Advertisement

ಇಂದು ಸಂಪೂರ್ಣ ಬಂದ್‌; ಅಗತ್ಯ ಸೇವೆ ಹೊರತುಪಡಿಸಿ ಇನ್ಯಾವುದೂ ಇಲ್ಲ

03:04 AM May 24, 2020 | Sriram |

ಬೆಂಗಳೂರು: ರಾಜ್ಯದಲ್ಲಿ ರವಿವಾರ ಸಂಪೂರ್ಣ ಲಾಕ್‌ ಡೌನ್‌ ಇರಲಿದೆ. 4ನೇ ಹಂತದ ಲಾಕ್‌ಡೌನ್‌ ಜಾರಿ ಸಂದರ್ಭ ಪ್ರತೀ ರವಿವಾರ ಸಂಪೂರ್ಣ ಬಂದ್‌ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಹೀಗಾಗಿ ಶನಿವಾರ ಸಂಜೆ 7ರಿಂದ ಸೋಮ ವಾರ ಬೆಳಗ್ಗೆ ವರೆಗೆ ಸಂಪೂರ್ಣ ನಿರ್ಬಂಧವಿರುತ್ತದೆ. ಅಗತ್ಯ ವಸ್ತು, ಸೇವೆ ಹೊರತುಪಡಿಸಿ ಬೇರೆ ಯಾವುದೇ ಸೇವೆ ಇರುವುದಿಲ್ಲ.

Advertisement

ಸಾರ್ವಜನಿಕರ ಓಡಾಟ ನಿಷೇಧಿಸ ಲಾಗಿದ್ದು, ಲಾಕ್‌ಡೌನ್‌ ಉಲ್ಲಂಘಿಸಿ ಸಂಚರಿಸುವ ದ್ವಿಚಕ್ರ ವಾಹನ ಮತ್ತು ಕಾರು ಸಹಿತ ವಾಹನಗಳನ್ನು ಜಫ್ತಿ ಮಾಡುವುದಾಗಿಯೂ ಪೊಲೀಸ್‌ ಇಲಾಖೆ ಎಚ್ಚರಿಕೆ ನೀಡಿದೆ. ನಿಷೇಧಾಜ್ಞೆ ಜಾರಿಯಲ್ಲಿ ಇರುವುದರಿಂದ ಯಾವುದೇ ರೀತಿಯ ಓಡಾಟಕ್ಕೂ ಅವಕಾಶ ಇರುವುದಿಲ್ಲ.ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್‌ ಗಳು, ರೈಲು ಸಂಚಾರವೂ ಇರುವು ದಿಲ್ಲ, ಆಟೋ, ಟ್ಯಾಕ್ಸಿ ಸಂಚಾರಕ್ಕೂ ಅವಕಾಶವಿಲ್ಲ. ಪೂರ್ವ ನಿಯೋಜಿತ ಮದುವೆಗಳಿಗೆ ಮಾತ್ರ ಅವಕಾಶವಿದ್ದು, 50 ಜನರಿಗೆ ಮಾತ್ರ ಪ್ರವೇಶ. ಉಳಿದಂತೆ ಯಾವುದೇ ಸಭೆ ಸಮಾರಂಭಗಳಿಗೆ ಅವಕಾಶವಿಲ್ಲ. ಹೊಟೇಲ್‌ಗ‌ಳಲ್ಲಿ ಪಾರ್ಸೆಲ್‌ ಸೇವೆಗೆ ಮಾತ್ರ ಅವಕಾಶ ಇರಲಿದೆ.

ಮದ್ಯ ಮಾರಾಟ ಸಂಪೂರ್ಣ ಬಂದ್‌ ಇರಲಿದ್ದು, ಔಷಧ ಅಂಗಡಿ, ಆಸ್ಪತ್ರೆ, ಪತ್ರಿಕೆ ವಿತರಣೆಗೆ ವಿನಾ ಯಿತಿ ನೀಡಲಾಗಿದೆ. ದಿನಸಿ, ಹಾಲು, ಹಣ್ಣು-ತರಕಾರಿ, ಮಾಂಸ, ಮೀನು ಮಾರಾಟಕ್ಕೆ ಅವಕಾಶ ಕೊಡ ಲಾಗಿದೆಯಾದರೂ ಸ್ಥಳೀಯ ಸಂಸ್ಥೆಗಳ ನಿರ್ಧಾರಕ್ಕೆ ಬಿಡಲಾಗಿದೆ.

ಜಿಲ್ಲಾ ಮತ್ತು ರಾಜ್ಯ ಗಡಿಗಳನ್ನು ಸಂಪೂರ್ಣ ಬಂದ್‌ ಮಾಡಲು ಆದೇಶಿಸಲಾಗಿದ್ದು, ತಪಾಸಣೆ ನಡೆಸಲು ಸೂಚನೆ ನೀಡಲಾಗಿದೆ.

ಸೋಮವಾರ ಸರಕಾರಿ ರಜಾ ದಿನವಾದ್ದರಿಂದ ಕೋವಿಡ್‌ ತುರ್ತು ಸೇವೆಯಲ್ಲಿ ನಿರತರಾಗಿರುವ ಇಲಾಖೆ ಗಳನ್ನು ಹೊರತುಪಡಿಸಿ ಇತರ ಇಲಾಖೆಗಳ ನೌಕರರಿಗೆ ರವಿವಾರ ಮತ್ತು ಸೋಮವಾರ (ರಮ್ಜಾನ್‌)ಎರಡು ದಿನ ರಜೆ ದೊರೆತಂತಾಗಿದೆ.

Advertisement

ಏನಿರುತ್ತದೆ?
ಹಣ್ಣು-ತರಕಾರಿ, ಹಾಲು, ಮಾಂಸ, ಔಷಧ ಅಂಗಡಿ, ಆಸ್ಪತ್ರೆ,ಹೊಟೇಲ್‌ (ಪಾರ್ಸೆಲ್‌ ಮಾತ್ರ)

ಏನಿರುವುದಿಲ್ಲ?
- ಬಸ್‌, ಆಟೋ, ಟ್ಯಾಕ್ಸಿ, ರೈಲು, ಮದ್ಯ
- ಷರತ್ತು ಅನ್ವಯ ಪೂರ್ವನಿಯೋಜಿತ ಮದುವೆಗೆ 50 ಮಂದಿಗೆ ಪ್ರವೇಶ

Advertisement

Udayavani is now on Telegram. Click here to join our channel and stay updated with the latest news.

Next