Advertisement

ಮಳೆಗೆ ಕುಸಿದು ಬಿದ್ದ ಮನೆ ಗೋಡೆ

06:00 PM Nov 14, 2021 | Team Udayavani |

ಚಾಮರಾಜನಗರ: ನಗರದ 18ನೇ ವಾರ್ಡ್‌ ವ್ಯಾಪ್ತಿಯ ಉಪ್ಪಾರ ಬಡಾವಣೆಯಲ್ಲಿ ಮಳೆಗೆ ಮನೆ ಗೋಡೆ ಕುಸಿದಿರುವ ಘಟನೆ ನಡೆದಿದೆ. ನಗರ ವ್ಯಾಪ್ತಿಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದಲೂ ಸುರಿಯುತ್ತಿರುವ ಮಳೆಯಿಂದಾಗಿ ನಗರಸಭಾ ವ್ಯಾಪ್ತಿಯ 18ನೇ ವಾರ್ಡ್‌ಗೆ ಸೇರಿದ ಉಪ್ಪಾರ ಬಡಾವಣೆಯ ನಿವಾಸಿ ಮಹದೇವಮ್ಮ ಎಂಬುವರಿಗೆ ಸೇರಿದ ಮನೆ ಗೋಡೆ ಕುಸಿದಿದೆ.

Advertisement

ಮಹದೇವಮ್ಮ ಅವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದಾರೆ. ಶುಕ್ರವಾರ ಮಧ್ಯರಾತ್ರಿಯಲ್ಲಿ ಘಟನೆ ನಡೆದಿದ್ದು ಮಹ ದೇವಮ್ಮ ಅವರು ಮನೆಯ ಮತ್ತೂಂದು ಕೋಣೆಯಲ್ಲಿ ಮಲಗಿದ್ದರಿಂದ ಯಾವುದೇ ಅಪಾಯವಾಗಿಲ್ಲ.ಮನೆಯ ಬಳಿ ಚರಂಡಿ ನೀರು ಸಲೀಸಾಗಿ ಹೊರ ಹೋಗುತ್ತಿಲ್ಲ.

ಇದನ್ನೂ ಓದಿ:- ಬಂಟ್ವಾಳ: ಪಿಕ್‍ಅಪ್ ಮರಕ್ಕೆ ಡಿಕ್ಕಿ: ಇಬ್ಬರು ಸಾವು

ಇದರಿಂದ ಮಳೆಯ ನೀರೆಲ್ಲ ಒಂದೇ ಕಡೆ ನಿಲ್ಲುವುದರಿಂದ ಮನೆಯ ಗೋಡೆ ನೀರಿನಿಂದಾಗಿ ಕುಸಿಯಲು ಕಾರಣ ವಾಗಿದೆ. ಈ ಸಂಬಂಧ ಮಹದೇವಮ್ಮ ಅವರು ನಗರಸಭಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ನಗರಸಭೆ ವತಿಯಿಂದ ಸೂಕ್ತ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next