “ಪೊಲೀಸರೇ ಬೈಕ್ ಕಳವು ಮಾಡಿದ್ದಾರೆ’ ಎಂದು ಟ್ವೀಟಿಸಿದ್ದಾರೆ.
ನಗರದಲ್ಲಿ ದ್ವಿಚಕ್ರ ವಾಹನಗಳ ಕಳವು ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಕದ್ದ ವಾಹನಗಳನ್ನು ದುಷ್ಕರ್ಮಿಗಳು ರಾಬರಿ, ಕೊಲೆ ಮತ್ತಿತರ ಆಪರಾಧ ಚಟುವಟಿಕೆಗಳಲ್ಲಿ ಬಳಸುವುದರಿಂದ ಈ ಬಗ್ಗೆ ಹೆಚ್ಚು ನಿಗಾ ವಹಿಸಲಾಗಿದೆ. ರಸ್ತೆ ಬದಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು, ಹಲವು ದಿನಗಳವರೆಗೆ ಪಾರ್ಕಿಂಗ್ ಜಾಗದಲ್ಲೇ ವಾಹನ ಬಿಟ್ಟಿರುವುದು, ವಾರಸುದಾರರಿಲ್ಲದ ಅಥವಾ ಅನುಮಾಸ್ಪದ ವಾಹನ ಕಂಡುಬಂದರೆ ಅಂಥ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತದೆ ಅಧಿಕಾರಿ ವಿವರಿಸಿದ್ದಾರೆ.
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ
ಪೊಲೀಸರೇ ಸ್ಕೂಟರ್ ಕದ್ದಿದ್ದಾರೆ ಎಂಬ ಮಹಿಳೆಯ ಆರೋಪ ನಿರಾಕರಿಸಿರುವ ಪೊಲೀಸರು, “ಕರ್ನಾಟಕ ಪೊಲೀಸ್ ಕಾಯ್ದೆ 92ಸಿ ಅಡಿಯಲ್ಲಿ ಮಾಲೀಕರಿಲ್ಲದ, ಅನುಮಾನಸ್ವದ ವಾಹನಗಳು ಕಂಡು ಬಂದರೆ ವಶಕ್ಕೆ ಪಡೆಯುವುದು ಸಹಜ. ಅದರಂತೆ ವಾಹನ ಜಪ್ತಿ ಮಾಡಿದ್ದೇವೆ. ಮಹಿಳೆ ಠಾಣೆಗೆ ಬಂದ ಬಳಿಕ ಪರಿಶೀಲನೆ ನಡೆಸಿ ವಾಹನ ಹಿಂದಿರುಗಿಸಿದ್ದೇವೆ.
ಕಾನೂನಾತ್ಮಕವಾಗಿ ಕರ್ತವ್ಯ ನಿರ್ವಹಿಸಲಾಗಿದೆ. ಅಲ್ಲದೆ ದ್ವಿಚಕ್ರ ವಾಹನ ವಶಕ್ಕೆ ಪಡೆಯುವ ಮೊದಲು ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಬಳಿ ವಿಚಾರಿಸಿದಾಗ, ಆತ ವಾಹನ ಯಾರದೆಂದು ಗೊತ್ತಿಲ್ಲ ಎಂದು ಹೇಳಿದ್ದ. ಆ ನಂತರವೇ ನಾವು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.