ಯಲಬುರ್ಗಾ: ನೀರಿನ ಸಮಸ್ಯೆ, ನಿರ್ವಹಣೆ ಕೊರತೆಯಿಂದ ತಾಲೂಕಿನ ಬಂಡಿ ಗ್ರಾಮದ ಸಸ್ಯಕ್ಷೇತ್ರದಲ್ಲಿರುವ ಗಿಡ ಮರಗಳು ಒಣಗುತ್ತಿವೆ.
ಈ ಸಸ್ಯಕ್ಷೇತ್ರವನ್ನು 1988ರಲ್ಲಿ ಆರಂಭಿಸಲಾಗಿದೆ. ಇದು 15 ಎಕರೆ ವಿಸ್ತೀರ್ಣವಿದೆ. ಇಲ್ಲಿ 150 ಮಾವು, 150 ಚಿಕ್ಕು, 100 ಪೇರಲ ಗಿಡಗಳಿವೆ. ತೋಟಗಾರಿಕೆ ಇಲಾಖೆ ನಿರ್ವಹಣೆಯ ಹೊಣೆ ಹೊತ್ತಿದೆಯಾದರೂ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗಿಲ್ಲ. ಹೀಗಾಗಿ ಮರಗಳು ಒಣಗಿ ನಿಂತಿವೆ.
ಪ್ರತಿ ವರ್ಷ ಈ ಸಸ್ಯಕ್ಷೇತ್ರ 4ರಿಂದ 5 ಲಕ್ಷ ರೂ. ಆದಾಯ ತಂದು ಕೊಡುತಿತ್ತು. ಉತ್ಪನ್ನವೂ ಅಧಿಕವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ಉತ್ಪನ್ನ ದೊರಕುತ್ತಿಲ್ಲ. ಸಸ್ಯ ಕ್ಷೇತ್ರದ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ಪ್ರತಿ ವರ್ಷ ಸರ್ಕಾರ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತದೆಯಾದರೂ ಯಾವುದೇ ಪ್ರಯೋಜನ ಇಲ್ಲ. ತೋಟಗಾರಿಕೆ ಅಧಿಕಾರಿಗಳು ಸಸ್ಯ ಕ್ಷೇತ್ರದ ಉಳಿವಿಗೆ ಶೀಘ್ರವೇ ಮುಂದಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
•ಮಲ್ಲಪ್ಪ ಮಾಟರಂಗಿ
Advertisement
ಕ್ಷೇತ್ರದಲ್ಲಿ 3 ಬೋರ್‌ವೆಲ್ಗಳಿವೆ. ಬೋರವೆಲ್ ಮೂಲಕ ನೀರು ಅಧಿಕ ಪ್ರಮಾಣದಲ್ಲಿ ಬರುತ್ತಿಲ್ಲ. ನೀರಿನ ಪ್ರಮಾಣ ಕಡಿಮೆಯಾಗಿದೆ. ತೋಟಗಾರಿಕೆ ಸಸ್ಯ ಕ್ಷೇತ್ರಕ್ಕೆ ಮತ್ತೂಂದು ಬೋರವೆಲ್ ಕೊರೆಸಬೇಕು ಇಲ್ಲವೇ ಪಕ್ಕದ ರೈತರ ಜಮೀನುಗಳ ಮೂಲಕ ಪೈಪ್‌ಲೈನ್ ಮಾಡಿಕೊಂಡು ನೀರು ಪಡೆಯಬೇಕು ಇಲ್ಲವೇ ಟ್ಯಾಂಕರ್ ಮೂಲಕ ನೀರು ತಂದು ಸಸ್ಯ, ಗಿಡ ಮರಗಳ ಉಳಿವಿಗೆ ಅಧಿಕಾರಿಗಳು ಮುಂದಾಗಬೇಕು.