Advertisement

ವಾರಿಯರ್ಸ್‌ಗೆ ಲಸಿಕೆ ಪೂರೈಸಿಲ್ಲ

05:33 PM Jun 10, 2021 | Team Udayavani |

ದೊಡ್ಡಬಳ್ಳಾಪುರ: ಕೋವಿಡ್‌ಮುಂಚೂಣಿ ಕಾರ್ಯಕರ್ತರಿಗೆ ಬುಧವಾರ ಲಸಿಕೆ ಪೂರೈಕೆಯಾಗದ ಹಿನ್ನೆಲೆ,ಸರದಿಯಲ್ಲಿ ಕಾದು ಬಸ ವಳಿದಜನರು ಅಧಿಕಾರಿಗಳ ವಿರುದ್ಧಆಕ್ರೋಶ ವ್ಯಕ್ತಪಡಿಸಿದ ಘಟನೆಆಯುರ್ವೇದ ಆಸ್ಪತ್ರೆ ಲಸಿಕಾ ಕೇಂದ್ರದಲ್ಲಿ ನಡೆದಿದೆ.

Advertisement

ಲಸಿಕೆಪಡೆಯಲು 18 ವರ್ಷ ಮೇಲ್ಪಟ್ಟ 45ವರ್ಷದೊಳಗಿನ ವಿವಿಧ ಕಾರ್ಖಾನೆಕಾರ್ಮಿಕರು, ಬೀದಿ ಬದಿವ್ಯಾಪಾರಿಗಳು ಬೆಳಗ್ಗೆ 7.30ರಿಂದಕಾದು ನಿಂತಿದ್ದರು. ಆದರೆ, 11.30ರವೇಳೆ ಲಸಿಕೆ ಪೂರೈಕೆಯಿಲ್ಲ ಎಂಬಅಧಿಕಾರಿಗಳ ಹೇಳಿಕೆಯಿಂದ ಕೆರಳಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕೆಲಕಾಲ ನೂಕು ನುಗ್ಗಲು ಉಂಟಾಯಿ ತು. ಸ್ಥಳಕ್ಕೆ ಆಗಮಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು,ಸಮರ್ಪಕವಾಗಿ ಲಸಿಕೆ ವಿತರಣೆಗೆಒತ್ತಾಯಿಸಿದರು. ಲಸಿಕೆ ಪೂರೈಕೆಯಾಗಿಲ್ಲ. ಇದ ರಿಂದ ಸಮಸ್ಯೆಎದುರಾಗಿದೆ. ಲಸಿಕೆ ಬಂದ ನಂತರಸರಣಿ ಸಂಖ್ಯೆಯಂತೆ ಬುಧವಾರಬಂದವರಿಗೆ ಆದ್ಯತೆ ನೀಡಿ, ಲಸಿಕೆಕೊಡಿಸಲಾಗುವುದು ಎಂದು ಅನುಮತಿ ಪಡೆದು ಸರಣಿ ಸಂಖ್ಯೆ ನೀಡಿ ಪರಿಸ್ಥಿತಿ ತಿಳಿಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next