Advertisement

ಸುಶಿಕ್ಷಿತರ ಮತಗಳೇ ಹೆಚ್ಚು ಅಸಿಂಧು!

11:37 PM Jun 07, 2024 | Team Udayavani |

ರಾಮನಗರ/ಕಲಬುರಗಿ: ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಸುಶಿಕ್ಷಿತರ ಮತಗಳು ಹೆಚ್ಚು ತಿರಸ್ಕೃತಗೊಂಡಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement

ಬೆಂಗಳೂರು ಪದವೀಧರ, ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಸಂದರ್ಭದಲ್ಲಿ 8,482 ಮತಗಳು ತಿರಸ್ಕೃತಗೊಂಡಿರುವುದು ಪತ್ತೆಯಾಗಿದೆ. ಅಂದರೆ ಚಲಾವಣೆಗೊಂಡ ಒಟ್ಟು ಮತಗಳಲ್ಲಿ ಶೇ.10 ಮತಗಳು ತಿರಸ್ಕೃತಗೊಂಡಂತಾಗಿದೆ. ಈಶಾನ್ಯ ಪದವೀಧರ ಮತಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟಾರೆ 1.09 ಲಕ್ಷ ಮತಗಳಲ್ಲಿ 12,513 ಮತಗಳು ತಿರಸ್ಕೃತವಾಗಿವೆ. ಪದವೀಧರ, ಸರಕಾರಿ ನೌಕರರು-ಅಧಿ ಕಾರಿಗಳೇ ಇರುವ ಮತದಾರರಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮತ ತಿರಸ್ಕೃತವಾಗಿರುವುದು ಆತ್ಮಾವಲೋಕನಕ್ಕೆ ಎಡೆ ಮಾಡಿಕೊಟ್ಟಿದೆ. ಈ ಕ್ಷೇತ್ರದಲ್ಲಿ ಶೇ.12ರಷ್ಟು ಮತಗಳು ಅಸಿಂಧುವಾಗಿವೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತ ಎಣಿಕೆ ವೇಳೆ ಚಲಾವಣೆಯಾಗಿದ್ದ 6,655 ಅಂಚೆ ಮತಗಳ ಪೈಕಿ 1,139 ಮತಗಳು ತಿರಸ್ಕೃತಗೊಂಡಿವೆ. ಕೆಲವು ತಿಂಗಳ ಹಿಂದೆ ನಡೆದಿದ್ದ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲೂ 1,300ಕ್ಕೂ ಹೆಚ್ಚು ಮತಗಳು ತಿರಸ್ಕೃತಗೊಂಡಿದ್ದವು. ಸಾರ್ವತ್ರಿಕ ಚುನಾವಣೆಯಲ್ಲಿ ಇವಿಎಂ ಬಳಕೆ ಆರಂಭವಾದ ಬಳಿಕ ತಿರಸ್ಕೃತ ಮತಗಳ ಸಂಖ್ಯೆ ಶೂನ್ಯಕ್ಕೆ ಇಳಿದರೆ, ಮತಪತ್ರಗಳನ್ನು ಬಳಸಿ ನಡೆಸುವ ಚುನಾವಣೆಗಳಲ್ಲಿ, ತಿರಸ್ಕೃತ ಮತಗಳು ಹೆಚ್ಚುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next