ಜೋಪಡಿಯಲ್ಲಿ ವಿವಿ ಪ್ಯಾಟ್ ಯಂತ್ರಗಳು ಪತ್ತೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸದರಿ ಯಂತ್ರಗಳು ಯಾವುದಕ್ಕೆ ಬಳಸುವುದು ಎಂಬುದು ಗೊತ್ತಿಲ್ಲದೇ ಕಾರ್ಮಿಕರು ತಂದಿರಬಹುದು ಎನ್ನಲಾಗಿದ್ದು, ಬಳಿಕ ಇವು ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಮತ ಖಾತ್ರಿ ರಸೀದಿ ನೀಡುವ ಯಂತ್ರಗಳು ಎಂಬುದು ತಿಳಿದಿದೆ.
Advertisement
ಸಾಕಷ್ಟು ಭದ್ರತೆಯಲ್ಲಿ ಇರಬೇಕಾದ ಹಾಗೂ ಸಶಸ್ತ್ರ ಕಾವಲಿನಲ್ಲಿದ್ದ ಈ ಯಂತ್ರಗಳು ಹೀಗೆ ಬೀದಿ ಬದಿಯಲ್ಲಿಬೀಳಲು ಕಾರಣವೇನು, ಇವು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ ಯಂತ್ರಗಳು, ಇವುಗಳನ್ನು ಎಸೆದವರು ಯಾರು
ಎಂಬೆಲ್ಲ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ. ವಿಷಯ ತಿಳಿಯುತ್ತಿದ್ದಂತೆ ಬಸವನಬಾಗೇವಾಡಿ ಕ್ಷೇತ್ರದ ಚುನಾವಣಾ ಧಿಕಾರಿ ದುರುಗೇಶ ರುದ್ರಾಕ್ಷಿ, ವಿಜಯಪುರ ಉಪ ವಿಭಾಗಾಧಿ ಕಾರಿ, ಬಸವನಬಾಗೇವಾಡಿ ತಹಶೀಲ್ದಾರ್ ಎಚ್.ಎಸ್. ಸಂಪಗಾಂವಿ, ಮನಗೂಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ವಿಜಯಪುರ ನಗರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.