Advertisement

ರೈತನೇ ದೇಶದ ನಿಜವಾದ ಮಾಲೀಕ: ಬಸವರಾಜ

09:36 PM Jan 21, 2022 | Team Udayavani |

ಹೊಳೆಹೊನ್ನೂರು: ರೈತ ಈ ದೇಶದ ಅನ್ನದಾತ ಹಾಗೂ ನಿಜವಾದ ಮಾಲೀಕ. ರೈತರು ಯಾವತ್ತೂ ಕೊಟ್ಟ ಕುಲವೇ ಹೊರತು ಬೇಡಿದ ಕುಲವಲ್ಲ ಎಂದು ರಾಜ್ಯ ರೈತಸಂಘದ ಗೌರಾವಾಧ್ಯಕ್ಷ ಎಚ್‌. ಆರ್‌. ಬಸವರಾಜಪ್ಪ ತಿಳಿಸಿದರು.

Advertisement

ಶಿವಮೊಗ್ಗ ತಾಲೂಕಿನ ಹೊಳೆ ಮಡಿಕೆಚೀಲೂರನಲ್ಲಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಸಂಘದ ನಾಮಫಲಕ ಉದ್ಘಾಟನೆ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮೊದಲ ಕೂಲಿ ಡಿಸಿ. ಆದರೆ ಎರಡನೇಯವರಾಗಿ ಎಸ್‌.ಪಿ ಆಗಿದ್ದು, ಇನ್ನುಳಿದರು ಕೆಳ ಅಂಕಿ-ಅಂಶಗಳನ್ನು ಹೊಂದಿರುತ್ತಾರೆ. ಅವರಿಗೆಲ್ಲರೂ ಮೇಲಾಗಿ ರೈತನಿದ್ದು, ಅವರಿಗೆ ಪ್ರತಿಯೊಂದು ಸೌಲಭ್ಯ ಹಾಗೂ ಸಂಬಳವನ್ನು ನೀಡುವವರು ರೈತರೇ ಆಗಿದ್ದಾರೆ ಎಂದರು.

1960ರಲ್ಲಿ ಬೇರೆ ದೇಶಗಳಿಂದ ಗೋದಿ, ಅಕ್ಕಿ ಹಾಗೂ ಇನ್ನಿತರೆ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ನಂತರ ಸರ್ಕಾರವೇ ರೈತರ ಮನೆ ಬಾಗಿಲಿಗೆ ಬಂದು ಬ್ಯಾಂಕ್‌ ಗಳ ಮುಖಾಂತರ ಸಾಲ ಹಾಗೂ ಕೃಷಿ ಚಟುವಟಿಕೆಗೆ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ನೀಡಿ, ಇಂದು ರೈತರನ್ನು ಸಾಲಗಾರರು ಎಂಬ ಹಣೆಪಟ್ಟಿಯನ್ನು ಕೊಟ್ಟಿದ್ದಾರೆ ಎಂದು ಆರೋಪಿಸಿದರು. ಈಗಾಗಲೇ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ನಂತರ ಅದನ್ನು ವಾಪಸ್‌ ಪಡೆಯುವ ಮುಖಾಂತರ ರೈತಸಂಘದ ಮಹತ್ವವನ್ನು ತಿಳಿಸಿದೆ.

ಅಲ್ಲದೇ ಸಂಘಟನೆಯೂ ಬಲಿಷ್ಠವಾದಲ್ಲಿ ಯಾವ ಸರ್ಕಾರ ಬಂದರೂ ಸಹ ಏನು ಮಾಡಲು ಸಾಧ್ಯವಾಗವುದಿಲ್ಲ. ಹೆಚ್ಚು ಮಹಿಳೆಯರನ್ನು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಬೇಕು ಎಂದರು. ನನಗೆ ಅ ಧಿಕಾರದ ಆಸೆಯಿಲ್ಲ. ಆ ರೀತಿ ಇದ್ದಿದ್ದರೆ ನನಗೆ ಯಡಿಯೂರಪ್ಪ ಹಾಗೂ ಎಚ್‌ .ಡಿ. ಕುಮಾರಸ್ವಾಮಿ ಅವರು ಮನೆಗೆ ಬಂದು ತಮ್ಮ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪ ರ್ಧಿಸುವಂತೆ ಮನವಿ ಮಾಡಿದ್ದರು. ಆದರೆ ನನಗೆ ಅದರಲ್ಲಿ ಆಸಕ್ತಿಯಿಲ್ಲ ಇರಲಿಲ್ಲ. ಅಲ್ಲದೇ ಸಂಘಟನೆಯನ್ನು ಬಿಟ್ಟು ಹೋಗುವ ಮನಸ್ಸು ಇಲ್ಲ ಎಂದರು.

ಈಗಾಗಲೇ ಗ್ರಾಪಂಗಳಿಂದ ಕಸ ವಿಲೇವಾರಿ ಮಾಡಲು ತಿಂಗಳಿಗೆ ರೂ. 50 ವಸೂಲಿ ಮಾಡಲಾಗುತ್ತಿದೆ. ಅಲ್ಲದೇ ಕುಡಿಯುವ ನೀರಿಗೆ ಹೊಸದಾಗಿ ಪೈಪ್‌ಲೈನ್‌ ಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಮೀಟರ್‌ ಅಳವಡಿಸಿ ನಂತರ ಅದರ ಬೆಲೆಯನ್ನು ದ್ವಿಗುಣ ಮಾಡಲಾಗುತ್ತದೆ ಎಂದು ಆರೋಪಿಸಿದರು. ರೈತಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ. ರಾಘವೇಂದ್ರ, ಶಿವಮೊಗ್ಗ ತಾಲೂಕು ಅಧ್ಯಕ್ಷ ಯಲವಟ್ಟಿ ಚಂದ್ರಪ್ಪ, ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ರುದ್ರೇಶ್‌, ಭದ್ರಾವತಿ ತಾಲೂಕು ಅಧ್ಯಕ್ಷ ಜಿ.ಎನ್‌. ಪಂಚಾಕ್ಷರಪ್ಪ, ಶೇಖರಪ್ಪ, ಶಿವಯ್ಯ, ಪಿ.ಈ. ಚಂದ್ರಪ್ಪ, ಜ್ಞಾನೇಶ್‌, ರಮೇಶಪ್ಪ, ಶೇಖರಪ್ಪ, ಎಂ.ಜಿ. ಶೇಖರಪ್ಪ, ಇಂದಿರಾ ಶೇಖರಪ್ಪ, ಸದಸ್ಯರಾದ ಎಂ.ಜಿ. ರವಿ, ಮಲ್ಲೇಶಪ್ಪ ಬಿ. ಇನ್ನಿತರರು ಇದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next