Advertisement
– ಸವಿ ನೆನಪುಗಳನ್ನು ದಾಖಲಿಸಿನಿಮ್ಮ ಜೀವನದ ಸುಂದರ ನೆನಪುಗಳಿಗೆ ಸಾಕ್ಷಿ ಹೇಳುವ ಚಿತ್ರಪಟಗಳಿಂದ ಗೋಡೆಗಳನ್ನು ಅಲಂಕರಿಸಿ. ಒಂದರ ಪಕ್ಕ ಇನ್ನೊಂದರಂತೆ, ಸಾಲಾಗಿ ಫೋಟೊ ಪ್ರೇಮ್‌ಗಳನ್ನು ಜೋಡಿಸುವ ಕಾಲ ಸರಿದು ಹೋಗಿದೆ. ಈಗ ಪಕ್ಕದ ಚೌಕಟ್ಟು ಕೊಂಚವೇ ಕೆಳಗೆ ಬರುವಂತೆ, ಅದರ ನಂತರದ್ದು ಇನ್ನೂ ಕೊಂಚ ಕೆಳಗೆ ಬರುವಂತೆ ಜೋಡಿಸಿ. ಚಿಕ್ಕ ಚಿತ್ರದಿಂದ ದೊಡ್ಡ ಗಾತ್ರದವರೆಗೆ ಮೆಟ್ಟಿಲಿನ ಆಕಾರದಲ್ಲಿ ಜೋಡಿಸುವುದು ಕಲಾತ್ಮಕತೆಯ ಸಂಕೇತ.
ಬಿಳಿ ಬಣ್ಣದ ಮೇಲೆ ನಿಮಗೆ ಇಷ್ಟವಾದ ಬಣ್ಣವನ್ನು ಸುಂದರವಾಗಿ ಬಿಡಿಸಿ. ವಿವಿಧ ಬಣ್ಣಗಳನ್ನು ಬಳಸಿ ಕಲೆಗೊಂದು ರೂಪ ನೀಡಿ. ಒಂದು ವೇಳೆ ನಿಮ್ಮಲ್ಲಿ ಆ ಕಲಾವಿದನಿಲ್ಲದಿದ್ದಲ್ಲಿ ಒಂದೇ ಬಣ್ಣದ ವೃತ್ತಾಕಾರ, ಚೌಕಾಕಾರಗಳನ್ನು ಬಿಡಿಸಿ. ಪ್ರತಿ ಆಕೃತಿಗೂ ಪ್ರಖರವಾದ ಬೇರೆ ಬೇರೆ ಬಣ್ಣಗಳನ್ನು ಬಳಸುವ ಮೂಲಕ ವೈವಿಧ್ಯವನ್ನು ಪಡೆಯಬಹುದು. ಈಗ ಗೋಡೆಗೆ ಹಚ್ಚುವ ಸಿದ್ಧರೂಪದ ಅಲಂಕಾರದ ಚಿತ್ರಗಳು ಸಿಗುತ್ತವೆ. ಸೂಕ್ತವಾದವುಗಳನ್ನು ಖರೀದಿಸಿ ಮನೆಯ ಅಂದವನ್ನು ಹೆಚ್ಚಿಸಬಹುದು. -ಗಾಢ ಬಣ್ಣದ ಪರದೆ ಮತ್ತು ರತ್ನಗಂಬಳಿ
ನೆಲಕ್ಕೆ ನೇರಳೆ, ಕಾಫಿ ಅಥವಾ ಕಂದು ಬಣ್ಣದ ರತ್ನಗಂಬಳಿ ಸೂಕ್ತವಾದರೆ, ಕಿಟಕಿಗಳಿಗೆ ಅದೇ ಬಣ್ಣದ ಪರದೆ ಉತ್ತಮವಾದ ಮೆರುಗು ನೀಡುತ್ತದೆ. ಆದರೆ, ಪೀಠೊಪಕರಣಗಳು ಮತ್ತು ಮೇಜಿನ ಮೇಲಿನ ಬಟ್ಟೆ ಬಿಳಿ ಬಣ್ಣದ್ದಿರಲಿ. ಆಗ ಹಿಂಭಾಗದ ಗಾಢವರ್ಣದ ಪರದೆ ಹಿಂಭಾಗದಲ್ಲಿ ಎದ್ದು ಕಾಣುತ್ತದೆ.
Related Articles
ಪುಸ್ತಕಗಳನ್ನು ಸುಂದರವಾಗಿ ಜೋಡಿಸಲು ಪುಸ್ತಕದ ಕಪಾಟೊಂದನ್ನು ಗೋಡೆಯ ಮಧ್ಯೆ ಇರಿಸಿ. ಒಂದೋ ದೊಡ್ಡ ಅಥವಾ ಗೋಡೆಗೇ ಅಳವಡಿಸಬಲ್ಲ ಚಿಕ್ಕಚಿಕ್ಕ ಮೂರು ಅಥವಾ ನಾಲ್ಕು ಕಪಾಟುಗಳನ್ನೂ ಮಾಡಿ. ಆದರೆ, ಇವು ಗಾಢವರ್ಣದಲ್ಲಿದ್ದು ಬಿಳಿ ಬಣ್ಣದ ಹಿನ್ನೆಲೆಯಲ್ಲಿ ಕಾಣುವಂತಿರಬೇಕು. ಈ ಪುಸ್ತಕದ ಕಪಾಟನ್ನು ನಿಮ್ಮ ಅಭಿರುಚಿಗೆ ತಕ್ಕಂತೆ ವಿಭಿನ್ನವಾದ ಆಕಾರದಲ್ಲಿ ನಿರ್ಮಿಸಬಹುದು.
Advertisement
-ಅಲಂಕಾರಿಕ ವಸ್ತುಗಳನ್ನು ಇರಿಸಿಬಿಳಿ ಬಣ್ಣದ ಗೋಡೆಯ ಹಿನ್ನೆಲೆಯಲ್ಲಿ ಎದ್ದು ಕಾಣುವಂತಿರುವ ಕಲಾತ್ಮಕ ಮತ್ತು ಆಲಂಕಾರಿಕ ವಸ್ತುಗಳನ್ನು ಸ್ಥಾಪಿಸಿ ಮನೆಯ ಸೌಂದರ್ಯವನ್ನು ಹೆಚ್ಚಿಸಿ. ಒಂದು ವೇಳೆ ನಿಮ್ಮ ಮನೆಯ ಸೋಫಾಸೆಟ್ ಬಿಳಿ ಬಣ್ಣದಲ್ಲಿದ್ದರೆ ಅದರಲ್ಲಿರುವ ದಿಂಬುಗಳು ಗಾಢವರ್ಣದಲ್ಲಿರಲಿ. ಇದರ ಮೇಲೆ ಸಾಕಷ್ಟು ಬೆಳಕು ಬೀಳುವಂತಿರಲಿ. -ಸುಲಭಾ ಆರ್. ಭಟ್