ಬೈಲಹೊಂಗಲ: ಸರಕಾರಿ ನೌಕರರು ಎಂದು ಪರಿಗಣಿಸುವಂತೆ ಆಗ್ರಹಿಸಿ ಬಸ್ ನಿಲ್ದಾಣದಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿ ಪತ್ರ ಚಳವಳಿ ನಡೆಸಿ ಮುಖ್ಯಮಂತ್ರಿಗೆ ಅಂಚೆ ಮೂಲಕ ಪತ್ರಗಳನ್ನು ರವಾನಿಸಿದರು.
ಈ ವೇಳೆ ಘಟಕ ವ್ಯವಸ್ಥಾಪಕ ಚೇತನ ಸಾಣಿಕೊಪ್ಪ ಮಾತನಾಡಿ, ಸರಕಾರದ ಅಡಿಯಲ್ಲಿ ಸಾರಿಗೆ ಸಂಸ್ಥೆ ನಡೆಯುತ್ತಿದೆ. ಆದರೂ ಇತರ ಇಲಾಖೆ, ನಿಗಮ ಮಂಡಳಿಗಳಿಗೆ ಹೊಲಿಸಿದರೆ ಸಾರಿಗೆ ನೌಕರರ ವೇತನ ಅತೀ ಕಡಿಮೆ, ಆರೋಗ್ಯ ಕಾರ್ಯಕ್ರಮಗಳು ಸಹ ತೀರ ಕಡಿಮೆಯಾಗಿದ್ದು, ಸಂಸ್ಥೆಯಲ್ಲಿ ಕಾರ್ಯನಿರ್ವಸಿ ನಿವೃತ್ತಿ ಜೀವನ ನಂತರ ಅವರ ಪಿಂಚಣಿ ಸೌಲಭ್ಯ ಇಲ್ಲದ ಕಾರಣ ಜೀವನ ನಡೆಸುವುದು ಅತ್ಯಂತ ದುಸ್ಥರವಾಗುತ್ತಿದೆ. ಶೀಘ್ರವೇ ಸರಕಾರಿ ನೌಕರರಿಗೆ ಕೊಡುವ ಸವಲತ್ತುಗಳನ್ನು ಸಾರಿಗೆ ಇಲಾಖೆ ಸಿಬ್ಬಂದಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ನಮ್ಮೆಲ್ಲ ಸಮಸ್ಯೆಗಳ ಕುರಿತು ರಾಮನಗರದಲ್ಲಿ ನಡೆದ ಸಮಾರಂಭದಲ್ಲಿ ವಿವರಿಸಲಾಗಿತ್ತು. ನಮ್ಮ ಸರ್ಕಾರ ಬಂದರೆ ನಿಮ್ಮ ಬೇಡಿಕೆ ಈಡೇರಿಸುವದಾಗಿ ಭರವಸೆ ನೀಡಿದ್ದರು. ಈಗ ತಾವೇ ಮುಖ್ಯಮಂತ್ರಿಗಳಾದರೂ ಕೂಡಾ ಈ ಕುರಿತು ಚಕಾರ ಎತುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಕೂಡಲೇ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಸಾರಿಗೆ ನೌಕರರು ಬೀದಿಗಿಳಿದು ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಗೆ ನೀಡಿದರು.
ಈ ವೇಳೆ ಮಂಜುನಾಥ ಆನಿಕಿವಿ, ಬಿ.ಜಿ. ಪುಡಕಲಕಟ್ಟಿ, ಜಿ.ಡಿ. ಕಟ್ಟಿಮನಿ, ಬಿ.ಜಿ. ಕುಸಲಾಪೂರ, ಮಲ್ಲಿಕಾರ್ಜುನ ತಲ್ಲೂರ, ಗೌಸ ಕಿತ್ತೂರ, ಎಸ್.ಎಂ. ರಾಮದುರ್ಗ, ಬಸವರಾಜ ಅಕ್ಸರ, ಬಿ.ಡಿ. ಮಲಬನ್ನವರ, ವೈ.ಟಿ. ಬಾಗಾರ ಮತ್ತು ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಹಾಗೂ ಕಾರ್ಮಿಕರು ಇದ್ದರು.