Advertisement

ಗ್ರಾಮ ದೇವತೆಗಳ ಊರ ಹಬ್ಬ

07:00 AM May 12, 2019 | Lakshmi GovindaRaj |

ಬೆಂಗಳೂರು: ತ್ಯಾಗರಾಜನಗರದ ನಾಗಸಂದ್ರ ಬಳಿಯ ರಾಮಾಂಜನೇಯ ಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್‌ ವತಿಯಿಂದ ಮೇ 13ರಿಂದ 15ರವರೆಗೆ “ಗ್ರಾಮ ದೇವತೆಗಳ ಊರ ಹಬ್ಬ’ ಹಮ್ಮಿಕೊಳ್ಳಲಾಗಿದೆ.

Advertisement

ಮೇ 13ರಂದು ಬೆಳಗ್ಗೆ ಆಂಜನೇಯಸ್ವಾಮಿ, ಮಹಾಗಣಪತಿ, ರಾಮದೇವರು, ಸತ್ಯನಾರಾಯಣ ಹಾಗೂ ನವಗ್ರಹಗಳಿಗೆ ಪಂಚಾಮೃತಾಭಿಷೇಕ. ಸಂಜೆ ಆಂಜನೇಯನಿಗೆ ಬೆಲ್ಲದ ದೀಪಾರತಿ ಸೇವೆ, ಉಪ್ಪಮ್ಮ ದೇವಿಗೆ ತಂಬಿಟ್ಟಿನ ಆರತಿ ನಡೆಯಲಿದೆ.

14ರಂದು ಬೆಳಗ್ಗೆ ಪಂಚಾಮೃತಾಭಿಷೇಕ, ಸಂಜೆ 4ಕ್ಕೆ ನಾಗಸಂದ್ರದ ಬಿಬಿಎಂಪಿ ಕಬಡ್ಡಿ ಆಡದ ಮೈದಾನದಲ್ಲಿ ಮುನೇಶ್ವರಸ್ವಾಮಿ, ಪ್ಲೇಗಮ್ಮ, ದಾಳಮ್ಮ, ದನವಿನಮ್ಮ, ಗಂಗಮ್ಮ, ಚಪಲಮ್ಮ ದೇವತೆಗೆ ದೀಪದಾರತಿ ನಡೆಯಲಿದೆ.

15ರ ಬೆಳಗ್ಗೆ 8 ಗಂಟೆಗೆ ಕಳಶ ಪೂಜೆ, 9ಕ್ಕೆ ದೀಪಾರತಿ ಸೇವೆಯೊಂದಿಗೆ ಮೆರವಣಿ ನಡೆಯಲಿದ್ದು, ಐಸಿರಿ ಸಾಂಸ್ಕೃತಿಕ ಸಾಮಾಜಿಕ ಮಹಿಳಾ ಸೇವಾ ಟ್ರಸ್ಟ್‌ ಡೊಳ್ಳುಕುಣಿತ, ಗೊಂಬೆ ಬಳಗಗಳು ಸಾಥ್‌ ನೀಡಲಿವೆ. ಹಬ್ಬದ ಕೊನೆಯ ದಿನದ ಮುಖ್ಯಮಂತ್ರಿಗಳು, ಶಾಸಕರು, ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು ಸೇವಾ ಟ್ರಸ್ಟ್‌ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next