ವಾಷಿಂಗ್ಟನ್: ಹಿಂದಿನಿಂದಲೂ ಮಾಧ್ಯಮ ಗಳೆಂದರೆ ಉರಿದುಬೀಳುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಹೊಸದೊಂದು ಬೆಳವಣಿಗೆಗೆ ನಾಂದಿಹಾಡಿದ್ದಾರೆ. ಅದೇನೆಂದರೆ, “ಅತ್ಯಂತ ಭ್ರಷ್ಟ ಹಾಗೂ ಅಪ್ರಾಮಾಣಿಕ ವರದಿ’ ಪ್ರಕಟಿಸಿದ ಪತ್ರಿಕೆಗಳಿಗೆ “ಫೇಕ್ ನ್ಯೂಸ್ ಪ್ರಶಸ್ತಿ’ (ಸುಳ್ಳು ಸುದ್ದಿ ಪ್ರಶಸ್ತಿ) ಘೋಷಿಸಿ ರುವುದು. ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಹಾಗೂ ಅದರ ಅನಂತರದಲ್ಲೂ ಟ್ರಂಪ್ ವಿರುದ್ಧ ವರದಿ ಪ್ರಕಟಿಸುತ್ತಿದ್ದ ಪತ್ರಿಕೆಗಳ ಮೇಲೆ ಕಿಡಿಕಾರುತ್ತಿದ್ದ ಟ್ರಂಪ್, ಈ ವರ್ಷ ನಾನು ಫೇಕ್ ನ್ಯೂಸ್ ಪ್ರಶಸ್ತಿ ಘೋಷಿ ಸುತ್ತೇನೆ ಎಂದು ಹಿಂದೆಯೇ ಪ್ರಕಟಿಸಿದ್ದರು.
ಅದರಂತೆ, ಗುರುವಾರ ಟ್ವಿಟರ್‌ನಲ್ಲಿ ಪ್ರಶಸ್ತಿ ಪ್ರಕಟಿಸಿದ್ದಾರೆ. ಅದರಲ್ಲಿ ಮೊದಲ ಸ್ಥಾನ ವನ್ನು ದಿ ನ್ಯೂಯಾರ್ಕ್ ಟೈಮ್ಸ್ ಪಡೆ ದಿದೆ. ಟ್ರಂಪ್ ವಿಜೇತರಾದ ದಿನ ಈ ಪತ್ರಿಕೆ ಯು ಇನ್ನು ಆರ್ಥಿಕತೆಯು ಚೇತರಿಸಿ ಕೊಳ್ಳು ವುದಿಲ್ಲ ಎಂದು ವರದಿ ಪ್ರಕಟಿಸಿತ್ತು. ಆ ವರದಿಗಾಗಿಯೇ ಫೇಕ್ ನ್ಯೂಸ್ ಪ್ರಶಸ್ತಿ ನೀಡಲಾಗಿದೆ. ಅನಂತರದ ಸ್ಥಾನಗಳನ್ನು ಎಬಿಸಿ ನ್ಯೂಸ್, ಸಿಎನ್‌ಎನ್, ಟೈಮ್ ಮತ್ತು ವಾಷಿಂ ಗ್ಟನ್ ಪೋಸ್ಟ್‌ನಲ್ಲಿ ಪ್ರಕಟವಾದ ವರದಿಗಳು ಸೇರಿವೆ. ಈ ಎಲ್ಲ ವರದಿಗಳೂ ಪಕ್ಷಪಾತದಿಂದ ಕೂಡಿವೆ ಎಂದಿದ್ದಾರೆ ಟ್ರಂಪ್.
ಪ್ರಶಸ್ತಿ ಪಟ್ಟಿಯನ್ನು ರಿಪಬ್ಲಿಕನ್ ನ್ಯಾಶನಲ್ ಕಮಿಟಿಯ ವೆಬ್‌ಸೈಟ್‌ನಲ್ಲೂ ಅಪ್‌ಲೋಡ್ ಮಾಡಲಾಗಿದೆ ಎಂಬ ವಿಚಾರ ತಿಳಿದ ಮರುಕ್ಷಣವೇ ಎಲ್ಲರೂ ವೆಬ್‌ಸೈಟ್ ನೋಡಲು ಆತುರಪಟ್ಟ ಕಾರಣ, ವೆಬ್‌ಸೈಟ್ ಕೆಲಕಾಲ ಕ್ರ್ಯಾಷ್ ಆಗಿತ್ತು.
ಯಾರಿಗೆ ಪ್ರಶಸ್ತಿ?
ದಿ ನ್ಯೂಯಾರ್ಕ್ ಟೈಮ್ಸ್
ಎಬಿಸಿ ನ್ಯೂಸ್
ಸಿಎನ್‌ಎನ್
ಟೈಮ್
ವಾಷಿಂಗ್ಟನ್ ಪೋಸ್ಟ್